October birth month kids personality(ಎಐ ಚಿತ್ರ) 
ಲೈಫ್‌ಸ್ಟೈಲ್

ನಿಮ್ಮ ಮಗು ಅಕ್ಟೋಬರ್‌ನಲ್ಲಿ ಜನಿಸಿದೆಯಾ?; ಈ ವಿಶಿಷ್ಟ ಗುಣಗಳು ಖಂಡಿತ ಇರುತ್ತವೆ!..October

  • ಅಕ್ಟೋಬರ್‌ನಲ್ಲಿ ಜನಿಸಿದ ಮಕ್ಕಳಲ್ಲಿರುವ ಅತ್ಯುತ್ತಮ ಗುಣಗಳು ಯಾವುವು?

  • ಅಕ್ಟೋಬರ್​ನಲ್ಲಿ ಜನಿಸಿದ ಮಕ್ಕಳ ಗುಣ ಲಕ್ಷಣ ಹೇಗಿರುತ್ತದೆ?

  • ಅಕ್ಟೋಬರ್​ನಲ್ಲಿ ಜನಿಸಿದವರು ಶಾಂತ ಸ್ವಭಾವದ್ದು, ಎಲ್ಲರನ್ನೂ ಸಂತೋಷವಾಗಿ ಇಡಲು ಬಯಸುತ್ತಾರೆ

ಅಕ್ಟೋಬರ್​ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು, ಮಕ್ಕಳು ಇತರರಿಗಿಂತ ವಿಭಿನ್ನವಾದ ವಿಶೇಷ ಗುಣ ಲಕ್ಷಣ ಹೊಂದಿರುತ್ತಾರೆ. ಈ ಮಾಸದಲ್ಲಿ ಮಹಾನ್​ ವ್ಯಕ್ತಿಗಳು ಜನಿಸಿರುವುದೇ ಇದಕ್ಕೆ ಉದಾಹರಣೆ. ಮಹಾತ್ಮ ಗಾಂಧಿ, ಬಿಲ್ ಗೇಟ್ಸ್ ಮತ್ತು ಆರ್.ಕೆ. ನಾರಾಯಣ್ ಅವರಂತಹ ದಿಗ್ಗಜರು ಈ ತಿಂಗಳಲ್ಲಿ ಜನಿಸಿದ್ದಾರೆ. ತಿಂಗಳು ನವರಾತ್ರಿ ಮತ್ತು ದುರ್ಗಾ ಪೂಜೆಯಂತಹ ಹಬ್ಬಗಳೊಂದಿಗೆ ಅತ್ಯಂತ ಪವಿತ್ರವಾದ ತಿಂಗಳುಗಳಲ್ಲಿ ಒಂದಾಗಿದೆ. ಅಕ್ಟೋಬರ್​ನಲ್ಲಿ ಜನಿಸಿದವರಲ್ಲಿ ಯಾವೆಲ್ಲ ಗುಣ ಲಕ್ಷಣಗಳಿವೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಸ್ನೇಹಪರ ಸ್ವಭಾವದವರು

ಅಕ್ಟೋಬರ್​ನಲ್ಲಿ ಜನಿಸಿದ ಮಕ್ಕಳು ಸ್ನೇಹಪರ ಸ್ವಭಾವವನ್ನು ಹೊಂದಿರುವವರಾಗಿರುತ್ತಾರೆ. ಪ್ರತಿ ವಿಚಾರದಲ್ಲಿಯೂ ಶಾಂತ ಸ್ವಬಾವದಿಂದ ಕೂಡಿರುತ್ತಾರೆ. ದುಃಖ ಅಥವಾ ನೋವು ಇವರನ್ನು ಕುಗ್ಗಿಸಲು ಬಿಡುವುದಿಲ್ಲ. ತಮ್ಮ ಸುತ್ತ ಮುತ್ತ ಇರುವ ಜನರನ್ನು ಎಲ್ಲ ಸಮಯದಲ್ಲಿಯೂ ಸಂತೋಷವಾಗಿಟ್ಟುಕೊಳ್ಳಲು ಬಯಸುತ್ತಾರೆ.

