ಲೈಫ್‌ಸ್ಟೈಲ್

ಫಿಟ್​ ಆಗಿರುವ ದೇಹ ಹೊಂದಲು ಬಯಸುತ್ತೀರಾ? ಹಾಗಿದ್ದರೆ ಈ ಸಲಹೆಗಳನ್ನು ಪಾಲಿಸಿ! Fit body

Fit body : ಇಂದಿನ ದಿನಗಳಲ್ಲಿ ಆದಷ್ಡು ಜನರು ಸದೃಢ ಮೈಕಟ್ಟು ಹಾಗೂ ಫಿಟ್​ ಆಗಿರಲು ಬಯಸುತ್ತಾರೆ. ಆದರೆ ಇಂದಿನ ಒತ್ತಡದ ಜೀವನದಲ್ಲಿ ನಾವು ಸೇವಿಸುವಂತಹ ಆಹಾರ, ಔಷಧಿಗಳು ನಮ್ಮ ತೂಕವನ್ನು ಹೆಚ್ಚಿಸುತ್ತಿರಬಹುದು. ಈ ಕಾರಣಗಳಿಂದ ವೈದ್ಯರ ಬಳಿ ಹೋಗುವುದು ಇಲ್ಲವೇ, ಔಷಧಿಗಳ ಮೊರೆ ಹೋಗುವುದನ್ನು ಅನೇಕರು ಮಾಡುತ್ತಾರೆ. ಈ ಚಿಕಿತ್ಸೆಗಳು ಯಾವುದೇ ರೀತಿಯಲ್ಲೂ ಪರಿಣಾಮ ಬೀರದಿರುವುದರಿಂದ ಜನರು ನಿರಾಸೆ ಹೊಂದುತ್ತಾರೆ. ಹಾಗಾಗಿ ಯಾವ ವ್ಯಕ್ತಿ ತೂಕ ಇಳಿಸಿಕೊಂಡು ಫಿಟ್​ ಆಗಿ ಬಯಸುವವರು ಈ ಅಭ್ಯಾಸಗಳನ್ನು ಪ್ರತಿನಿತ್ಯ ಮಾಡಿ..

1. ನಿಂಬೆ ರಸದೊಂದಿಗೆ ದಿನ ಪ್ರಾರಂಭಿಸಿ

ಬೆಳಿಗ್ಗೆ ಎದ್ದ ತಕ್ಷಣ ನಿಂಬೆ ರಸದೊಂದಿಗೆ ಚೆಚ್ಚಗಿನ ನೀರು ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಹಾಗೇ ದೇಹದಲ್ಲಿ ಸಂಗ್ರಹವಾಗಿರುವ ಗ್ಯಾಸ್ಟ್ರಿಕ್​ ಸಮಸ್ಯೆಯನ್ನು ಕಡಿಮೆ ಮಾಡಿ. ಅತಿಯಾಗಿ ಆಹಾರ ಸೇವಿಸುವುದನ್ನು ತಡೆದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

2. ಆಹಾರದಲ್ಲಿ ಪ್ರೊಟೀನ್​ ಸೇವಿಸಿ

ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಪ್ರೊಟೀನ್​ ಭರಿತ ಆಹಾರವನ್ನು ಸೇವಿಸುವುದರಿಂದ ಹೆಚ್ಚು ಸಮಯದವರೆಗೆ ಹಸಿವಾದಂತೆ ನೋಡಿಕೊಳ್ಳಬಹುದು. ಇದು ಅತಿಯಾಗಿ ತಿನ್ನುವುದನ್ನು ನಿಯಂತ್ರಿಸುತ್ತದೆ. ಹಾಗೆಯೇ, ಪ್ರೊಟೀನ್​ಗಳು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

3. ಪ್ರತಿದಿನ 30 ನಿಮಿಷದ ವ್ಯಾಯಾಮ

ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ 30 ನಿಮಿಷಗಳ ಕಾಲ ನಡೆಯುವುದು, ಓಡುವುದು, ಈಜುವುದು ಈ ರೀತಿಯ ವ್ಯಾಯಾಮಗಳನ್ನು ಮಾಡುವುದರಿಂದ ಇದು ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ಹೃದಯವನ್ನು ಬಲಪಡಿಸಿ, ಹೃದಯ ಸಂಬಂಧಿ ಕಾಯಿಲೆಯನ್ನು ತಡೆಗಟ್ಟುತ್ತದೆ.

