Princess treatment vs bare minimum
- ಸಂಬಂಧಗಳಲ್ಲಿ ಇರಬೇಕಾದ ಮೂಲಭೂತ ಗೌರವವನ್ನು 'ಪ್ರಿನ್ಸೆಸ್ ಟ್ರೀಟ್‌ಮೆಂಟ್' ಎಂದು ಇಂದಿನ ಟ್ರೆಂಡ್
- ಸಾಮಾಜಿಕ ಜಾಲತಾಣಗಳ ರೀಲ್ಸ್ ಮತ್ತು ಪ್ರಭಾವದಿಂದಾಗಿ ಬದಲಾಗುತ್ತಿರುವ ಡೇಟಿಂಗ್ ನಿರೀಕ್ಷೆಗಳು.
- ಕನಿಷ್ಠ ಕಾಳಜಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿ ಟ್ರೆಂಡ್ ಮಾಡುತ್ತಿದೆ ಈ ಜೆನ್ಜಿ
ಈ ಹಿಂದೆ ಇದ್ದ ಪಿತೃಪ್ರಧಾನ ಕುಟುಂಬ ಪದ್ಧತಿ ಕಾಲಕ್ರಮೇಣ ನಗರಗಳಲ್ಲಿ ಅಳಿಸಿ ಹೋಗುತ್ತಿದೆ. ಇಂದಿನ ಡೇಟಿಂಗ್-ಚಾಟಿಂಗ್ ಎನ್ನುವ ಆಧುನಿಕ ಜಗತ್ತಿನಲ್ಲಿ ಪ್ರಿನ್ಸೆಸ್ ಟ್ರೀಟ್‌ಮೆಂಟ್ ಎಂದು ಹೊಸದೊಂದು ಟ್ರೆಂಡ್ ಶುರುವಾಗಿದೆ. ಸಂಬಂಧಗಳು ಗಟ್ಟಿಯಾಗಿ ನೆಲೆಯೂರಲು ಇರಬೇಕಾದ ಸಾಮಾನ್ಯ ಮೂಲಭೂತ ಮರ್ಯಾದೆಯನ್ನು ಸಹ 'ಪ್ರಿನ್ಸೆಸ್ ಟ್ರೀಟ್‌ಮೆಂಟ್' ಎಂದು ಬಿಂಬಿಸಲಾಗುತ್ತಿದೆ.
ಮರ್ಯಾದೆ, ಪ್ರಾಮಾಣಿಕತೆ ಇದ್ದರೆ ಮಾತ್ರ ಸಂಬಂಧಗಳು ಪರಸ್ಪರ ಒಪ್ಪಿ ನಡೆಯುತ್ತದೆ ಎನ್ನುವುದು ಹಳೆ ಕಾಲದ ನಂಬಿಕೆಗಳು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಈ ಪ್ರಿನ್ಸಸ್ ಟ್ರೀಟ್‌ಮೆಂಟ್ ಪ್ರಕಾರ, ಮನೆಗೆ ಬರುತ್ತಲೇ ಸಂಗಾತಿಯು ಬಾಗಿಲು ತೆರೆಯುವುದು, ಸಮಯಕ್ಕೆ ಸರಿಯಾಗಿ ಮೆಸೇಜ್ ಮಾಡುವುದು, ಚೆನ್ನಾಗಿದ್ದೀಯಾ ಎಂದು ವಿಚಾರಿಸುವುದು, ಕಾಳಜಿ ತೋರುವುದು ಅಥವಾ ಜನ್ಮದಿನವನ್ನು ನೆನಪಿನಲ್ಲಿಟ್ಟುಕೊಳ್ಳುವಂತಹ ಪ್ರಾಥಮಿಕ ಗುಣಗಳನ್ನು ಕೂಡ ದೊಡ್ಡ ಸಾಧನೆ ಎನ್ನಲಾಗುತ್ತದೆ. ಈ ಟ್ರೆಂಡಿನ ಬಗ್ಗೆ ಕೆಲವರಿಂದ ವಿರೋಧವೂ ಇದೆ.
ಪುರುಷರು ಮಾಡಬೇಕಾಗಿದ್ದು ಇಷ್ಟು
ಪಿತೃಪ್ರಧಾನ ಸಮಾಜವೇ ಹೀಗೆ ಹೊರಗಡೆ ಹೆಣ್ಣು ಎಷ್ಟೇ ದುಡಿದು, ದಣಿದು ಮನೆಗೆ ಬಂದರು ಸಹ ಮಕ್ಕಳ ಊಟ, ಓದು ಎಲ್ಲ ವಿಚಾರದಲ್ಲಿಯೂ ತಲೆ ಕೆಡಿಸಿಕೊಂಡು 11ಕ್ಕೆ ಮಲಗಿ ಮತ್ತೆ ಮುಂಜಾನೆ 5ಕ್ಕೆ ಮೇಲೇಳಬೇಕು. ಮತ್ತೂ ಇದನ್ನು ಹೆಣ್ಮಕ್ಕಳ ಧರ್ಮ ಎಂದು ಹೇಳಲಾಗುತ್ತದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಕೆಲ ಮಹಿಳೆಯರು ಇವನ್ನು ಬದಿಗೊತ್ತಿ. ಪುರುಷರು ನಿಜವಾಗಿಯೂ ಮಾಡಬೇಕಾದ ಕೆಲಸಗಳೇನು?. ಮಹಿಳೆಯರಿಗೆ ನೆರವಾಗಬೇಕಾದದ್ದು ಯಾವ ವಿಚಾರಕ್ಕೆ ಎನ್ನುವ ಬಗ್ಗೆ ಅರ್ಥೈಸಲು ಶುರು ಮಾಡಿದ್ದಾರೆ.
