Sugar: ಮಧುಮೇಹ, ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರಿಗೆ ಸಕ್ಕರೆ ಅಥವಾ ಸಿಹಿ ಪದಾರ್ಥಗಳನ್ನು ಮುಟ್ಟಬೇಡಿ ಎಂದು ವೈದ್ಯರು ಹೇಳುತ್ತಾರೆ. ಅಂತೆಯೇ ಸಂಬಂಧಪಟ್ಟ ರೋಗಿಗಳು ಕೂಡ ಸಂಪೂರ್ಣವಾಗಿ ಸಕ್ಕರೆ ಸೇವನೆಯನ್ನು ತ್ಯಜಿಸುತ್ತಾರೆ. ಆದರೆ, ಇದ್ಯಾವ ರೋಗಲಕ್ಷಣಗಳು ಇಲ್ಲದವರು ಕೂಡ ಬಿಳಿ ಸಕ್ಕರೆಯನ್ನು ತ್ಯಜಿಸುವುದು ಬಹಳ ಒಳ್ಳೆಯದು. ಇದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿ.
ಇದನ್ನೂ ಓದಿ: ದ್ವಿತೀಯ ಟೆಸ್ಟ್ಗೆ ಬುಮ್ರಾ ಅಲಭ್ಯ, ನಿತೀಶ್ ರೆಡ್ಡಿಗೆ ಸ್ಥಾನ! ವೇಗಿ ಬದಲಿಗೆ ಸ್ಪಿನ್ನರ್ಗೆ ಅವಕಾಶ | IND vs ENG
ಭವಿಷ್ಯದಲ್ಲಿ ಎದುರಾಗುವ ನಾನಾ ರೀತಿಯ ಅರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಮುನ್ನೆಚ್ಚರಿಕೆಯ ಕ್ರಮವಾಗಿ ಹಲವರು ಇಂದೇ ಸಕ್ಕರೆ ಸೇವನೆಯನ್ನು ಬಿಡುತ್ತಿದ್ದಾರೆ. ವಾಸ್ತವವಾಗಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಸೇವನೆ ಉತ್ತಮ. ಅದಕ್ಕೂ ಮೀರಿ ಸಂಪೂರ್ಣವಾಗಿ ತ್ಯಜಿಸುತ್ತೇವೆ ಎಂದಾದರೆ ಇನ್ನೂ ಉತ್ತಮ. ಹಾಗಾದರೆ, ಸಿಹಿಗೆ ಪೂರ್ಣ ಗುಡ್ಬೈ ನಿಜವಾಗಿಯೂ ಒಳ್ಳೆಯದೇ? ಸಕ್ಕರೆಯನ್ನು ಸಂಪೂರ್ಣವಾಗಿ ಬಿಡುವುದರಿಂದ ದೇಹದಲ್ಲಿ ಏನ್ನೆಲ್ಲ ಬದಲಾವಣೆಗಳು ಸಂಭವಿಸುತ್ತವೆ ಎಂಬುದರ ವಿವರ ಹೀಗಿದೆ ಗಮನಿಸಿ.
ಇದನ್ನೂ ಓದಿ: ಅರವತ್ಮುಕ್ಕುಂಡು ಬಯಲಲ್ಲಿ ನಾಟಿ ಉತ್ಸವ : ಸಂಭ್ರಮಿಸಿದ ವಿದ್ಯಾರ್ಥಿಗಳು : ಕೃಷಿ ಕಾಯಕ ನಿರತರಿಗೆ ಪ್ರಶಸ್ತಿ ಪ್ರದಾನ
ತೂಕ ಇಳಿಕೆ: ಸಕ್ಕರೆಯಲ್ಲಿ ಕ್ಯಾಲೊರಿಗಳು ಅಧಿಕವಾಗಿದ್ದು, ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗಿದೆ. ತ್ಯಜಿಸಿದ ತಕ್ಷಣ ನೀವು ದಿನಕ್ಕೆ ನೂರಾರು ಕ್ಯಾಲೊರಿಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.
ಇನ್ಸುಲಿನ್ ಮಟ್ಟ ಸುಧಾರಣೆ: ಇದು ಮಧುಮೇಹ ನಿಯಂತ್ರಣಕ್ಕೆ ಬಹಳ ಮುಖ್ಯವಾದ ಅಂಶವಾಗಿದೆ.
ಲಿವರ್ ಆರೋಗ್ಯ: ಕೊಬ್ಬಿನ ಪಿತ್ತಜನಕಾಂಗದ ಸಮಸ್ಯೆಯನ್ನು ಗುಣಪಡಿಸುತ್ತದೆ. ಸಕ್ಕರೆ ತ್ಯಜಿಸಿದ ಬಳಿಕ ಯಕೃತ್ತಿನ ಕಾರ್ಯವು ಸುಧಾರಿಸುತ್ತದೆ.
ಮಿದುಳಿನ ಕಾರ್ಯ: ಸಕ್ಕರೆ ತ್ಯಜಿಸಿದ ನಂತರ ಮಿದುಳಿನ ಕಾರ್ಯವು ವೇಗವಾಗುತ್ತದೆ.
ಕ್ಯಾನ್ಸರ್ ಅಪಾಯ ಕಡಿಮೆ: ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದರಿಂದ ಕೆಲವು ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.
ಸಕ್ಕರೆಯನ್ನು ಸಂಪೂರ್ಣವಾಗಿ ಅಥವಾ ಮಿತವಾಗಿ ತ್ಯಜಿಸುವುದು ದೇಹಕ್ಕೆ ಲಾಭದಾಯಕ. ಒಂದೇ ಬಾರಿ ಬಿಡಲು ಸಾಧ್ಯವಾಗಲಿಲ್ಲ ಎಂದರೆ, ಹಂತ ಹಂತವಾಗಿ ಕಡಿಮೆ ಮಾಡುತ್ತಾ ಬನ್ನಿ. ಮೊದಲಿಗೆ ಕೆಲವು ತಾತ್ಕಾಲಿಕ ಸಮಸ್ಯೆಗಳಿರಬಹುದು, ಆದರೆ ದೀರ್ಘಾವಧಿಯಲ್ಲಿ ಇದು ಆರೋಗ್ಯಕ್ಕೆ ಉತ್ತಮ ಫಲಿತಾಂಶವನ್ನು ತಂದುಕೊಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು, ಮಧುಮೇಹ ಹೊಂದಿರುವವರು ಮತ್ತು ಹೃದಯ ಸಮಸ್ಯೆಗಳನ್ನು ಹೊಂದಿರುವವರು ಆದಷ್ಟು ಸಕ್ಕರೆ ಸೇವನೆಯನ್ನು ಬಿಡುವುದು ಒಳ್ಳೆಯದೇ,(ಏಜೆನ್ಸೀಸ್).