Turmeric Water Benefits for Skin
- ಮುಖದ ಕಾಂತಿ ಹೆಚ್ಚಿಸಲು ಅರಿಶಿನ ನೀರು ಕುಡಿಯುವುದು ಬೆಸ್ಟ್.
- ಮೊಡವೆ, ಉರಿಯೂತ ಸೇರಿದಂತೆ ನಾನಾ ರೀತಿಯಲ್ಲಿ ಆರೋಗ್ಯಕರ ಸಹಾಯ.
- ಹಾಲಿನ ಕೆನೆ ಮತ್ತು ಅರಿಶಿನ ಬೆರಸಿಯೂ ಮುಖಕ್ಕೆ ಹಚ್ಚುವುದು ಆರೋಗ್ಯಕರ.
Turmeric water for skin: ಭಾರತೀಯ ಮಹಿಳೆಯರು ಅನಾದಿ ಕಾಲದಿಂದಲೂ ಸೌಂದರ್ಯ ಕಾಪಾಡಿಕೊಳ್ಳಲು, ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಅರಿಶಿನ ಬಳಕೆ ಮಾಡುತ್ತಾರೆ. ಇಂದು ಸಹ ಹಲವರು ಹಾಲಿನ ಕೆನೆಗೆ ಕೊಂಚ ಅರಿಶಿನ ಬೆರಸಿ ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದು, ಇಲ್ಲವೇ ಅರಿಶಿನ ಮಾತ್ರ ಹಚ್ಚಿ ಮಸಾಜ್ ಮಾಡುವುದು ಸೇರಿದಂತೆ ನಾನಾ ವಿಧಾನದಲ್ಲಿ ಅರಿಶಿನ ಬಳಕೆ ಮಾಡಲಾಗುತ್ತದೆ.
ಮದುವೆ ಸಮಯದಲ್ಲಿ ಅರಿಶಿನ ಶಾಸ್ತ್ರ ಮಾಡುವುದು. ಶುಕ್ರವಾರದಂದು ಮುಖಕ್ಕೆ ಅರಿಶಿನ ಹಚ್ಚಿ ಸ್ನಾನ ಮಾಡುವುದು, ಭಾಗಶಃ ಅಡುಗೆಯಲ್ಲಿ ಅರಿಶಿನ ಬಳಕೆ ಮಾಡುವುದು ದಕ್ಷಿಣ ಭಾರತೀಯರ ಪ್ರಮುಖ ಆಚರಣೆಯಾಗಿದೆ. ಆದರೆ, ಇದರ ಹಿಂದೆ ನಮಗೆ ತಿಳಿದಷ್ಟು ಲಾಭಗಳಿವೆ ಆ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
ಹಳೆ ಅಭ್ಯಾಸಕ್ಕೆ ಹೊಸ ತಿರುವು
ಈ ಹಳೆಯ ಅಭ್ಯಾಸ ಸದ್ಯ ಆಧುನಿಕವಾಗಿ ಪರಿವರ್ತನೆಗೊಂಡಿದೆ. ಅದು ಹೇಗೆ ಎಂದರೆ, ಹಿಂದೆ ಮುಖಕ್ಕೆ ಅರಿಶಿನ ಹಚ್ಚುತ್ತಿದ್ದ ಪದ್ಧತಿಯನ್ನ ಬಿಟ್ಟು, ಈಗ ಕುದಿಸಿದ ನೀರಿಗೆ ಕೊಂಚ ಅರಿಶಿನ ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು. ಇದು ದೇಹದ ಚರ್ಮದ ಒಡಕು, ಜೀರ್ಣಕ್ರಿಯೆ ಎಲ್ಲದಕ್ಕೂ ಸಹಕಾರಿ.
ಅರಿಶಿನ ನೀರು ಕುಡಿಯುವುದು ಹೀಗೆ
ಸ್ವಲ್ಪ ಬೆಚ್ಚಗಿನ ನೀರಿಗೆ ಅರಿಶಿನ ಹಾಕಿ ಕುಡಿಯುವುದು. ಇಲ್ಲವಾದಲ್ಲಿ ಅರಿಶಿನ ನೀರು, ನಿಂಬೆ, ಜೇನುತುಪ್ಪ ಬೆರೆಸಿ ಕುಡಿಯುವುದು ಇಲ್ಲವೆ ಕರಿ ಮೆಣಸು ಹಾಕಿ ಕುಡಿಯುವುದು. ಅರಿಶಿನದಲ್ಲಿರವ ಕರ್ಕ್ಯುಮಿನ್ ಎಂಬ ಅಂಶವು ಚರ್ಮದ ಉರಿಯೂತ ನಿವಾರಣೆಯ ಲಕ್ಷಣವನ್ನು ಹೊಂದಿದೆ ಎನ್ನಲಾಗಿದೆ.
