ಲೈಫ್‌ಸ್ಟೈಲ್

ಬ್ರೇಕ್ ಅಪ್​ ಆಗಿದ್ಯಾ? ಟಾಯ್ಲೆಟ್ ಪೇಪರ್ ರೀತಿ "ನಿಮ್ಮ ಮಾಜಿಯನ್ನು ಫ್ಲಶ್ ಮಾಡಿ"..ಭಗ್ನ ಪ್ರೇಮಿಗಳಿಗಾಗಿ ಆಫರ್

ಬೆಂಗಳೂರು: ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಜಗತ್ತಿನಾದ್ಯಂತ ನಾನಾ ಸಿದ್ಧತೆಗಳು ನಡೆಯುತ್ತಿವೆ. ಈ ಸಮಯದಲ್ಲಿ, ಪ್ರತಿ ಕಂಪನಿಯು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಕೊಡುಗೆಗಳನ್ನು ತರುತ್ತದೆ. ಜನರಿಗೆ ವಿಭಿನ್ನ ಅನುಭವವನ್ನು ನೀಡಲು ವಿವಿಧ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಇದೇ ವೇಳೆ ‘ಹೂ ಗಿವ್ಸ್ ಎ ಕ್ರಾಪ್’ ಹೆಸರಿನ ಕಂಪನಿ ಜನರಿಗಾಗಿ ವಿಶೇಷ ಆಫರ್ ನೀಡಿದೆ

ಪ್ರೇಮಿಗಳ ದಿನದಂದು ನಿಮ್ಮ ಮುರಿದುಹೋಗಿರುವ ಸಂಬಂಧವನ್ನು ಮರೆತು ಮುನ್ನಡೆಯಲು ಕಂಪನಿಯು ಅವಕಾಶವನ್ನು ನೀಡುತ್ತಿದೆ. ಪ್ರೀತಿಸಿ ಮೋಸ ಹೋದವರಿಗಾಗಿಯೇ ಈ ವಿಶೇಷ ಕೊಡುಗೆ. ನಿಮ್ಮ ಹಳೆಯ ಪ್ರೀತಿಯನ್ನು ಹೊರಹಾಕುವ ಮೂಲಕ ನಿಮ್ಮ ಕೋಪವನ್ನು ಹೊರಹಾಕಬಹುದು ಮತ್ತು ಮುಂದುವರಿಯಬಹುದು ಎಂದು ಕಂಪನಿ ಹೇಳುತ್ತದೆ. 

'ಹೂ ಗಿವ್ಸ್ ಎ ಕ್ರಾಪ್' ಹೆಸರಿನ ಕಂಪನಿಯು ಟಾಯ್ಲೆಟ್ ಪೇಪರ್ ಅನ್ನು ತಯಾರಿಸುತ್ತದೆ. ಕಂಪನಿಯ ಈ ವಿಶೇಷ ಕೊಡುಗೆಯ ಹೆಸರು 'ಫ್ಲಶ್ ಯುವರ್ ಎಕ್ಸ್'. ಕಂಪನಿಯು ತನ್ನ ವಿಶೇಷ ಕೊಡುಗೆಯಲ್ಲಿ ಹೀಗೆ ಹೇಳಿದೆ - "ನಿಮ್ಮ ಕೆಟ್ಟ ನೆನಪುಗಳ ಡ್ರಾಯರ್‌ನಲ್ಲಿ ಬಿದ್ದಿರುವ ಪ್ರೇಮ ಪತ್ರಗಳನ್ನು ನೀವು ನಮಗೆ ಮೇಲ್ ಮಾಡಿ ಮತ್ತು ನಾವು ಅವುಗಳನ್ನು ಉತ್ಪಾದನೆಗೆ ತೆಗೆದುಕೊಳ್ಳುತ್ತೇವೆ. ನಾವು ಆ ಪತ್ರಗಳನ್ನು ಟಾಯ್ಲೆಟ್ ಪೇಪರ್ ಆಗಿ  ಪರಿವರ್ತಿಸುವೆವು. ಏಕೆಂದರೆ ಅಂತಹ ಕೆಟ್ಟ ನೆನಪುಗಳು ಟಾಯ್ಲೆಟ್​​ನಲ್ಲರುವುದೆ ಸೂಕ್ತ. ಫೆಬ್ರವರಿ 29 ರವರೆಗೆ ಪತ್ರಗಳನ್ನು ಕಳುಹಿಸುವ ಅವಕಾಶವನ್ನು ಕಂಪನಿ ನೀಡಿದೆ. 

