ಸೈಲೆಂಟ್ ಕಿಲ್ಲರ್ ಹಾರ್ಟ್ ಅಟ್ಯಾಕ್‌ ನಿಮ್ಮ ಬಳಿ ಸುಳಿಯಬಾರದೆಂದರೆ ಈ 5 ತರಕಾರಿಗಳನ್ನು ನೀವು ಮಿಸ್​ ಮಾಡ್ಲೇಬೇಡಿ! Heart Attack 
ಲೈಫ್‌ಸ್ಟೈಲ್

ಸೈಲೆಂಟ್ ಕಿಲ್ಲರ್ ಹಾರ್ಟ್ ಅಟ್ಯಾಕ್‌ ನಿಮ್ಮ ಬಳಿ ಸುಳಿಯಬಾರದೆಂದರೆ ಈ 5 ತರಕಾರಿಗಳನ್ನು ನೀವು ಮಿಸ್​ ಮಾಡ್ಲೇಬೇಡಿ! Heart Attack

ಪ್ರಮುಖ ಮುಖ್ಯಾಂಶಗಳು

  • ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ
  • ಸಾವು ಸದ್ದಿಲ್ಲದೆ ಬಂದು ಬಾಗಿಲು ತಟ್ಟುವಂತೆ ಈ ಹೃದಯಾಘಾತದ ಸಮಸ್ಯೆಗಳು ದಿಢೀರನೆ ಎದುರಾಗುತ್ತಿವೆ
  • ಬದಲಾಗುತ್ತಿರುವ ಆಹಾರ ಪದ್ಧತಿ ಹಾಗೂ ದೈಹಿಕ ವ್ಯಾಯಾಮದ ಕೊರತೆಯೇ ಇದಕ್ಕೆಲ್ಲ ಕಾರಣ
  • ಹೃದಯಾಘಾತವನ್ನು ತಡೆಯಲು ದಿನನಿತ್ಯದ ಆಹಾರದಲ್ಲಿ ನೀವು ಈ 5 ತರಕಾರಿಗಳನ್ನು ಸೇರಿಸಲೇಬೇಕು
Heart Attack : ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಹಾಗೂ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಸಾವು ಸದ್ದಿಲ್ಲದೆ ಬಂದು ಬಾಗಿಲು ತಟ್ಟುವಂತೆ, ಈ ಹೃದಯಾಘಾತದಂತಹ ಗಂಭೀರ ಸಮಸ್ಯೆಗಳು ದಿಢೀರನೆ ಎದುರಾಗುತ್ತಿವೆ. ಆದರೆ, ವಾಸ್ತವದಲ್ಲಿ ಹೃದಯದ ಕಾಯಿಲೆಗಳು ಒಂದೇ ದಿನದಲ್ಲಿ ಬರುವುದಿಲ್ಲ, ಬದಲಿಗೆ ನಮ್ಮ ದಿನನಿತ್ಯದ ತಪ್ಪು ಜೀವನಶೈಲಿ ಮತ್ತು ಕೆಟ್ಟ ಹವ್ಯಾಸಗಳು ನಮ್ಮ ದೇಹದ ಪ್ರಮುಖ ಅಂಗವಾದ ಹೃದಯವನ್ನು ಒಳಗಿನಿಂದಲೇ ನಿಧಾನವಾಗಿ ಕೊರೆದು, ಅಂತಿಮವಾಗಿ ಮಾರಣಾಂತಿಕ ಸ್ಥಿತಿಗೆ ತಂದು ನಿಲ್ಲಿಸುತ್ತವೆ.
ಬದಲಾಗುತ್ತಿರುವ ಆಹಾರ ಪದ್ಧತಿ ಹಾಗೂ ದೈಹಿಕ ವ್ಯಾಯಾಮದ ಕೊರತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯೂ ಸಹ ಹೃದಯಾಘಾತದ ಸಮಸ್ಯೆಗೆ ತುತ್ತಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಸಾಮಾನ್ಯವಾಗಿ ಹೃದಯದ ಭಾಗಗಳಿಗೆ ರಕ್ತದ ಹರಿವು ನಿರ್ಬಂಧಿಸಲ್ಪಟ್ಟಾಗ ಅಥವಾ ಬ್ಲಾಕ್ ಆದಾಗ ಹೃದಯಾಘಾತ ಸಂಭವಿಸುತ್ತದೆ. ಹೀಗಾಗಿ, ರಕ್ತನಾಳಗಳಲ್ಲಿನ ಹಾನಿಯನ್ನು ತಡೆದು, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುವ ಮೂಲಕ ಹೃದಯಾಘಾತದ ಅಪಾಯದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ದಿನನಿತ್ಯದ ಆಹಾರದಲ್ಲಿ ಸೇರಿಸಲೇಬೇಕಾದ ಪ್ರಮುಖ 5 ತರಕಾರಿಗಳ ಕುರಿತಾದ ಮಾಹಿತಿ ಇಲ್ಲಿದೆ.

