Waking up at 5 am really boosts brain productivity 
ಲೈಫ್‌ಸ್ಟೈಲ್

'ಮುಂಜಾನೆ 5 ಗಂಟೆಗೆ ಏಳುವುದು ಯಶಸ್ಸಿನ ಸೂತ್ರವಲ್ಲ, ಆದ್ರೆ...'; ಅಮೆರಿಕದ ನ್ಯೂರೋಸೈಂಟಿಸ್ಟ್ ಹೀಗೆ ಹೇಳಿದ್ಯಾಕೆ?..Sleep Science

Waking up at 5 am really boosts brain productivity: ಭಾರತೀಯರಾದ ನಾವು ಮುಂಜಾನೆ ಐದಕ್ಕೆ ಎದ್ದು, ಮನೆಯ ಅಂಗಳ ತೊಳೆದು, ಸ್ನಾನ ಮಾಡಿ, ತುಳಸಿ ಪೂಜೆ ಮಾಡೋದು, ಶ್ಲೋಕ ಓದೋದು ಸಾಮಾನ್ಯ. ಕಾಲಾನಂತರದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳು ಬೇಗ ಎದ್ದು ಓದುವುದು ತಲೆಗೆ ಹೋಗುತ್ತದೆ ಎಂದು ಆ ವೇಳೆಯನ್ನೇ ಓದಲು ಫಿಕ್ಸ್ ಮಾಡಿಕೊಂಡರು. ಆದರೆ, ಇದು ಎಲ್ಲ ರೀತಿಯ ವ್ಯಕ್ತಿಗಳಿಗೆ ಒಳ್ಳೆಯದಲ್ಲ, ಮೆದುಳನ್ನು ನಿಜವಾಗಿಯೂ ಚುರುಕಾಗಿಡುವುದು ಯಾವ ಸಮಯ ಎನ್ನುವುದನ್ನು  ನ್ಯೂರೋ ಸೈಂಟಿಸ್ಟ್ ರಾಚೆಲ್ ಬ್ಯಾರ್  ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 
ಸೂರ್ಯೋದಯಕ್ಕೂ ಮುನ್ನ ಏಳುವುದರಿಂದ ಮೆದುಳು ಚುರುಕಾಗುತ್ತದೆ. ಏಕಾಗ್ರತೆ, ಒಂದು ವಿಚಾರದ ಬಗ್ಗೆ ಕೇಂದ್ರಿಕರಿಸಲು ಸಾಧ್ಯವಾಗುತ್ತದೆ ಎನ್ನುವುದು ಹಲವರ ವಾದ. ಆದರೆ, ನ್ಯೂರೋಸೈಂಟಿಸ್ಟ್ ಮತ್ತು ನಿದ್ರೆಯ ಕುರಿತು ಸಂಶೋಧನೆ ನಡೆಸುತ್ತಿರುವ ರಾಚೆಲ್ ಬ್ಯಾರ್ ಪ್ರಕಾರ, ಮುಂಜಾನೆ ಬೇಗ ಏಳುವುದಕ್ಕೂ ಯಶಸ್ಸಿಗೂ ನೇರ ಸಂಬಂಧವಿಲ್ಲ ಎಂದಿದ್ದಾರೆ. 

ರಾಚೆಲ್ ಬ್ಯಾರ್ ಹೇಳಿದ್ದು ಹೀಗೆ

ದೇಹ ಚುರುಕಾಗಿ ವರ್ತಿಸುವುದು, ಮೆದುಳು ಕ್ರಿಯಾಶೀಲತೆಯಿಂದ ಇರುವುದು ನಾವು ಮುಂಜಾನೆ ಐದಕ್ಕೆ ಏಳೋದ್ರಿಂದ ಅಲ್ಲ. ಇದು ನಮ್ಮ ದೇಹದ  'ಸರ್ಕಾಡಿಯನ್ ರಿದಮ್' ಮೇಲೆ ನಿಂತಿರುತ್ತದೆ. ಅಂದರೆ 24 ಗಂಟೆಗಳ ಕಾಲಾವಧಿಯಲ್ಲಿ ಅನುಸರಿಸುವ ನೈಸರ್ಗಿಕ, ಆಂತರಿಕ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಚಕ್ರ. 
ಯಾವಾಗ ನಿದ್ರೆ ಬರಬೇಕು, ಹಸಿವಾಗಬೇಕು, ಯಾವಾಗ ಅತ್ಯಂತ ಚುರುಕಾಗಿ ಕೆಲಸ ಮಾಡಬೇಕು ಎಂದುಬನ್ನು ನಿಯಂತ್ರಿಸುತ್ತದೆ. ಕೇವಲ ಅಲಾರಾಂ ಇಟ್ಟುಕೊಂಡು ಗಾಬರಿಯಿಂದ ಎದ್ದರೆ ಮೆದುಳು ಚುರುಕಾಗುವುದಿಲ್ಲ, ಅದಕ್ಕೆ ದೇಹದ ಸಹಕಾರವೂ ಬೇಕು ಎಂದಿದ್ದಾರೆ.