ಕಂಪನಿಯು ಹಳೆಯ ಪ್ರೇಮ ಪತ್ರಗಳು, ಕಾರ್ಡ್‌ಗಳು ಅಥವಾ ವಾಟ್ಸಾಪ್ ಚಾಟ್‌ಗಳ ಪ್ರಿಂಟ್‌ಔಟ್‌ಗಳನ್ನು ಟಾಯ್ಲೆಟ್ ರೋಲ್‌ಗಳಾಗಿ ಪರಿವರ್ತಿಸುವ ಮೂಲಕ ಮಾರಾಟ ಮಾಡುತ್ತಿದೆ. ಇದರಿಂದ ಜನರು ಅದನ್ನು ಬಳಸುತ್ತಾರೆ ಮತ್ತು ಫ್ಲಶ್ ಮಾಡಬಹುದು. ಕೆಟ್ಟ ನೆನಪುಗಳನ್ನು ಟಾಯ್ಲೆಟ್ ನಲ್ಲಿ ಇಡುವುದು ಒಳ್ಳೆಯದು ಹಾಗೂ ಅದ್ರ ಜಾಗ ಕೂಡ ಅದೇ ಆಗಿದೆ ಎಂದು ಕಂಪನಿ ಜಾಹೀರಾತಿನಲ್ಲಿ ಹೇಳಿದೆ.

https://www.vijayavani.net/heroine-barkha-madan-who-gave-up-acting-and-became-a-nun#:~:text=Home%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE%E0%B2%9F%E0%B2%BE%E0%B2%B2%E0%B2%BF%E0%B2%B5%E0%B3%81%E0%B2%A1%E0%B3%8D-,%E0%B2%90%E0%B2%B6%E0%B3%8D%E0%B2%B5%E0%B2%B0%E0%B3%8D%E0%B2%AF%E0%B2%BE%20%E0%B2%B0%E0%B3%88%E0%B2%97%E0%B3%86%20%E0%B2%9F%E0%B2%95%E0%B3%8D%E0%B2%95%E0%B2%B0%E0%B3%8D%E2%80%8B%E2%80%8B%20%E0%B2%95%E0%B3%8A%E0%B2%9F%E0%B3%8D%E0%B2%9F%E0%B2%BF%E0%B2%A6%E0%B3%8D%E0%B2%A6%20%E0%B2%96%E0%B3%8D%E0%B2%AF%E0%B2%BE%E0%B2%A4%20%E0%B2%A8%E0%B2%9F%E0%B2%BF%20%E0%B2%88%E0%B2%97%20%E0%B2%B8%E0%B2%A8%E0%B3%8D%E0%B2%AF%E0%B2%BE%E0%B2%B8%E0%B2%BF,%E0%B2%97%E0%B3%81%E0%B2%A1%E0%B3%8D%20%E0%B2%AC%E0%B3%88%20%E0%B2%B9%E0%B3%87%E0%B2%B3%E0%B2%BF%20%E0%B2%B9%E0%B3%86%E0%B2%B8%E0%B2%B0%E0%B2%A8%E0%B3%8D%E0%B2%A8%E0%B3%81%20%E0%B2%AC%E0%B2%A6%E0%B2%B2%E0%B2%BE%E0%B2%AF%E0%B2%BF%E0%B2%B8%E0%B2%BF%E0%B2%95%E0%B3%8A%E0%B2%82%E0%B2%A1%E0%B2%B3%E0%B3%81&text=%E0%B2%A8%E0%B2%B5%E0%B2%A6%E0%B3%86%E0%B2%B9%E0%B2%B2%E0%B2%BF%3A%20%E0%B2%B9%E0%B3%86%E0%B2%B8%E0%B2%B0%E0%B3%81%2C%20%E0%B2%95%E0%B3%80%E0%B2%B0%E0%B3%8D%E0%B2%A4%E0%B2%BF%2C%20%E0%B2%B9%E0%B2%A3,%E0%B2%AC%E0%B2%BF%E0%B2%9F%E0%B3%8D%E0%B2%9F%E0%B3%81%20%E0%B2%AC%E0%B3%8C%E0%B2%A6%E0%B3%8D%E0%B2%A7%20%E0%B2%A7%E0%B2%B0%E0%B3%8D%E0%B2%AE%E0%B2%B5%E0%B2%A8%E0%B3%8D%E0%B2%A8%E0%B3%81%20%E0%B2%B8%E0%B3%8D%E0%B2%B5%E0%B3%80%E0%B2%95%E0%B2%B0%E0%B2%BF%E0%B2%B8%E0%B2%BF%20%E0%B2%B8%E0%B2%A8%E0%B3%8D%E0%B2%AF%E0%B2%BE%E0%B2%B8%E0%B2%BF%E0%B2%A8%E0%B2%BF%E0%B2%AF%E0%B2%BE%E0%B2%A6%E0%B2%B3%E0%B3%81.