ಲೈಫ್‌ಸ್ಟೈಲ್

ಟ್ರೆಂಡಿಂಗ್​ ಸ್ಕಿನ್​​-ಐಸಿಂಗ್​ ಫಾಲೋ ಮಾಡ್ತಿದ್ರೆ ಅಪಾಯ ತಪ್ಪಿದ್ದಲ್ಲ; ಈ ಬಗ್ಗೆ ತಜ್ಞರು ಏನೇಳಿದ್ದಾರೆ? ಇಲ್ಲಿದೆ ಡೀಟೇಲ್ಸ್​​

ಚರ್ಮ, ಕೂದಲು ಮತ್ತು ಆರೋಗ್ಯದ ಪ್ರಯೋಜನಗಳಿಗಾಗಿ ಮನೆಮದ್ದುಗಳಿಗಿಂತ ಉತ್ತಮವಾದ ಚಿಕಿತ್ಸೆ ಮತ್ತೊಂದಿಲ್ಲ. ಆದರೆ ತ್ವಚೆಯ ಆರೈಕೆಯ ವಿಷಯಕ್ಕೆ ಬಂದರೆ ಇತ್ತೀಚೆಗೆ ಹೆಚ್ಚು ಟ್ರೆಂಡ್​ ಆಗಿರುವುದು ಸ್ಕಿನ್-ಐಸಿಂಗ್​​ ಅಥವಾ ಐಸ್ ಕೋಲ್ಡ್ ಕ್ರೈಯೊಥೆರಪಿ. ಸ್ಕಿನ್​-ಐಸಿಂಗ್​ ಎಂದರೆ ಐಸ್ ಕ್ಯೂಬ್​​ಗಳನ್ನು ಮುಖದ ಮೇಲೆ ಮಸಾಜ್ ಮಾಡುವುದು. ಸ್ಕಿನ್ ಐಸಿಂಗ್ ಅನ್ನು ಅನೇಕ ಸ್ಪಾಗಳಲ್ಲಿ ಚರ್ಮದ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಇದನ್ನು ಐಸ್​​ ಫೇಶಿಯಲ್​​ ಎಂದೂ ಕರೆಯಲಾಗುತ್ತದೆ. ಆದರೆ ಈ ಸ್ಕಿನ್​ ಐಸಿಂಗ್​ ಮಾಡುವುದರಿಂದ ಏನೆಲ್ಲಾ ಅಡ್ಡಪರಿಣಾಮ ಆಗುತ್ತದೆ. ಈ ವಿಚಾರವಾಗಿ ತಜ್ಞರೊಬ್ಬರು ಹೇಳಿರೊದೇನು.. ಇಲ್ಲಿದೆ ಮಾಹಿತಿ

ಇದನ್ನು ಓದಿ: ವೀರ್ ಪಹಾರಿಯಾ ಜತೆ ಮಾನುಷಿ ಛಿಲ್ಲರ್ ಡೇಟಿಂಗ್​​?; ಫ್ಯಾನ್ಸ್​​ ಪ್ರಶ್ನೆಗೆ ಕಾರಣವಾಗಿದ್ದು ಈ ವೀಡಿಯೊ… ಸ್ಕಿನ್​​-ಐಸಿಂಗ್​ನಿಂದ ಎದುರಾಗುವ ಸಮಸ್ಯೆಗಳು ಹೀಗಿವೆ:

  • ನಮ್ಮ ಚರ್ಮವು ಸರಾಸರಿ ತಾಪಮಾನದಲ್ಲಿರುತ್ತದೆ. ಚರ್ಮದ ಮೇಲೆ ಐಸ್​ಕ್ಯೂಬ್​ಗಳನ್ನು ಅಪ್ಲೈ ಮಾಡುವುದುರಿಂದ ಕಿರಿಕಿರಿ ಉಂಟಾಗುತ್ತದೆ. ಮುಖದಲ್ಲಿ ಕೆಂಪು ಬಣ್ಣದ ಮೊಡವೆಗಳು, ಉರಿಯುವಿಕೆ, ತುರಿಕೆ ಉಂಟಾಗುತ್ತದೆ.
  • ಚರ್ಮವು ದೇಹವನ್ನು ಬಾಹ್ಯ ಒತ್ತಡಗಳಿಂದ ರಕ್ಷಿಸುತ್ತದೆ. ನಿಮ್ಮ ಮುಖದ ಮೇಲೆ ನೇರವಾಗಿ ಐಸ್ ಬಳಸುವಿಕೆಯು ನೈಸರ್ಗಿಕ ತಡೆಗೋಡೆಯಂತಿರುವ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಚರ್ಮವನ್ನು ದುರ್ಬಲಗೊಳಿಸಿ ಸೋಂಕು ದೇಹದಲ್ಲಿ ಹರಡಲು ಸುಲಭವಾಗಿ ದಾರಿ ಮಾಡಿಕೊಟ್ಟಂತಾಗುತ್ತದೆ.
  • ಚರ್ಮದ ಕೆಳಗೆ ನೂರಾರು ರಕ್ತದ ಕ್ಯಾಪಿಲ್ಲರಿಗಳಿವೆ. ಅದು ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಐಸ್​​ಕ್ಯೂಬ್​ ಅನ್ನು ನೇರವಾಗಿ ಚರ್ಮಕ್ಕೆ ಅಪ್ಲೈ ಮಾಡಿದಾಗ ಈ ಕ್ಯಾಪಿಲ್ಲರಿಗಳು ಒತ್ತಡಕ್ಕೆ ಒಳಗಾಗುತ್ತವೆ. ಇದು ದೀರ್ಘಕಾಲದ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.
  • ರೊಸಾಸಿಯಾ, ಎಸ್ಜಿಮಾ ಅಥವಾ ಮೊಡವೆಗಳಂತಹ ಪರಿಸ್ಥಿತಿಗಳಿಂದ ಈಗಾಗಲೇ ಬಳಲುತ್ತಿರುವವರಿಗೆ ಸ್ಕಿನ್ ಐಸಿಂಗ್ ಅಭ್ಯಾಸ ಮಾಡುವುದರಿಂದ ಅವರ ಸ್ಥಿತಿ ಇನ್ನಷ್ಟು ಹದಗೆಡುತ್ತದೆ. ತಂಪಾದ ತಾಪಮಾನವು ನಮ್ಮ ಚರ್ಮದಲ್ಲಿ ನೈಸರ್ಗಿಕವಾಗಿರುವ ಆಯಿಲಿ ಮತ್ತು ಮಾಯಿಶ್ಚರೈಸರ್ ಅಂಶವನ್ನು ಹೊರತೆಗೆದು ಚರ್ಮವನ್ನು ಶುಷ್ಕ ಮತ್ತು ಫ್ಲಾಕಿಯಾಗಿ ಕಾಣುವಂತೆ ಮಾಡುತ್ತದೆ.
  • ಸ್ಕಿನ್​​ ಐಸಿಂಗ್,​​ ಪಫಿನೆಸ್ ಮತ್ತು ಉರಿಯೂತದ ವಿಷಯದಲ್ಲಿ ರಿಲೀಫ್​ ಆದ್ದಂತೆ ಅನ್ನಿಸುತ್ತದೆಯಾದರೂ, ಈ ಪರಿಣಾಮಗಳು ಅಲ್ಪಾವಧಿಗೆ ಮಾತ್ರ ಇರುತ್ತದೆ. ಈ ರೀತಿ ಮಾಡುವುದರಿಂದ ತ್ವಚೆಯ ಮೇಲೆ ಆಗುವ ದುಷ್ಪರಿಣಾಮವು ಹೆಚ್ಚು ವಯಸ್ಸದಂತೆ ಕಾಣುವ ಹಾಗೆ ಮಾಡುತ್ತದೆ. ಚರ್ಮದಲ್ಲಿನ ಸೂಕ್ಷ್ಮ ಗೆರೆಗಳು, ಸುಕ್ಕುಗಳು ಹೆಚ್ಚಾಗುತ್ತವೆ.

ಟ್ರೆಂಡ್​​​ಗಳನ್ನು ಫಾಲೋ ಮಾಡುವ ಮೊದಲು ಡರ್ಮಟಾಲಜಿಸ್ಟ್​ಗಳನ್ನು ಸಂಪರ್ಕಿಸಬೇಕು. ಏಕೆಂದರೆ ಒಬ್ಬರಿಗೆ ಅನ್ವಯಿಸುವ ಟಿಪ್ಸ್​​ಗಳು ಮತ್ತೊಬ್ಬರಿಗೆ ಅನ್ವಯಿಸದೆ ಇರಬಹುದು. ಆರೋಗ್ಯಕರ, ಹೊಳೆಯುವ ಚರ್ಮವನ್ನು ಪಡೆಯಲು ಸಂಶೋಧಿಸಿರುವ ಹಲವು ಮಾರ್ಗಗಳಿವೆ. ಅದನ್ನು ನಿಮಗೆ ಸಲಹೆಯಾಗಿ ನೀಡುತ್ತಾರೆ ಎಂಬುದು ತಜ್ಞರು ಅಭಿಪ್ರಾಯ.