- ಹೊಸದಾಗಿ ವಾಟ್ಸಾಪ್ನಲ್ಲಿ ಚಾಟ್ ಮಾಡಲು ನಂಬರ್ ವಿನಿಮಯ ಮಾಡಿಕೊಳ್ಳುವ ಅಗತ್ಯವಿಲ್ಲ
- ಜೂನ್ 29 ರಿಂದ ಯೂಸರ್‌ನೇಮ್ ಮೂಲಕ ವಾಟ್ಸಾಪ್ನಲ್ಲಿ ಚಾಟ್ ಮಾಡಬಹುದಾದ ಫೀಚರ್ ಬಳಕೆಗೆ
- ಅಪರಿಚಿತರಿಂದ ಬರುವ ಸಂದೇಶಗಳನ್ನು ನಿಯಂತ್ರಿಸಲು ಮೆಟಾದಿಂದ ಹೊಸ ಫೀಚರ್ ಜಾರಿ
WhatsApp Username Update:
ಮೆಟಾ ತನ್ನ ವಾಟ್ಸಾಪ್ ಬಳಕೆದಾರರಿಗೆ ಸೃಜನಶೀಲ ಅಪ್ಡೇಟ್ಗಳನ್ನು ಆಗ್ಗಾಗ್ಗೆ ನೀಡುತ್ತಲೇ ಇರುತ್ತದೆ. ವಾಟ್ಸಾಪ್ ಸ್ಟೇಟಸ್, ಇಮೋಜಿ, ಸ್ಟಿಕರ್, ಎಐ ಅವತಾರ್, ಚಾಟ್ ಎಡಿಟ್, ಬ್ರಾಡ್ ಕಾಸ್ಟ್ ಗೌಪ್ಯ ಮಾಹಿತಿ ಹೀಗೆ ಒಂದು ಎರಡಲ್ಲ ಸಾವಿರಾರು ಅಪಡೇಟ್ಗಳನ್ನು ವಾರಕ್ಕೊಮ್ಮೆಯಾದರೂ ಬಳಕೆಗೆ ತರಲಾಗುತ್ತದೆ. ಸದ್ಯ ಮತ್ತೊಂದು ಬದಲಾವಣೆ ಬಗ್ಗೆ ಭಾರತೀಯ ಫಿನ್‌ಟೆಕ್ ಸಂಸ್ಥಾಪಕ ಕುನಾಲ್ ಶಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಭಾರತೀಯ ಫಿನ್‌ಟೆಕ್ ಸಂಸ್ಥಾಪಕ ಕುನಾಲ್ ಶಾ ಅವರು, ಭಾರತದ ಸ್ಟಾರ್ಟ್‌ಅಪ್ ಸಂಸ್ಥಾಪಕ ಕುನಾಲ್ ಶಾ ಅವರು ವಾಟ್ಸಾಪ್‌ನ ನೂತನ ಜಾಗತಿಕ ಮುಖ್ಯಸ್ಥರಾಗಿ ಉಸ್ತುವಾರಿವಹಿಸಿಕೊಂಡ ಬೆನ್ನಲ್ಲೇ, ಗುರುತು ಪರಿಚಯ ಇಲ್ಲದ ವ್ಯಕ್ತಿಗಳೊಂದಿಗೆ ಮಾತನಾಡಲು ನಂಬರ್ ಕೇಳುವ ಅಗತ್ಯವಿಲ್ಲ ಟೆಲಿಗ್ರಾಮ್ನಲ್ಲಿ ಈಗಾಗಲೇ ಬಳಕೆಗೆ ಇರುವ ಯೂಸರ್ನೇಮ್ನಂತೆ ವಾಟ್ಸಾಪ್ನಲ್ಲಿಯೂ ಫೀಚರ್ ತರಲಾಗಿದೆ ಎಂದು ಹೇಳಿದ್ದಾರೆ.