ನಿದ್ರೆ ಎಷ್ಟು ಮುಖ್ಯ

ಮಾನವರಲ್ಲಿ ನಿದ್ರೆಯನ್ನು ನಿರ್ಧರಿಸುವುದು Genetics. ಇದನ್ನು 'ಕ್ರೋನೋಟೈಪ್ಸ್' ಎನ್ನಲಾಗುತ್ತದೆ. ಕೆಲವರು ಮುಂಜಾನೆ ಆಕ್ಟೀವ್​ ಆಗಿದ್ರೆ, ಇನ್ನೂ ಕೆಲವರು ರಾತ್ರಿ ಮಲಗುವಾಗ  ಚುರುಕಾಗಿರುತ್ತಾರೆ. ಒಂದು ವೇಳೆ ನೀವು ಜಾಗರಣೆ ಪ್ರಿಯರಾಗಿದ್ದರೆ, ಬೆಳಿಗ್ಗೆ 5ಕ್ಕೆ ಏಳುವುದು ನಿಮ್ಮ ದೇಹಕ್ಕೆ ನೀವು ಮಾಡಿಕೊಳ್ಳುವ ದ್ರೋಹ. ಒತ್ತಾಯವಾಗಿ ಎದ್ದು ದಿನಪೂರ್ತಿ ನೀರಸವಾಗಿ ಕಳೆಯುತ್ತೀರಿ ಎಂದು ಹೇಳಿದರು. 
ಒತ್ತಾಯವಾಗಿ, ಮೆದುಳು ಚುರುಕಾಗುತ್ತದೆ ಎಂದು ಏಳುವುದರಿಂದ ಸುಸ್ತಾಗುವುದು. ಮೆದುಳಿಗೆ ಹಾನಿ ಹಾಗೂ ನಿದ್ರೆಯ ಕೊನೆಯ ಹಂತದಲ್ಲಿ ಬರುವ 'ರೆಮ್' ನಿದ್ರೆಯು ಮೆದುಳಿನ ಆರೋಗ್ಯ, ನೆನಪಿನ ಶಕ್ತಿ, ಕಲಿಕೆ ಮತ್ತು ಭಾವನಾತ್ಮಕ ಸಮತೋಲನಕ್ಕೆ ಅತ್ಯಂತ ಅಗತ್ಯ. ಬಲವಂತವಾಗಿ ಏಳುವುದರಿಂದ ನಿದ್ರೆಯ ಅವಧಿ ಕಡಿತಗೊಳ್ಳುತ್ತದೆ. ಮಾನಸಿಕ ಚುರುಕುತನ ಕಡಿಮೆಯಾಗುತ್ತದೆ ಎಂದಿದ್ದಾರೆ. 

ಬೆಳಗ್ಗೆ ಏಳೋದು ಎಲ್ಲರಿಗೂ ಸೂಕ್ತವಲ್ಲ

ನಾನು ಸಹ ಬೆಳಗ್ಗೆ ಏಳುವುದು ಚುರುಕುತನ ಎಂದು ಭಾವಿಸಿದ್ದೆ. ಆದರೆ, ಸಂಶೋಧನೆ ನಡೆಸುವಾಗ ತಿಳಯಿತು ನನಗೆ ರಾತ್ರಿ ಎದ್ದು, ಓದುವುದು ಕೆಲಸ ಮಾಡುವುದರಿಂದ ನನ್ನ ಮೆದುಳು ಚುರುಕಾಗಿರುತ್ತದೆ ಎಂದು. ನಾನು ನನ್ನ ದೇಹ ಪ್ರತಿಕ್ರಿಯಿಸುವಂತೆ ನಡೆದುಕೊಂಡೆ ಎಂದು ಹೇಳಿದರು. 
ಬರಾಕ್ ಒಬಾಮಾ, ವಿನ್‌ಸ್ಟನ್ ಚರ್ಚಿಲ್, ಬಿಲಿಯನೇರ್ ಇಲಾನ್ ಮಸ್ಕ್, ಬಾಕ್ಸ್ ಸಿಇಒ ಆರನ್ ಲೆವಿ ಮತ್ತು ಪ್ರಸಿದ್ಧ ಲೇಖಕ ಮೈಕೇಲ್ ಲೂಯಿಸ್ ಅವರಂತಹ ಜಗತ್ತಿನ ಅತ್ಯಂತ ಯಶಸ್ವಿ ವ್ಯಕ್ತಿಗಳು ರಾತ್ರಿ ತಡವಾಗಿ ಕೆಲಸ ಮಾಡುವ ಹವ್ಯಾಸ ಹೊಂದಿದವರಾಗಿದ್ದಾರೆ. ಹಾಗಾಗಿ, ಮುಂಜಾನೆ 5 ಗಂಟೆಗೆ ಏಳುವುದು ಯಶಸ್ಸಿನ ಮ್ಯಾಜಿಕ್ ಸೂತ್ರವೇನಲ್ಲ ಎಂದು ಹೇಳಿದರು, (ಏಜೆನ್ಸೀಸ್).