ಸಾಂದರ್ಭಿಕ ಚಿತ್ರ 
ಲೈಫ್‌ಸ್ಟೈಲ್

ನಿಮ್ಮ ಗ್ಯಾಸ್ ಸಿಲಿಂಡರ್ ಹೆಚ್ಚು ಕಾಲ ಬಾಳಿಕೆ ಬರಬೇಕೆ? ಹಾಗಿದ್ದರೆ, ಈ ಟ್ರಿಕ್​ ಒಮ್ಮೆ ಟ್ರೈ ಮಾಡಿ.. Gas cylinder

Gas cylinder : ಸೌದೆ ಒಲೆಗಳ ಬಳಕೆಯ ನಂತರ ಪ್ರತಿಯೊಂದು ಮನೆಗಳಲ್ಲಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳನ್ನು ಅಡುಗೆ ಮಾಡಲು ಬಳಸಲಾಗುತ್ತದೆ. ಸರ್ಕಾರವು ಉಜ್ವಲ ಯೋಜನೆಯನ್ನು ಜಾರಿಗೊಳಿಸಿದ ನಂತರ ಗ್ರಾಮೀಣ ಪ್ರದೇಶಗಳಲ್ಲಿಯೂ ಗ್ಯಾಸ್ ಸಿಲಿಂಡರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ, ಗ್ಯಾಸ್​​ ಬೇಗನೆ ಖಾಲಿಯಾಗುತ್ತಿದೆ ಎಂದು ನೀವು ಯೋಚಿಸುತ್ತಿದ್ದೀರಾ? ಹಾಗಿದ್ದರೆ, ಈ ತಂತ್ರಗಳನ್ನು ಬಳಸಿ ಹೆಚ್ಚುಕಾಲ ಮನೆಯಲ್ಲಿ ಗ್ಯಾಸ್​ ಅನ್ನು ಬಳಸಿ.

ಕಡಿಮೆ ಉರಿಯನ್ನು ಬಳಸಿ

ಹೆಚ್ಚಿನ ಜನರು ಮಳೆಗಾಲದಲ್ಲಿ ನೀರು ಕಾಯಿಸುವುದರಿಂದ ಹಿಡಿದು ಆಹಾರ ಬೇಯಿಸುವವರೆಗೂ ಗ್ಯಾಸ್​ ಸಿಲಿಂಡರ್​ಗಳನ್ನೇ ಬಳಸಲಾಗುತ್ತದೆ. ಇದರಿಂದ ಬೇಗನೆ ಗ್ಯಾಸ್​ ಖಾಲಿಯಾಗುತ್ತದೆ. ಅಡುಗೆ ಮಾಡುವಾಗ ಬರ್ನರ್ ಅನ್ನು ಹೆಚ್ಚಿನ ಉರಿಯಲ್ಲಿ ಇಡುವ ಅಭ್ಯಾಸ ಅನೇಕ ಜನರಿಗೆ ಇರುತ್ತದೆ. ಇದು ಅಗತ್ಯಕ್ಕಿಂತ ಹೆಚ್ಚಿನ ಉರಿಯನ್ನು ನೀಡುತ್ತದೆ. ಆದ್ದರಿಂದ ಗ್ಯಾಸ್ ಬೇಗನೆ ಖಾಲಿಯಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಆದಷ್ಟು ಕಡಿಮೆ ಉರಿಯನ್ನು ಬಳಸಿ ಅಡುಗೆಯನ್ನು ಮಾಡುವುದರಿಂದ ಬೇಗನೆ ಗ್ಯಾಸ್​ ಖಾಲಿಯಾಗುವುದಿಲ್ಲ.

ಆಗಾಗ ಶುಚಿಗೊಳಿಸಿ

ಗಾಳಿಯ ಹರಿವು ಚೆನ್ನಾಗಿಲ್ಲದಿದ್ದರೆ, ಅನಿಲ ಸರಿಯಾಗಿ ಉರಿಯದಿದ್ದರೆ ಸಿಲಿಂಡರ್​ ಬಳಕೆ ಹೆಚ್ಚಾಗುತ್ತದೆ. ಬರ್ನರ್​ ಶುದ್ಧವಾಗಿದ್ದರೆ, ಜ್ವಾಲೆಯು ನೀಲಿ ಬಣ್ಣದಲ್ಲಿ ಕಾಣಿಸುತ್ತದೆ. ಜ್ವಾಲೆಯು ಕೆಂಪು, ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಂಡರೆ, ಬರ್ನರ್‌ನಲ್ಲಿ ಏನೋ ತಪ್ಪಾಗಿದೆ ಎಂದರ್ಥ. ಹಾಗಾಗಿ ನೀವು ಸ್ವಚ್ಛವಾದ ಬ್ರಷ್​ನಿಂದ ಸ್ವಚ್ಛಗೊಳಿಸುವುದರಿಂದ ಸಮಸ್ಯೆಯು ಬಗೆಹರಿಯುತ್ತದೆ. ಹಾಗೆಯೇ ಗ್ಯಾಸ್​ ಇನ್ನು ಸ್ವಲ್ಪ ದಿನ ಬರುತ್ತದೆ.

ಕಡಿಮೆ ನೀರು ಬಳಸಿ

ಅಡುಗೆ ಮಾಡುವಾಗ ಅಗತ್ಯವಿರುವಷ್ಟು ನೀರನ್ನು ಮಾತ್ರ ಬಳಸುವುದು ಉತ್ತಮ. ಅತಿ ಹೆಚ್ಚು ನೀರನ್ನು ಬಳಸಿದಾಗ, ಆಹಾರವು ಕುದಿಯುವವರೆಗೂ ಅತಿಯಾದ ಅನಿಲ ಬಳಕೆಯಾಗುತ್ತದೆ. ಇದರಿಂದ ಇಂಧನ ಜಾಸ್ತಿ ಹೋಗುತ್ತದೆ. ಹಾಗಾಗಿ ಸೀಮಿತ ನೀರಿನಿಂದ ಅಡುಗೆ ಮಾಡುವುದು ಉತ್ತಮ.

ಪಾತ್ರೆಗಳು ಒಣಗಿರಬೇಕು

ಒಲೆಯ ಮೇಲೆ ಇಟ್ಟಿರುವ ಪ್ಯಾನ್ ಮೇಲೆ ನೀರಿನ ಹನಿಗಳು ಈಗಾಗಲೇ ಬಿದ್ದಿದ್ದರೆ, ಅದನ್ನು ಒಣಗಿಸಲು ಹೆಚ್ಚಿನ ಅನಿಲ ವ್ಯರ್ಥವಾಗುತ್ತದೆ. ಹಾಗಾಗಿ ಪಾತ್ರೆಯನ್ನು ಒಲೆಯ ಮೇಲೆ ಇಡುವ ಮೊದಲೇ ಒಣಗಿಸಿ ಇಡುವುದರಿಂದ ಬೆಂಕಿಯನ್ನು ಕಡಿಮೆ ಮಾಡುವ ಮೂಲಕ ಅನಿಲವನ್ನು ಉಳಿಸಬಹದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.