ನಾವು ಗುರುತು ಪರಿಚಯ ಇಲ್ಲದ ವ್ಯಕ್ತಿಗಳೊಂದಿಗೆ ಕೆಲವೊಮ್ಮೆ ಮಾತನಾಡಬೇಕಾಗಿರುತ್ತದೆ. ಹೀಗಾಗಿ ಅವರ ನಂಬರ್ ಪಡೆದುಕೊಂಡು ಅದನ್ನು ಸೇವ್ ಮಾಡಿ ನಂತರ ಮಾತನಾಡುವುದು ಇಲ್ಲಿಯವರೆಗೂ ಅನಿವಾರ್ಯವಾಗಿತ್ತು. ಕೆಲವೊಮ್ಮೆ ಇದರಿಂದ ಸುರಕ್ಷತೆಯನ್ನು ಪ್ರಶ್ನೆ ಮಾಡುವ ಪರಿಸ್ಥಿತಿ ಎದುರಾಗುತ್ತಿತ್ತು. ಆದರೆ, ಇನ್ಮುಂದೆ ಅಷ್ಟೆಲ್ಲಾ ಮುಜುಗರದಿಂದ ಚಾಟ್ ಮಾಡೋ ಅಗತ್ಯವಿಲ್ಲ. ನಿಮಗೆ ಬೇಡವಾದವರ ಸಂಖ್ಯೆ ಸೇವ್ ಮಾಡಿಕೊಳ್ಳುವ ಅನಿವಾರ್ಯವೂ ಇಲ್ಲ. ಈಗಾಗಲೇ ಇನ್‌ಸ್ಟಾಗ್ರಾಮ್ ಅಥವಾ ಎಕ್ಸ್ ನಂತೆ ಕೇವಲ ಒಂದು ವಿಶಿಷ್ಟ 'ಯೂಸರ್‌ನೇಮ್' ಬಳಸಿ ಚಾಟ್ ಮಾಡಬಹುದಾದ ವೈಶಿಷ್ಟ್ಯವನ್ನು ಮೆಟಾ ಪರಿಚಯಿಸಿದೆ. ಇದು ವಾಟ್ಸಾಪ್ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ತಂದ ದೊಡ್ಡ ಗೌಪ್ಯತಾ ಫೀಚರ್ ಆಗಿದೆ.
ಸಿಇಒ ಕುನಾಲ್ ಶಾ ಹೇಳಿದ್ದೇನು?
ಉದ್ಯಮಿ ಕುನಾಲ್ ಶಾ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು ಹೀಗೆ, ಜಗತ್ತಿಗೆ ಈ ವೈಶಿಷ್ಟ್ಯ ಬಿಡುಗಡೆಯಾಗುವ ಮುನ್ನವೇ ನಾನು ವಾಟ್ಸಾಪ್ ಸೇರಿ ನನ್ನ ಯೂಸರ್‌ನೇಮ್ ಪಡೆದುಕೊಂಡಿದ್ದೇನೆ. ಈಗ ನಿಮ್ಮ ಸರದಿ," ಎಂದು ಬಳಕೆದಾರರಿಗೆ ತಮ್ಮಿಷ್ಟದ ಹೆಸರನ್ನು ಕಾಯ್ದಿರಿಸಲು ಕರೆ ನೀಡಿದ್ದಾರೆ.
ಯೂಸರ್‌ನೇಮ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ನೀವು ಅಪರಿಚಿತರೊಂದಿಗೆ ಚಾಟ್ ಮಾಡಲು ಅಥವಾ ಅವರು ನಿಮ್ಮನ್ನು ಸಂಪರ್ಕಿಸಲು ಅಥವಾ ಟೆಕ್ಸ್ಟ್ ಮಾಡಲು ಬಯಸಿದರೆ, ಇಬ್ಬರಿಗೂ ನಿಮ್ಮ ನಿಮ್ಮ ಯೂಸರ್ ನೇಮ್ ತಿಳಿದರಬೇಕು ಉದಾಹರಣೆ: ಅಕ್ಷತಾ ಮಾಮ್ಸ್ ಗರ್ಲ್, ಅಕ್ಷತಾ ತಿಪಟೂರು, ಶೀ ಕಾಲ್ಸ್ ಮೀ ಆಂಗ್ರಿ ಗರ್ಲ್ ಈ ರೀತಿಯ ಯೂಸರ್‌ನೇಮ್ ಬಳಕೆ ಮಾಡಿಕೊಂಡಿದ್ದರೆ ಅದರ ಮೂಲಕ ಮಾತನಾಡಿದಬಹುದಾಗಿದೆ.
ಇಲ್ಲಿ ಯಾವುದೇ ಸಾರ್ವಜನಿಕ ಡೈರೆಕ್ಟರಿ ಅಥವಾ ಸರ್ಚ್ ಪೇಜ್ ಇರುವುದಿಲ್ಲ. ಅಂದರೆ, ಯಾರಾದರೂ ನಿಮ್ಮೊಂದಿಗೆ ಹೊಸದಾಗಿ ಚಾಟ್ ಮಾಡಬೇಕಾದರೆ ಅವರಿಗೆ ನಿಮ್ಮ ನಿಖರವಾದ ಯೂಸರ್‌ನೇಮ್ ತಿಳಿದಿರಲೇಬೇಕು. ನಿಮ್ಮ ಹಳೆಯ ಚಾಟ್‌ಗಳು ಮತ್ತು ಕಾಂಟ್ಯಾಕ್ಟ್‌ಗಳು ಎಂದಿನಂತೆ ಫೋನ್ ನಂಬರ್ ಮೂಲಕವೇ ಮುಂದುವರಿಯಲಿವೆ. ಅಲ್ಲದೆ, ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಬ್ಲಾಕ್ ಮತ್ತು ರಿಪೋರ್ಟ್ ಮಾಡುವ ಆಯ್ಕೆಗಳು ಎಂದಿನಂತೆ ಇರಲಿವೆ. ಹೆಚ್ಚುವರಿ ಸುರಕ್ಷತೆಗಾಗಿ ವಾಟ್ಸಾಪ್ 'ಯೂಸರ್‌ನೇಮ್ ಕೀ' ಎಂಬ ಐಚ್ಛಿಕ ವೈಶಿಷ್ಟ್ಯವನ್ನು ನೀಡುತ್ತಿದೆ. ಇದನ್ನು ಸಕ್ರಿಯಗೊಳಿಸಿದರೆ, ಮೊದಲ ಬಾರಿಗೆ ನಿಮ್ಮ ಯೂಸರ್‌ನೇಮ್ ಬಳಸಿ ಮೆಸೇಜ್ ಮಾಡುವವರು ನೀವು ನಿಗದಿಪಡಿಸಿದ ಸೆಕ್ಯೂರಿಟಿ ಕೀ ಯನ್ನು ನಮೂದಿಸಬೇಕಾಗುತ್ತದೆ.