4. ಸರಿಯಾಗಿ ನಿದ್ರೆ ಮಾಡಿ

ಇಂದಿನ ಒತ್ತಡ ಜೀವನದಲ್ಲಿ ವ್ಯಕ್ತಿಯು ಚಿಂತೆ ಮಾಡಲು ಪ್ರಾರಂಭಿಸಿದ್ದು, ಸರಿಯಾಗಿ ನಿದ್ರೆ ಮಾಡುವುದಿಲ್ಲ. ಹಾಗಾಗಿ ನಿದ್ರೆಯ ಕೊರತೆಯು ದೇಹದಲ್ಲಿ ಒತ್ತಡ ಹಾರ್ಮೋನ್​ಗಳನ್ನು ಹೆಚ್ಚಿಸುತ್ತದೆ. ಇದರಿಂದ ಹೊಟ್ಟೆಯ ಕೊಬ್ಬನ್ನು ಹೆಚ್ಚಾಗುತ್ತದೆ. ಪ್ರತಿದಿನ 7-8 ಗಂಟೆಗಳ ಗುಣಮಟ್ಟದ ನಿದ್ರೆ ಹಾರ್ಮೋನ್​ಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

5. ನಿಧಾನವಾಗಿ ಆಹಾರ ಸೇವಿಸಿ

ಪ್ರತಿನಿತ್ಯ ಆಹಾರವನ್ನು ಸೇವಿಸುವಾಗ ಶಾಂತ ಮನಸ್ಸಿನಿಂದ ಆಹಾರ ಸೇವಿಸಿ. ಈ ಸಮಯದಲ್ಲಿ ಮೊಬೈಲ್​ ಫೋನ್​, ಟಿವಿ ಸ್ಕ್ರೀನ್​ಗಳನ್ನು ನೋಡುವುದನ್ನು ಬಿಡಿ. ಈ ರೀತಿಯಾಗಿ ಮಾಡುವುದರಿಂದ ನಿಮಗೆ ಅಗತ್ಯವಾದ ಆಹಾರವನ್ನು ಮಾತ್ರ ಸೇವಿಸುವಂತೆ ಮಾಡಿ. ದೇಹದಲ್ಲಿ ಹೆಚ್ಚುವರಿ ಕ್ಯಾಲೋರಿ ಸಂಗ್ರಹವಾಗುವುದನ್ನು ತಡೆಯುತ್ತದೆ.

6. ತರಬೇತಿ ಪಡೆಯಿರಿ

ತೂಕ ಇಳಿಸಿಕೊಳ್ಳಲು ಇಚ್ಛಿಸುವವರು ಜಿಮ್​ ಅಥವಾ ವ್ಯಾಯಾಮ ಮಾಡುವಂತಹ ತರಬೇತಿಗೆ ಸೇರಿಕೊಳ್ಳಿ. ಇದು ಸ್ನಾಯುವಿನ ಚಯಾಪಚಯ ಕ್ರಿಯೆಗಳನ್ನು ಹೆಚ್ಚಿಸುತ್ತದೆ. ಇಲ್ಲಿ ಮಾಡುವ ವ್ಯಾಯಾಮದಿಂದ ನಿಮ್ಮ ದೇಹದಲ್ಲಿನ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ನಿಮ್ಮ ದೈನಂದಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ಸೇರಿಸಿಕೊಳ್ಳಿ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