ಲೈಫ್‌ಸ್ಟೈಲ್

ರೆಸಲೂಷನ್​ 2019 ಏನಾಯ್ತು?|ಮದುವೆ ಮಾಡಿಸಿತು ವಿಜಯವಾಣಿ

ಹೊಸ ವರ್ಷ ಆರಂಭ ಆಗುತ್ತಿದ್ದಂತೆಯೇ ಆ ವರ್ಷವಿಡೀ ಏನಾದರೊಂದು ಸಾಧಿಸಬೇಕು, ಕೆಟ್ಟ ಚಟ ಬಿಡಬೇಕು, ಒಳ್ಳೆಯದನ್ನೇ ಮಾಡಬೇಕು ಎಂದೆಲ್ಲಾ ಸಂಕಲ್ಪ ಮಾಡಿಕೊಳ್ಳುವವರೇ ಹೆಚ್ಚು. ಕೆಲವರು ಅದನ್ನು ಸಾಧಿಸಿದರೆ, ಇನ್ನು ಹಲವರ ರೆಸಲೂಷನ್ ಠುಸ್ ಆಗತ್ತೆ. ಅಂಥ ವಿಶಿಷ್ಟ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ನಿರೀಕ್ಷೆಗೂ ಮೀರಿದ ಪತ್ರಗಳು ಬಂದಿವೆ. ಆಯ್ದ ಕೆಲವು ಪತ್ರಗಳ ಮೊದಲ ಕಂತು ಇದು...

2019ರಲ್ಲಿ ಮದುವೆ ಆಗಲೇಬೇಕೆಂದು ತೀರ್ವನಿಸಿದ್ದೆ. ಆ ಬಗ್ಗೆ ಯೋಚನೆ ಮಾಡುತ್ತಿರುವಾಗಲೇ ‘ವಿಜಯವಾಣಿ’ ಪತ್ರಿಕೆಯು ಹುಬ್ಬಳ್ಳಿಯಲ್ಲಿ ಮದುವೆಯಾಗುವವರ ಸಲುವಾಗಿ ಕಾರ್ಯಕ್ರಮ ನಡೆಸಿತ್ತು. ಬಹಳಷ್ಟು ಯುವಕ ಯುವತಿಯರು ಭಾಗವಹಿಸಿದ್ದರು. ನಾನೂ ಅದರಲ್ಲಿ ಭಾಗವಹಿಸಿದ್ದೆ. ಇದರ ಫಲವಾಗಿಯೇ ಪ್ರಭಾವತಿ ನನ್ನ ಕೈಹಿಡಿದಳು. ಅಂತೂ ವಿಜಯವಾಣಿಯಿಂದಾಗಿನನ್ನ ರೆಸಲೂಷನ್ ಸಕ್ಸಸ್ ಆಯಿತು. ಈಗ ನಮ್ಮದು ಸುಖೀ ಕುಟುಂಬ.

| ಶಿವಕುಮಾರ್ ಬಾಬು ಕಬಾಡಗಿ, ಹುಕ್ಕೇರಿ, ಬೆಳಗಾವಿ ಜಿಲ್ಲೆ