ಪುರುಷರು ನಿಜಕ್ಕೂ ಮಹಿಳೆಯರಿಗೆ ಮಾಡಬೇಕಾದದ್ದು ದುಡಿದ ಹಣ ತಂದು ಕೊಡುವುದು, ಹುಣ್ಣಿಮೆಗೋ ಅಥವಾ ಅಮವಾಸ್ಯೆಗೋ ಒಂದು ಸೀರೆಯನ್ನು ತಂದು ಕೊಡುವುದು, ನೈಟ್ ಔಟ್ ಡಿನ್ನರ್, ವೀಕೆಂಡ್ ಫುಡ್ ಆರ್ಡರ್, ಸುತ್ತಾಟ ಅಲ್ಲ. ಸುಸ್ತಾಗಿ ಬಂದಾಗ ಕದ ತೆಗೆದು ನೀರೋ, ಕಾಫಿ ಕೊಟ್ಟೋ ಉಪಚಾರ ಮಾಡೋದು
ಪ್ರಿನ್ಸಸ್ ಟ್ರೀಟ್‌ಮೆಂಟ್ ಅಂದ್ರೆ ಇದು
ನಿಗದಿತ ಸಮಯಕ್ಕೆ ಸಂಗಾತಿ ಬರದಿದ್ದಾಗ ಎಲ್ಲಿದ್ದೀಯಾ?, ಪಿಕಪ್ ಮಾಡೋದಾ ಎಂದು ವಿಚಾರಿಸಿ ಆಕೆಯನ್ನು ತಾನು ಎಷ್ಟು ಸುರಕ್ಷತವಾಗಿಟ್ಟುಕೊಳ್ಳಬಹುದು ಎನ್ನುವ ಭರವಸೆಯನ್ನು ಆಕೆಗೆ ಮೂಡಿಸುವುದು. ಸುಸ್ತಾದಾಗ ಅಡುಗೆ ಮಾಡುವುದು...ಅಡುಗೆ ಮಾಡುವಾಗ ನೆರವಾಗುವುದು,. ಬಟ್ಟೆ ಒಗೆದು ಒಣ ಹಾಕಿದಾಗ ತರುವುದು, ಮನೆ ಕೆಲಸದಲ್ಲಿ ಪಾಲುದಾರಿಕೆ ತೆಗದುಕೊಳ್ಳುವುದು, ತರಕಾರಿ ತರುವಾಗ ಜತೆಯಾಗುದು. ಚಹ ಆಸ್ವಾದಿಸುವಾಗ ನಗುತ್ತಾ ಮಾತನಾಡುತ್ತಾ ದಿನ ಕಳೆಯುವುದು. ಸಣ್ಣಪುಟ್ಟ ಕೆಲಸಗಳಿಗೂ ಸಹಾಯ ಮಾಡುವುದು ಇದು ನಿಜಕ್ಕೂ ಪ್ರಿನ್ಸಸ್ ಟ್ರೀಟ್‌ಮೆಂಟ್ ಎನ್ನುತ್ತಾರೆ ನೆಟ್ಟಿಗರು
ಸಂಶೋಧನೆಗಳು ಮತ್ತು ಸಂಬಂಧ ತಜ್ಞರ ಪ್ರಕಾರ, ಇಂದಿನ ಯುವಜನರು ಕಳಪೆ ಅಥವಾ ಹಾನಿಕಾರಕ ಸಂಬಂಧಗಳನ್ನು ಅತಿಯಾಗಿ ಅನುಭವಿಸಿರುವುದರಿಂದ, ಸಂಗಾತಿಯ ಕಡೆಯಿಂದ ಸ್ವಲ್ಪವೇ ಕಾಳಜಿ ಸಿಕ್ಕರೂ ಅದನ್ನು ದೊಡ್ಡ 'ಪ್ರಿನ್ಸೆಸ್ ಟ್ರೀಟ್‌ಮೆಂಟ್' ಎಂದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಇದರಿಂದಾಗಿ ಸಂಬಂಧದಲ್ಲಿ ಇರಲೇಬೇಕಾದ ಮೂಲಭೂತ ನಿರೀಕ್ಷೆಗಳ ಮಟ್ಟವು ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಣ್ಣಪುಟ್ಟ ಪ್ರೀತಿಯ ದೃಶ್ಯಗಳನ್ನು ಆಚರಿಸುವುದು ತಪ್ಪಲ್ಲವಾದರೂ, ಸಂಗಾತಿಯಿಂದ ಸಿಗಬೇಕಾದ ಮೂಲಭೂತ ಗೌರವ ಮತ್ತು ಪ್ರೀತಿಯನ್ನು ಅಸಾಧಾರಣವಾದದ್ದು ಎಂದುಕೊಂಡು ತೃಪ್ತಿಪಟ್ಟುಕೊಳ್ಳುವ ಬದಲು, ಆರೋಗ್ಯಕರ ಸಂಬಂಧದ ನೈಜ ಮಾನದಂಡಗಳನ್ನು ಅರ್ಥಮಾಡಿಕೊಳ್ಳುವುದು ಇಂದಿನ ತುರ್ತಾಗಿದೆ, (ಏಜೆನ್ಸೀಸ್).