ರೊಮ್ಯಾಂಟಿಕ್ ಸ್ವಭಾವದವರು

ಅಕ್ಟೋಬರ್​ನಲ್ಲಿ ಜನಿಸಿದ ಮಕ್ಕಳು ತಮ್ಮ ಜೀವನದಲ್ಲಿ ಪ್ರೀತಿಗೆ ಪವಿತ್ರ ಸ್ಥಾನವನ್ನು ನೀಡುತ್ತಾರೆ. ಇವರ ಆಕರ್ಷಕ ಸ್ವಭಾವವು ಎಲ್ಲರನ್ನು ಸೆಳೆದುಕೊಳ್ಳುವಂತೆ ಮಾಡುತ್ತದೆ. ಹಾಗೂ ಇವರ ಈ ಆಕರ್ಷಕ ಸ್ವಭಾವವು ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಂತೆ ಮಾಡುತ್ತದೆ.

ಇಚ್ಛಾಶಕ್ತಿ ಉಳ್ಳವರು

ಅಕ್ಟೋಬರ್​ನಲ್ಲಿ ಜನಿಸಿದವರು ಯಾವುದಾದರೂ ಕೆಲಸವನ್ನು ಆಯ್ಕೆ ಮಾಡಿಕೊಂಡರೆ, ಅದರಲ್ಲಿ ಆತ್ಮವೊಶ್ವಾಸವಿಟ್ಟುಕೊಂಡು ಕೆಲಸ ಮಾಡುತ್ತಾರೆ. ಸರಿಯಾದ ಮನೋಭಾವ ಮತ್ತು ಕೆಲಸ ಪೂರ್ಣಗೊಳ್ಳುವವರೆಗೆ ಹಿಂದೆ ಸರಿಯದ ಛಲ ಇವರಲ್ಲಿರುತ್ತದೆ.

ಪ್ರಾಮಾಣಿಕತೆ ಹೊಂದಿರುವವರು

ಅಕ್ಟೋಬರ್​ನಲ್ಲಿ ಜನಿಸಿದ ಮಕ್ಕಳೊಂದಿಗೆ ಅಥವಾ ಯಾವುದೇ ವ್ಯಕ್ತಿಯೊಂದಿಗೆ ಸ್ನೇಹ ಮಾಡಿಕೊಂಡರೆ ಅಥವಾ ಪ್ರೀತಿ ಬೆಳೆಸಿಕೊಂಡರೆ, ಎಂದಿಗೂ ಸುಳ್ಳು ಹೇಳಬೇಡಿ. ಇವರು ಪ್ರಾಮಾಣಿಕತೆಯನ್ನು ನಂಬಿ ಬದುಕುತ್ತಾರೆ. ಅವರೆಂದಿಗೂ ಸುಳ್ಳು ಹೇಳುವವರನ್ನು ಸಹಿಸೋದಿಲ್ಲ.

ಕ್ರಿಯೇಟಿವಿಟಿ ಉಳ್ಳವರು.

ಅಕ್ಟೋಬರ್​ನಲ್ಲಿ ಜನಿಸಿದವರು ಹೆಚ್ಚು ಕ್ರಿಯೇಟಿವಿಟಿ ಗುಣವುಳ್ಳವರು. ಪೋಷಕರು ಇವರಲ್ಲಿರುವ ಈ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಅದರಲ್ಲಿ ದೊಡ್ಡ ಸಾಧನೆ ಮಾಡಬಹುದು. ಆ ಎಲ್ಲ ಗುಣವು ಇವರಲ್ಲಿ ಹೆಚ್ಚೇ ಇರುತ್ತದೆ.

ಸವಾಲುಗಳನ್ನು ಸ್ವೀಕರಿಸುವುದು ಇವರ ಗುಣ

ಅಕ್ಟೋಬರ್​ನಲ್ಲಿ ಜನಿಸಿದವರು ಶಾಂತ ಸ್ವಭಾವದವರಾದರೂ, ಇವರು ಸವಾಲುಗಳನ್ನು ಎದುರಿಸಲು ಮತ್ತು ಸ್ವೀಕರಿಸಲು ಹೆಚ್ಚು ಇಷ್ಟಪಡುತ್ತಾರೆ. ಯಾವುದೇ ಸಮಸ್ಯೆ ಎಂದು ಕಾಣಿಸಿಕೊಂಡರೆ ಅದರಿಂದ ಹಿಂಜರಿಯೋದಿಲ್ಲ ಎಂತಲೂ ಹೇಳಬಹುದು, (ಏಜೆನ್ಸೀಸ್).