ಲೈಫ್‌ಸ್ಟೈಲ್

ಮನೆ ಅಲಂಕಾರಕ್ಕೆ ಸಾಂಪ್ರದಾಯಿಕ ಸ್ಪರ್ಶ; ಇಮ್ಮಡಿಯಾಗುತ್ತೆ ಸೊಬಗು!

ಬೆಂಗಳೂರು: ಮನೆಯನ್ನು ಅಲಂಕರಿಸುವ ವಿಧಾನವು ನಿವಾಸಿಗಳ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಅತಿಥಿಗಳ ಮೇಲೆ ಉತ್ತಮ ಪ್ರಭಾವ ಬೀರಲು ಸಹಕರಿಸುತ್ತದೆ. ಒಳಾಂಗಣ ವಿನ್ಯಾಸದ ಸಾಂಪ್ರದಾಯಿಕ ಶೈಲಿಯು ಮನೆಯ ಸೊಬಗನ್ನು ಇಮ್ಮಡಿಗೊಳಿಸುತ್ತವೆ. ಹೌದು. ನೀವು ನಿಮ್ಮ ನಿವಾಸಕ್ಕೆ ಸಾಂಪ್ರದಾಯಿಕ ಸ್ಪರ್ಶವನ್ನು ನೀಡಲು ಬಯಸಿದರೆ ಈ ಕೆಳಗಿನ ಸ್ಫೂರ್ತಿದಾಯಕ ಕಲ್ಪನೆಗಳನ್ನು ಪ್ರಯತ್ನಿಸಬಹುದು.

ಹೂದಾನಿಗಳು

ಗಾಜು ಅಥವಾ ಸೆರಾಮಿಕ್​, ಲೋಹ ಅಥವಾ ಕಾಂಕ್ರೀಟ್​ ಬಳಸಿ ಉತ್ತಮ ಕುಶಲಕರ್ಮಿಗಳು ತಯಾರಿಸಿದ ಹೂದಾನಿಗಳು ಸಾಂಪ್ರದಾಯಿಕವಾಗಿ ರಾಜಮನೆತನದ ಲುಕ್​ ನೀಡುತ್ತದೆ. ಹೂದಾನಿಗಳ ಗಾತ್ರ ಮತ್ತು ಶೈಲಿಯನ್ನು ಅವಲಂಬಿಸಿ ಅವುಗಳನ್ನು ಮನೆಯ ಸೂಕ್ತ ಜಾಗದಲ್ಲಿ ಇಟ್ಟರೆ ಅವು ಮನೆಯ ಆತಂರಿಕ ಸೊಬಗನ್ನು ಹೆಚ್ಚಿಸುತ್ತವೆ.

ವಾಲ್​ ಆರ್ಟ್​

ನಿಮ್ಮ ಮನೆಯಲ್ಲಿ ಖಾಲಿ ಗೋಡೆಯನ್ನು ಅಲಂಕರಿಸುವ ಮೂಲಕ ಮನೆಯನ್ನು ಇನ್ನಷ್ಟು ಸುಂದರಗೊಳಿಸಬಹುದು. ಇದು ಚಿತ್ರದ ಮುಖೇನ ಸಂಭಾಷಣೆ ರವಾನಿಸುತ್ತದೆ. ನಿಮ್ಮ ಮೆಚ್ಚಿನ ವಸ್ತುಗಳ ಪ್ರದರ್ಶನ, ನೆನಪುಗಳ ಸಂಗ್ರಹ, ನಿಮ್ಮ ಹವ್ಯಾಸಗಳ ಪ್ರಾತಿನಿಧ್ಯ ಮತ್ತು ಇನ್ನೂ ಹೆಚ್ಚಿನವುಗಳಾಗಿ ಕಾರ್ಯನಿರ್ವಹಿಸುವ ಜತೆಗೆ ವಿಶೇಷವೆನಿಸುತ್ತದೆ.

ಕ್ಯಾಂಡಲ್​ ಸ್ಟ್ಯಾಂಡ್​ಗಳು

ನೀವು ಕ್ಯಾಂಡಲ್​ ಲೈಟ್​ ಡಿನ್ನರ್​ ಅಥವಾ ಕ್ಯಾಂಡಲ್​ಪ್ರಿಯರಾಗಿದ್ದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ನಮೂನೆಯ ಕ್ಯಾಂಡಲ್​ ಸಂಗ್ರಹಿಸಿ ಅವುಗಳನ್ನು ಲೋಹ ಮತ್ತು ಗಾಜಿನ ಸ್ಟ್ಯಾಂಡ್​​ಗಳ ಮೇಲಿರಿಸಿ. ದೀಪ ಪ್ರಕಾಶಮಾನವಾಗಿ ಹೊಳೆಯುವುದರ ಜತೆಗೆ ಸುತ್ತಮುತ್ತಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಉಚ್ಚಾರಣಾ ಕೋಷ್ಟಕಗಳು

ಸಾಮಾನ್ಯವಾಗಿ ದೊಡ್ಡ ಕಾಫಿ ಟೇಬಲ್​ಗಳು (ಟಿಪಾಯಿ) ಸಾಕಷ್ಟು ಜಾಗವನ್ನು ಆಕ್ರಮಿಸುತ್ತವೆ. ಅವುಗಳ ಬದಲಿಗೆ ಉಚ್ಚಾರಣಾ ಕೋಷ್ಟಕಗಳನ್ನು ಬಳಸಬಹುದು. ಅದು ಅಲಂಕಾರಿಕ ತುಣುಕುಗಳನ್ನು ಹಿಡಿದಿಡಲು ಕೂಡ ಸಹಕರಿಸುತ್ತದೆ. ಜತೆಗೆ ವಿನೂತನವಾಗಿಯೂ ಕಾಣುತ್ತದೆ. ಲಾಬಿ ಅಥವಾ ಸೋಫಾಗಳ ಪಕ್ಕದಲ್ಲಿ ಕೂಡ ಅವುಗಳನ್ನು ಹೊಂದಿಸಬಹುದು.

ಗೋಡೆ ಗಡಿಯಾರಗಳು

ಈ ದಿನಗಳಲ್ಲಿ ಗೋಡೆ ಗಡಿಯಾರವನ್ನು ಫ್ಯಾಷಶ್​ಗಾಗಿ ಬಳಸಲಾಗುತ್ತದೆ. ನೀವು ಗ್ರಹಿಸಿದ ಹೆಚ್ಚು ಸೊಗಸಾದ, ವಿಶಿಷ್ಟ ವಿನ್ಯಾಸದ ಗೋಡೆ ಗಡಿಯಾರಗಳು ನಿಮ್ಮ ಅಭಿರುಚಿಗೆ ತಕ್ಕಂತೆ ಆರಿಸಿ ಮನೆಯ ಚಂದವನ್ನು ಹೆಚ್ಚಿಸಬಹುದು.