Origin Story Of The Name Dosa 
ಲೈಫ್‌ಸ್ಟೈಲ್

ದೋಷ ಎನ್ನುವುದು ದೋಸೆ ಎಂದು ಬದಲಾಗಿದ್ದು ಹೇಗೆ?; ಇಲ್ಲಿದೆ ಅಕ್ಕಿಯಿಂದ ತಯಾರಾಗುವ ಈ ಖಾದ್ಯದ ಕತೆ..Dosa

ಪ್ರಮುಖ ಮುಖ್ಯಾಂಶಗಳು

  • ದೋಷ ಎನ್ನುವ ಪದ ದೋಸೆ ಎನ್ನುವ ಖಾದ್ಯವಾಗಿ ಬದಲಾಗಿದ್ದು ಹೇಗೆ?
  • ಮದ್ಯ ತಯಾರಿಸಲು ಹೋಗಿ ದೋಸೆ ಎನ್ನುವ ಹೊಸ ಖಾದ್ಯ ಸೃಷ್ಟಿಸಿದ ಬ್ರಾಹ್ಮಣ
  • 3ನೇ ಸೋಮೇಶ್ವರರ ಕೃತಿಯಲ್ಲಿ ದೋಸೆ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ
Origin Story Of The Name Dosa: ದೇಶ- ವಿದೇಶದಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ಸೆಟ್​ ದೋಸೆ, ಮಸಾಲ ದೋಸೆ, ರವೆ ದೋಸೆ, ಈರುಳ್ಳಿ ದೋಸೆ, ನೀರ್ ದೋಸೆ ದಕ್ಷಿಣ ಭಾರತದ ಪ್ರಮುಖ ಆಹಾರ. ಕನ್ನಡದಲ್ಲಿ ದೋಸೆ, ತೆಲುಗಿನಲ್ಲಿ ದ್ವಾಸ, ಇಂಗ್ಲಿಷ್​ನಲ್ಲಿ ದೋಸ, ತಮಿಳಲ್ಲಿ ದೋಸೈ ಎಂದು ಕರೆಸಿಕೊಳ್ಳುವ ಇದು ಹುಟ್ಟಿಕೊಂಡಿದ್ದು ಎಲ್ಲಿ ಗೊತ್ತಾ? ಮೈಸೂರು ಪಾಕನ್ನು ರಾಜರ ಕಾಲದಲ್ಲಿ ಹೊಸದಾಗಿ ತಯಾರಿಸಿದ ಭಟ್ಟರ ಕತೆಯಂತೆ ಇದಕ್ಕೂ ಒಂದು ಕತೆಯಿದೆ.
ಬ್ಯಾಚುಲರ್ಸ್​ಗೆ ದೋಸೆ ಒಂದೊತ್ತಿನ ಊಟವಾದರೆ, ಸಸ್ಯಹಾರಿ ಹೋಟೆಲ್, ರೆಸ್ಟೋರೆಂಟ್​ ಮಾಲೀಕರಿಗೆ ಇದು ಆದಾಯ ಮೂಲ. ದಕ್ಷಿಣ ಭಾರತದ ಹೆಚ್ಚೆಚ್ಚು ಜನರು ಇದನ್ನೇ ನೆಚ್ಚಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ರಾತ್ರಿ ಪಾಳಯದಲ್ಲಿ ಪ್ರಯಾಣಿಸುವ ಪ್ರಯಾಣಿಕರು, ಉದ್ಯೋಗಿಗಳು ಸಂಚಾರಿ ಆಹಾರ ವಾಹನದಲ್ಲಿ ಇದನ್ನೇ ಸೇವಿಸುತ್ತಾರೆ.  ಅಷ್ಟೇ ಅಲ್ಲ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಉತ್ತರ ಭಾರತದ ಜನರು ಇದಕ್ಕೆ ಚಾಕೋಲೇಟ್, ಆಲೂ, ಪನ್ನೀರ್​, ಸಾಸ್​ ಎಲ್ಲ ಹಾಕಿ ವಾಕರಿಕೆ ಬರುವಂತೆ ಮಾಡುತ್ತಿದ್ದಾರೆ. ಇಷ್ಟೆಲ್ಲ ಜನರು ನೆಚ್ಚಿಕೊಂಡಿರುವ ದೋಸೆಯ ಮೂಲ ಹೆಸರು ಎನು ಗೊತ್ತಾ ಅದುವೇ ದೋಷ ಎಂದು. 

ಏನಿದು ಕತೆ?