ಅರಿಶಿನ ನೀರು ಕುಡಿಯಲು ಅಸಾಧ್ಯ ಎಂದು ಎನಿಸಿದರೆ, ಅರಿಶಿನ ಹಾಗೂ ನೀರನ್ನು ಚೆನ್ನಾಗಿ ಕುದಿಸಿ ಒಂದು ಕಡೆ ನೀರು ತಣ್ಣಗಾಗಲು ಬಿಡಿ. ಅದಾದ ನಂತರ ಶುದ್ಧ ಕಾಟನ್ ತೆಗೆದುಕೊಂಡು ಮುಖಕ್ಕೆ ಹಚ್ಚಿ ಅದೇ ನೀರಿನಿಂದ ತೊಳೆಯಿರಿ.
ಅರಿಶಿನ ನೀರಿನಿಂದಾಗುವ ಪ್ರಯೋಜನಗಳೇನು?
ಅರಿಶಿನ ನೀರು ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ರಾತ್ರೋರಾತ್ರಿ ಪರಿಣಾಮ ಬೀರುವುದಿಲ್ಲ, ಆದರೆ ಕೊಂಚ ಸಮಯ ತೆಗೆದುಕೊಂಡು ಹೊಳೆಯುವ ಚರ್ಮವನ್ನು ನೀಡುತ್ತದೆ. ಇದು ಚರ್ಮದ ಒಳಗಿನಿಂದ ನೈಸರ್ಗಿಕವಾಗಗಿ ಹೊಳಪನ್ನು ನೀಡುತ್ತದೆ. ಆದರೆ ನೆನಪಿಡಿ ಯಾವುದೇ ನೈಸರ್ಗಿಕ ವಿಧಾನ ನಿಮಗೆ ತಕ್ಷಣವೇ ಪರಿಹಾರವನ್ನು ನೀಡೋದಿಲ್ಲ.
ಉರಿಯೂತ ನಿವಾರಕ
ಮುಖದ ಚರ್ಮದ ಮೇಲೆ ಮೊಡವೆಗಳು ಏಳುತ್ತಿವೆ ಎಂದರೆ, ಹಾರ್ಮೋನ್ ಬದಲಾವಣೆ, ಒತ್ತಡ ನಿದ್ರೆ ಕೊರತೆ, ಆಹಾರ ಪದ್ದತಿಯೇ ಮೂಲ ಕಾರಣ. ಅರಿಶಿನ ನೀರು ಉರಿಯೂತ ಕಡಿಮೆ ಮಾಡುತ್ತದೆ. ಇದನ್ನು ನಿಮ್ಮ ದಿನನಿತ್ಯದ ಆಹಾರ ದಿನಚರಿಯಲ್ಲಿ ಸೇರಿಸಿಕೊಳ್ಳಬಹುದಾದ ಆರೋಗ್ಯkರ ಅಭ್ಯಾಸಗಳಲ್ಲಿ ಒಂದಾಗಿದೆ.
ಉತ್ತಮ ಸೌಂದರ್ಯಕ್ಕೆ ಹೀಗೆ ಮಾಡಿ
ಮೂರು ಲೀಟರ್ ನೀರನ್ನು ನಿತ್ಯ ಕುಡಿಯುವುದು ಅಭ್ಯಾಸ ಮಾಡಿಕೊಳ್ಳಿ ಎಲ್ಲಿಯೇ ಪ್ರಯಾಣ ಕೈಗೊಂಡರು ಸಹ ಮುಖಕ್ಕೆ ಸನ್ ಸ್ಕ್ರೀನ್ ಹಚ್ಚುವ ಅಭ್ಯಾಸ ಮುಖ್ಯ. ಇದು ಚರ್ಮಕ್ಕೆ ಹಾನಿ ಮಾಡುವ ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತೆ, (ಏಜೆನ್ಸೀಸ್).