Weight Loss Diet : ನೀವು ತೂಕ ಕಳೆದುಕೊಳ್ಳಲು ಬೇರೆ ಯಾವುದೇ ರಾಸಾಯನಿಕ/ವೈದ್ಯಕೀಯ ಔಷಧಿಗಳನ್ನು ಬಳಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಸಾಮಾಗ್ರಿಗಳಿಂದ ನಿಮ್ಮ ತೂಕವನ್ನು ಕಡಿಮೆ ಮಾಡಬಹುದು. ಈ ಜ್ಯೂಸ್‍ಗಳನ್ನು ಸೇವಿಸುವುದರಿಂದ ನಿಮ್ಮ ತೂಕ ಕಡಿಮೆ ಆಗುತ್ತದೆ.
ನಿಂಬೆ ಹಣ್ಣಿನ ಜ್ಯೂಸ್ : ನಿಂಬೆ ರಸವನ್ನು ನೀರನಲ್ಲಿ ಬೆರೆಸಿ ಕುಡಿಯುವುದರಿಂದ ದೇಹದ ದಣಿವು ಕಡಿಮೆ ಆಗುತ್ತದೆ. ನಿಂಬೆ ಹಣ್ಣಿನಲ್ಲಿ ವಿಟಾಮಿನ್ 'ಸಿ' ಇದೆ. ಮುಂಜಾನೆ ಒಂದು ಗ್ಲಾಸ್ ನೀರಿಗೆ ನಿಂಬೆ ರಸದ ಜೊತೆಗೆ ಒಂದು ಸ್ಪೂನ್ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ದೇಹದ ತೂಕ ಕಡಿಮೆ ಆಗುತ್ತದೆ ಮತ್ತು ಜೀರ್ಣಕ್ರಿಯೆಯು ಸರಿಯಾಗಿ ಆಗುತ್ತದೆ.
ಅರಿಶಿಣ ನೀರು: ಅರಿಶಿಣದಲ್ಲಿ ವೈದ್ಯಕೀಯ ಗುಣವಿದೆ. ಪ್ರಾಚೀನ ಕಾಲದಿಂದಲೂ ಅರಿಶಿಣಕ್ಕೆ ಬಹಳ ಮಹತ್ವ ಇದೆ. ಸುಂದರವಾಗಿ ಕಾಣಲು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ.ಶುಭ ಸಂದರ್ಭಗಳಲ್ಲಿಯೂ ಅರಿಶಿಣ ಬಳಸುವುದು ವಾಡಿಕೆ. ಹಾಗೆಯೇ ಅರಿಶಿಣ ನೀರಿಗೆ ಬೆರೆಸಿ ಕುಡಿಯುವುದರಿಂದ ದೇಹ ತೂಕ ಇಳಿಸಲು ಸಹಾಯಕವಾಗಿದೆ.
ಶುಂಠಿ ಟೀ: ಶುಂಠಿ ದೇಹಕ್ಕೆ ತುಂಬಾ ಒಳ್ಳೆಯದ್ದು. ಇದು ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಶುಂಠಿ ಟೀ ಕುಡಿಯುವಾಗ ಊರಿ ಎನಿಸಿದರು ಅದು ತೂಕ ಕಡಿಮೆ ಮಾಡಲು ರಾಮಬಾಣದಂತೆ ಕೆಲಸ ಮಾಡುತ್ತದೆ.
ಗ್ರೀನ್ ಟೀ: ಗ್ರೀನ್ ಟೀ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಇದೂ ಕೂಡಾ ದೇಹದ ತೂಕ ಕಳೆದುಕೊಳ್ಳು ಸಹಾಯ ಮಾಡಿದೆ.
ಸೌತೆಕಾಯಿ ಮತ್ತು ಪುದೀನಾ ಮಿಶ್ರಣ: ಇದು ತುಂಬಾ ಸರಳವಾದ ಡಯಟ್ ಜ್ಯೂಸ್. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಸಿಗುವ ಸಾಮಾನ್ಯ ವಸ್ತುಗಳಿಂದ ತಯಾರಿಸಬಹುದು. ಹಣ್ಣು ಮತ್ತು ಗಿಡಮೂಲಿಕೆಗಳ ಸಮ್ಮಿಲನದಿಂದ ದೇಹದಲ್ಲಿನ ಕ್ಯಾಲೋರಿ ಮತ್ತು ಹೈಡ್ರೇಟಿಂಗ್ ಕಡಿಮೆ ಮಾಡಲು ಸಹಾಯಕವಾಗಿದೆ.
ಈ ಐದು ಔಷಧಿ ಗುಣವುಳ್ಳ ಜ್ಯೂಸ್ಗಳ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಅವಶ್ಯಕ ಇರುವ ಪೋಷಕಾಂಶಗಳು ದೊರೆಯುತ್ತವೆ. ನೀವು ಇನ್ನಷ್ಟು ಆರೋಗ್ಯಕರವಾಗಿ ಮತ್ತು ಪೀಟ್ ಆಗಿ ಇರಲು ಇವುಗಳು ಸಹಾಯ ಮಾಡುತ್ತವೆ.