ಯೂಸರ್‌ನೇಮ್ ರಿಸರ್ವ್ ಮಾಡುವುದು ಹೇಗೆ?
- ಜೂನ್ 29 ರಿಂದ ಹಂತ-ಹಂತವಾಗಿ ಈ ರಿಸರ್ವೇಶನ್ ಪ್ರಕ್ರಿಯೆ ಜಾಗತಿಕವಾಗಿ ಆರಂಭವಾಗಿದೆ. ನಿಮ್ಮ ಪ್ರದೇಶಕ್ಕೆ ಈ ಸೌಲಭ್ಯ ಲಭ್ಯವಾದಾಗ ಆ್ಯಪ್‌ನಲ್ಲಿ ನೋಟಿಫಿಕೇಶನ್ ಬರಲಿದೆ.
- ವಾಟ್ಸಾಪ್ ಅಪ್ಡೇಟ್ ಮಾಡಿಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆ್ಯಪ್ ಸ್ಟೋರ್‌ಗೆ ಹೋಗಿ ನಿಮ್ಮ ವಾಟ್ಸಾಪ್ ಅನ್ನು ಇತ್ತೀಚಿನ ಆವೃತ್ತಿಗೆಅಪ್ಡೇಟ್ ಮಾಡಿಕೊಳ್ಳಿ.
- ಸೆಟ್ಟಿಂಗ್ಸ್‌ಗೆ ಹೋಗಿ:ಹಂತ 2.ವಾಟ್ಸಾಪ್ ಓಪನ್ ಮಾಡಿ, 'Settings' ಮೆನುವನ್ನು ಆಯ್ಕೆ ಮಾಡಿ.3.ಅಕೌಂಟ್ ಸೆಟ್ಟಿಂಗ್ಸ್:ಹಂತ
- ಅಲ್ಲಿ ಕಾಣಿಸುವ 'Account' ಆಪ್ಷನ್ ಮೇಲೆ ಕ್ಲಿಕ್ ಮಾಡಿ..ಯೂಸರ್‌ನೇಮ್ ಆಯ್ಕೆ ಮಾಡಿ:
- ಹಂತ 4.'Username' ಎಂಬ ಆಯ್ಕೆಯನ್ನು ಆರಿಸಿ, ನಿಮ್ಮಿಷ್ಟದ ಹೆಸರನ್ನು (ಗರಿಷ್ಠ 35 ಅಕ್ಷರಗಳು) ನಮೂದಿಸಿ ಲಭ್ಯತೆಯನ್ನು ಪರಿಶೀಲಿಸಿ ಕನ್ಫರ್ಮ್ ಮಾಡಿ.ಪ್ರಸಿದ್ಧ ವ್ಯಕ್ತಿಗಳು ಹಾಗೂ ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆಗಳು ಸೃಷ್ಟಿಯಾಗುವುದನ್ನು ತಡೆಯಲು ವಾಟ್ಸಾಪ್ ಪ್ರಮುಖ ಸೆಲೆಬ್ರಿಟಿಗಳ ಹೆಸರುಗಳನ್ನು ಮೊದಲೇ ರಿಸರ್ವ್ ಮಾಡಿ ಇಟ್ಟುಕೊಳ್ಳಲಿದೆ.
ವ್ಯವಹಾರಸ್ಥರು ಹಾಗೂ ಕ್ರಿಯೇಟರ್‌ಗಳು ತಮ್ಮ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್ ಐಡೆಂಟಿಟಿಗೆ ಹೊಂದುವ ಹೆಸರನ್ನೇ ವಾಟ್ಸಾಪ್‌ನಲ್ಲೂ ಪಡೆದುಕೊಳ್ಳಬಹುದು. 2026ರ ಅಂತ್ಯದ ವೇಳೆ ಜಗತ್ತಿನಾದ್ಯಂತ ಈ ಫೀಚರ್ ಬಳಕೆಗೆ ಸಿಗಲಿದೆ ಎಂದು ಹೇಳಲಾಗಿದೆ, (ಏಜೆನ್ಸೀಸ್).