ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಎಲ್ಲರೂ ಸಿಹಿತಿಂಡಿಯೊಂದಿಗೆ ಹಬ್ಬದ ಶುಭಾಶಯಗಳನ್ನು ಕೋರುತ್ತಾರೆ. ಪ್ರತಿ ದೀಪಾವಳಿಯಲ್ಲೂ ಒಂದೇ ರೀತಿಯ ಸಿಹಿತಿನಿಸು ತಿನ್ನಲು ಸಿಗುತ್ತದೆ. ಆದ್ದರಿಂದ ಎಲ್ಲರೂ ಹೊಸದನ್ನು ಏನಾದರೂ ಮಾಡಬೇಕು ಎಂದು ಯೋಚಿಸುತ್ತಿರುತ್ತಾರೆ. ಅವರಿಗಾಗಿಯೇ ‘ಅಂಬಾನಿ ಲಡ್ಡು’ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.(Viral Recipe)
ಇದನ್ನು ಓದಿ: ಗೋಡಂಬಿಯಲ್ಲಿ ಅಸಲಿ-ನಕಲಿ ಗುರುತಿಸುವುದು ಹೇಗೆ?; ನೋಡಿದ ತಕ್ಷಣ ಗುರುತಿಸಲು ನಿಮಗಾಗಿ ಈ ಸಿಂಪಲ್ ಟಿಪ್ಸ್ | Health Tips
ಅಂಬಾನಿ ಲಡ್ಡುಗಳು ಎಂದರೇನು ಎಂದು ಈಗ ಆಶ್ಚರ್ಯ ಪಡುತ್ತಿದ್ದೀರಾ. ಸಂದರ್ಶನವೊಂದರಲ್ಲಿ ಅನಂತ್ ಅಂಬಾನಿ ಅವರು ತಮ್ಮ ವಂತಾರದಲ್ಲಿರುವ ಆನೆಗಳಿಗೆ ಡ್ರೈಫ್ರೂಟ್ಸ್ ಲಡ್ಡುಗಳನ್ನು ನೀಡುತ್ತೇವೆ ಎಂದು ಹೇಳಿದ್ದರು. ಈ ಲಡ್ಡುಗಳನ್ನು ಮನಷ್ಯರು ತಿನ್ನಬಹುದು. ಇದೀಗ ದೀಪಾವಳಿಗೂ ಮುನ್ನವೇ 'ಅಂಬಾನಿ ಲಡ್ಡು' ರೆಸಿಪಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಮಾಡಲು ಸುಲಭವಾದ ಈ ಲಡ್ಡು ಆರೋಗ್ಯಕ್ಕೂ ತುಂಬಾ ಒಳ್ಳೆಯದು.