vastu tips: ಅನೇಕರು ಮನೆಯಲ್ಲಿ ವಿವಿಧ ರೀತಿಯ ಗಿಡ, ಮರಗಳನ್ನು ನೆಡುತ್ತಾರೆ. ಮನೆಯಲ್ಲಿ ಮರ, ಗಿಡಗಳನ್ನು ಬೆಳೆಸಿದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹರಿಯುತ್ತದೆ. ಆದರೆ, ಕೆಲವು ಗಿಡಗಳನ್ನು ಮನೆ ಆವರಣದಲ್ಲಿ ಬೆಳೆಸುವುದಿಲ್ಲ ಎನ್ನಲಾಗಿದೆ. ವಾಸ್ತು ಶಾಸ್ತ್ರ ಯಾವ ಮರವನ್ನು ಮನೆ ಮುಂದೆ ಇಡಬಾರದು ಎನ್ನಲಾಗುತ್ತದೆ ಎನ್ನುವ ಕುರಿತಾಗಿ ನಾವು ಇಂದು ತಿಳಿದುಕೊಳ್ಳೋಣ..
ವಾಸ್ತು ಶಾಸ್ತ್ರದ ಪ್ರಕಾರ, ಪಪ್ಪಾಯಿ ಮರವನ್ನು ಅಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆ ಆವರಣದಲ್ಲಿ ಪಪ್ಪಾಯಿ ಗಿಡ ನೆಟ್ಟರೆ ಹಣದ ಸಮಸ್ಯೆ ಸದಾ ಮನೆಯನ್ನು ಕಾಡುತ್ತದೆ ಎನ್ನುತ್ತಾರೆ. ಇದಲ್ಲದೆ, ಮನೆಯಲ್ಲಿ ಯಾವಾಗಲೂ ಜಗಳಗಳು ಮತ್ತು ಕಿರಿಕಿರಿಗಳು ಉದ್ಭವಿಸುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.
ಮನೆಯ ಮುಂದೆ ಪಪ್ಪಾಯಿ ಮರ ಇರುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ನಿಮ್ಮ ಮನೆಯ ಮುಂದೆ ತಪ್ಪಾಗಿ ಮರ ಬೆಳೆದರೆ ಆ ಬೀಜವನ್ನು ಬೇರೆಡೆ ನೆಡಬೇಕು ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು. ಏಕೆಂದರೆ ಮನೆ ಮುಂದೆ ಪಪ್ಪಾಯಿ ಗಿಡ ನೆಟ್ಟರೆ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ( vastu tips )
ಪಪ್ಪಾಯಿ ಮರವನ್ನು ಪೂರ್ವಜರ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಈ ಮರವನ್ನು ಮನೆಯ ಹತ್ತಿರ ಅಥವಾ ಮನೆಯ ಮುಂದೆ ನೆಡಬಾರದು ಎಂದು ಹೇಳಲಾಗುತ್ತದೆ, ಮನೆ ಮುಂದೆ ಮತ್ತು ಮನೆಯ ಆವರಣದಲ್ಲಿ ಪಪ್ಪಾಯಿ ಗಿಡವನ್ನು ನೆಡುವುದರಿಂದ ಮಕ್ಕಳಿಗೆ ಯಾವಾಗಲೂ ತೊಂದರೆಯಾಗುತ್ತದೆ ಎಂದು ಹೇಳಲಾಗುತ್ತದೆ. . ಆದ್ದರಿಂದಲೇ ಮನೆ ಮುಂದೆ ಪಪ್ಪಾಯಿ ಗಿಡ ನೆಡುವುದು ಒಳ್ಳೆಯದಲ್ಲ ಎನ್ನುತ್ತಾರೆ.
ಪಪ್ಪಾಯಿ ಗಿಡವನ್ನು ಮನೆಯ ಮುಂದೆ ನೆಟ್ಟರೆ ಮನೆಯಿಂದ ಶಾಂತಿ ನೆಮ್ಮದಿ ದೂರವಾಗುತ್ತದೆ. ಆದ್ದರಿಂದಲೇ ಮನೆ ಮುಂದೆ ಪಪ್ಪಾಯಿ ಗಿಡ ನೆಡಬಾರದು ಎನ್ನುತ್ತಾರೆ.
ಗಮನಿಸಿ:
ಇಲ್ಲಿ ನೀಡಲಾಗಿರುವ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಕಲೆ ಹಾಕಿರುವ ಮಾಹಿತಿ ಆಧರಿಸಿ ನೀಡಲಾಗಿದೆ. ನಿಮ್ಮ ಮಾಹಿತಿಗಾಗಿ ಮಾತ್ರ. ಈ ಕುರಿತಾಗಿ ನಿಮಗೆ ಯಾವುದೇ ಅನುಮಾನಗಳಿದ್ದರೆ ತಜ್ಞರ ಸಲಹೆ ಪಡೆದುಕೊಳ್ಳಿ...