Apples or Apple juice: ಪ್ರತಿದಿನ ಒಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಇರಬಹುದು ಎಂದು ತಜ್ಞರು ಸಲಹೆ ಕೊಡುತ್ತಾರೆ. ಅಲ್ಲವೇ, ಅದರಂತೆ ಸೇಬು ತಿನ್ನುವುದರಿಂದ ಮತ್ತು ಸೇಬಿನ ರಸ(ಜ್ಯೂಸ್) ಕುಡಿಯುವುದರಿಂದ ಯಾವುದು ಉತ್ತಮ ಎಂದ ಎಂದಾದರೂ ಯೋಚನೆ ಮಾಡಿದ್ದರೀರಾ? ತಿಳಿಯೋಣ ಬನ್ನಿ..
ಇದನ್ನೂ ಓದಿ:ಅವಳನ್ನು ಕಡೆಯದಾಗಿ ನೋಡಿದ್ದೇ ಅಲ್ಲಿ…! ಮೊದಲ ಪ್ರೇಮಕಥೆ ಬಗ್ಗೆ ಮೌನ ಮುರಿದ ನಟ ಶಿವಕಾರ್ತಿಕೇಯನ್ | Love Story
ಇಡೀ ಹಣ್ಣನ್ನು ನೇರವಾಗಿ ತಿನ್ನುವುದರಿಂದ ಜ್ಯೂಸ್ಗಿಂತ ಅಧಿಕ ಪರಿಣಾಮಕಾರಿ ಎಂದು ತಜ್ಞರ ಅಭಿಪ್ರಾಯವಾಗಿದೆ. ಹೌದು, ಸೇಬಿನ ಹಣ್ಣಿ ಖನಿಜಗಳು, ಪೈಬರ್ ಮತ್ತು ಸಂಪೂರ್ಣ ಜೀವಸತ್ವಗಳು ಇರುತ್ತದೆ. ಇದನ್ನು ತಿನ್ನುವುದರಿಂದ ಅಧಿಕ ಪೊಷಕಾಂಶ ದೇಹಕ್ಕೆ ದೊರೆಯುತ್ತದೆ. ಅಲ್ಲದೆ, ಆರೋಗ್ಯ ವೃದ್ಧಿಸುವಲ್ಲಿ ಸೇಬು ನೇರ ಪರಿಣಾಮ ಬೀರುತ್ತದೆ.
ಸೇಬು ಹಣ್ಣಿನ ಜ್ಯೂಸ್ ಸೇವನೆ ಮಾಡುವುದರಿಂದ ಹಣ್ಣಿನಷ್ಟು ವಿಟಮಿನ್ಗಳು(ಕ್ಯಾಲೋರಿ)ದೇಹಕ್ಕೆ ಸಿಗುವುದಿಲ್ಲ. ಆದಕ್ಕೆ ಕಾರಣವೂ ಇದೆ. ನಾಲ್ಕೈದು ಹಣ್ಣುಗಳಿಂದ ಜ್ಯೂಸ್ ತಯಾರಿಸುವಾಗ ಕೇಂದ್ರಿಕೃತವಾಗುತ್ತದೆ. ಅಂದರೆ, ಎಲ್ಲಾ ಮಿಕ್ಸ್ ಆಗುತ್ತದೆ. ಇದರಿಂದಾಗಿ, ಸಕ್ಕರೆ ಮತ್ತು ಕ್ಯಾಲೋರಿ ಅಂಶವನ್ನು ಗಮನರ್ಹವಾಗಿ ಹೆಚ್ಚಿಸುತ್ತದೆ. ಇದರಿಂದ ಆರೋಗ್ಯಕ್ಕೆ ಹಾನಿಕಾರಕ. ಹೆಚ್ಚುವರಿಯಾಗಿ, ಸೇಬುಗಳು ಕರಗುವ ನಾರಿನಂಶವನ್ನು ಹೊಂದಿರುತ್ತವೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ರಸ ತೆಗೆಯುವ ಸಮಯದಲ್ಲಿ ಈ ನಾರು ಕಳೆದುಹೋಗುತ್ತದೆ.
ಪ್ರತಿದಿನ ಕೆಂಪು ಅಥವಾ ಹಸಿರು ಸೇಬನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ರೋಗಗಳ ಅಪಾಯ ಕಡಿಮೆಯಾಗುತ್ತದೆ. ಸೇಬಿನ ಸಿಪ್ಪೆಯಲ್ಲಿರುವ ಪ್ರೋಟಿನ್ ಮತ್ತು ಇತರ ಜೀರ್ಣಕಾರಿ ಕಿಣ್ವಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ.ಅಲ್ಲದೆ, ಮಲಬದ್ಧತೆ ಮತ್ತು ಅನಿಲದಂತಹ ಸಮಸ್ಯೆಗಳನ್ನು ತಡೆಯುತ್ತವೆ. ಆದಾಗ್ಯೂ, ಸೇಬಿನ ರಸವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯಲ್ಲಿ ತ್ವರಿತ ಏರಿಕೆ ಉಂಟಾಗುತ್ತದೆ, ಇದು ಯಕೃತ್ತಿನ ಮೇಲೆ ಒತ್ತಡವನ್ನು ಬೀರುತ್ತದೆ. ಇಡೀ ಹಣ್ಣನ್ನು ತಿನ್ನುವುದರಿಂದ ಈ ಸಮಸ್ಯೆ ಉಂಟಾಗುವುದಿಲ್ಲ ಎಂದು ವೈದ್ಯರ ಅಭಿಪ್ರಾಯವಾಗಿದೆ.(ಏಜೆನ್ಸೀಸ್)