ದೋಸೆ ಕನ್ನಡ ಪದ ಆದರೆ ಇದರ ಮೂಲ ಪದ ದೋಷ ಇದು ಸಂಸ್ಕೃತದ್ದು.  ಪುರಾತನ ಕಾಲದಲ್ಲಿ ಮದ್ಯ ಸೇವನೆ ಮಾಡುವುದು ಪಾಪ. ಆದರೆ, ಪುರೋಹಿತನೊಬ್ಬನಿಗೆ ಮದ್ಯ ಕುಡಿಯುವ ಆಸೆ ಅಮಲೇರಿದ್ದ ಕಾರಣ ಅಕ್ಕಿಯ ಹಿಟ್ಟಿನಿಂದ ಮದ್ಯತಯಾರಿಸಿ ಅದರ ರುಚಿ ಕಾಣಲು ಯತ್ನಿಸಿದ. 

ಮದ್ಯ ತಯಾರಿಸಲು ಹೋಗಿ ಎಡವಟ್ಟು

ಹೀಗಾಗಿ ಅಕ್ಕಿಯನ್ನು ನೆನೆಸಿಟ್ಟ, ಕೆಲವು ಗಂಟೆಗಳ ನಂತರ ಅದನ್ನು ರುಬ್ಬಿ ಪಕ್ಕಕ್ಕೆ ಇಟ್ಟ. ಆದರೆ ಹಿಟ್ಟು ಮದ್ಯಪಾನದ ಪಾನಿಯವಾಗದೆ, ಹುದುಗಿತು ಅಂದರೆ ಉಬ್ಬಿತು. ಎಸೆಯೋದು ಹೇಗೆ ಎಂದು  ಅದನ್ನೇ ಬಿಸಿ ಬಾಣಲೆ ಮೇಲೆ ಹರಡಿದನು ಅದು ತೆಳುವಾಗಿ ಗರಿಗರಿಯಾಗಿ ಒಂದು ಖಾದ್ಯ ತಯಾರಿ ಮಾಡಿದ. ಈ ಖಾದ್ಯ ಎಲ್ಲರಿಗೂ ಭಾರಿ ಇಷ್ಟವಾಯಿತು. 
ಆದರೆ, ಇದು ಪಾಪದ ಕೃತ್ಯ, ಧಾರ್ಮಿಕ ನಂಬಿಕೆಗಳ ಉಲ್ಲಂಘನೆಯಾಗಿದ್ದ ಕಾರಣ ಇದನ್ನು ದೋಷ ಎಂದು ಕರೆದರು. ಅಂದಿ ಅದು ದೋಶ ಆಯಿತು. ಆದರೆ,..ಕಾಲಾನಂತರದಲ್ಲಿ ಬಳಕೆ ಮಾಡುತ್ತಾ ಮಾಡುತ್ತಾ ದೋಸೆಯಾಗಿ ಬದಲಾಯಿತು ಎನ್ನುವ ಪ್ರತೀತಿ ಇದೆ. ಆದರೆ, ಈ ಐತಿಹಾಸಿಕ ಕತೆಗೆ ಯಾವುದೇ ದಾಖಲೆಗಳಿಲ್ಲ.  ಆದರೆ, ಜನಪದವಾಗಿ ಈ ಕತೆಯು ಜೀವಂತವಾಗಿದೆ. 

ಮೂರನೇ ಸೋಮೇಶ್ವರರ ಕೃತಿಯಲ್ಲಿ ಉಲ್ಲೇಖ?

ಐತಿಹಾಸಿಕ ದಾಖಲೆಗಳ ಪ್ರಕಾರ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ ಮತ್ತು ತಮಿಳುನಾಡಿಗೆ ದೋಸೆಯ ಹಳೆಯ ಇತಿಹಾಸವಿದೆ. ಕ್ರಿ.ಶ 12ನೇ ಶತಮಾನದಲ್ಲಿ ಚಾಲುಕ್ಯ ರಾಜ ಮೂರನೇ ಸೋಮೇಶ್ವರರ ಸಂಸ್ಕೃತ ಕೃತಿ ಮಾನಸೋಲ್ಲಾಸದಲ್ಲಿ ಅಕ್ಕಿ ಮತ್ತು ಉದ್ದಿನ ಬೇಳೆಯಿಮದ ತಯಾರಿಸಲಾದ ಖಾದ್ಯದ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗುತ್ತಿದೆ, (ಏಜೆನ್ಸೀಸ್).