ಹಸಿರು ಎಲೆಕೋಸು ಮತ್ತು ಪಾಲಕ್ ಸೊಪ್ಪು

ಪಾಲಕ್, ದಂಟು ಮತ್ತು ಬ್ರೊಕೊಲಿಯಂತಹ ಹಸಿರು ಎಲೆ ತರಕಾರಿಗಳಲ್ಲಿ ವಿಟಮಿನ್ ಕೆ ಮತ್ತು ನೈಸರ್ಗಿಕ ನೈಟ್ರೇಟ್‌ಗಳು ಸಮೃದ್ಧವಾಗಿವೆ. ಇವು ರಕ್ತನಾಳಗಳನ್ನು ರಕ್ಷಿಸಲು, ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಅಪಧಮನಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಶಕ್ತಿಶಾಲಿ ಸಂಯುಕ್ತವಿದೆ. ಇದು ರಕ್ತನಾಳಗಳಲ್ಲಿನ ಪ್ಲೇಕ್ (ಕೊಬ್ಬಿನಾಂಶ) ಶೇಖರಣೆಯನ್ನು ತಡೆಯುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಹೆಪ್ಪುಗಟ್ಟದಂತೆ ತಡೆಯುವ ಮೂಲಕ ಹೃದಯಾಘಾತದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಕ್ಯಾರೆಟ್

ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್ ಮತ್ತು ಪೊಟ್ಯಾಸಿಯಮ್ ಅಂಶಗಳು ಹೆಚ್ಚಾಗಿವೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಹೃದಯದ ಸ್ನಾಯುಗಳಿಗೆ ಆಗುವ ಹಾನಿಯನ್ನು ತಡೆಯುತ್ತವೆ ಮತ್ತು ದೇಹದಲ್ಲಿನ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ನೆರವಾಗುತ್ತವೆ.

ಬೀಟ್‌ರೂಟ್

ಬೀಟ್‌ರೂಟ್‌ನಲ್ಲಿ ನೈಟ್ರೇಟ್‌ಗಳು ಹೇರಳವಾಗಿರುತ್ತವೆ. ಇವು ದೇಹ ಸೇರಿದಾಗ 'ನೈಟ್ರಿಕ್ ಆಕ್ಸೈಡ್' ಆಗಿ ಬದಲಾಗುತ್ತವೆ. ಇದು ರಕ್ತನಾಳಗಳನ್ನು ವಿಸ್ತರಿಸಿ, ಸರಾಗವಾಗಿ ರಕ್ತ ಪರಿಚಲನೆ ಆಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಹೃದಯದ ಮೇಲಿನ ಒತ್ತಡ ತಕ್ಷಣವೇ ಕಡಿಮೆಯಾಗುತ್ತದೆ.

ಟೊಮ್ಯಾಟೋ

ಟೊಮೆಟೊದಲ್ಲಿ ಲೈಕೋಪೀನ್ ಎಂಬ ಬಲವಾದ ಆ್ಯಂಟಿಆಕ್ಸಿಡೆಂಟ್ ಇದೆ. ಇದು ರಕ್ತನಾಳಗಳ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕೊಲೊಸ್ಟ್ರಾಲ್ ಆಕ್ಸಿಡೀಕರಣಗೊಳ್ಳುವುದನ್ನು ತಡೆಯುತ್ತದೆ. ರಕ್ತದಲ್ಲಿ ಲೈಕೋಪೀನ್ ಮಟ್ಟ ಉತ್ತಮವಾಗಿದ್ದರೆ ಹೃದಯಾಘಾತದ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ.
ಅಂದಹಾಗೆ ಈ ಎಲ್ಲ ತರಕಾರಿಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸಲಾಡ್, ಸೂಪ್ ಅಥವಾ ಕಡಿಮೆ ಎಣ್ಣೆ ಬಳಸಿ ಬೇಯಿಸಿದ ಪಲ್ಯಗಳ ರೂಪದಲ್ಲಿ ಸೇವಿಸುವುದು ಹೃದಯದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಜಾಸ್ತಿ ಎಣ್ಣೆ ಬಳಸುವುದರಿಂದ ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಿಮಗೆ ನೆನಪಿರಲಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್​).