ಲೈಫ್‌ಸ್ಟೈಲ್

ಸೆಲೆಬ್ರಿಟಿಗಳಂತೆ ಗ್ಲೋಯಿಂಗ್​​ ಸ್ಕಿನ್​​ ಪಡೆಯಲು, 10 ರೂ. ಖರ್ಚು ಮಾಡಿ ಈ ಸಿಂಪಲ್​​ ಸೀರಮ್ ತಯಾರಿಸಿ | SuperSerum

Super Serum: ಮುಖ ಕಾಂತಿಯುತವಾಗಿ ಕಾಣಲು ಮಹಿಳೆಯರು ವಿವಿಧ ಬಗೆಯ ಕ್ರೀಮ್​​ಗಳನ್ನು, ಸೀರಮ್​​ಗಳನ್ನು ಬಳಸುತ್ತಾರೆ. ಹಾಗೆಯೇ ಅವುಗಳ ಬೆಲೆಯೂ ಕೂಡ ಹೆಚ್ಚಿರುತ್ತದೆ. ಕೆಲವೊಮ್ಮೆ ಇವುಗಳಲ್ಲಿ ಬಳಸಿದ ರಾಸಾಯನಿಕಗಳು ನಿಮ್ಮ ತ್ವಚೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಹೀಗಾಗಿ ನೀವು ಕೇವಲ 10 ರೂಪಾಯಿ ಖರ್ಚು ಮಾಡಿದರೆ ಸಾಕು ಫಳ ಫಳ ಹೊಳೆಯುವ ಕಾಂತಿಯುತ ತ್ವಚೆಯನ್ನು ಪಡೆಯಹುದು. ಅದು ಕೇಲವ ನೈಸರ್ಗಿಕ, ರಾಸಾಯನಿಕ ಮುಕ್ತ ವಸ್ತುಗಳನ್ನು ಬಳಸಿ. ಹಾಗಾದ್ರೆ ಅವು ಯಾವುವು? ಅವುಗಳನ್ನು ಬಳಸುವು ವಿಧಾನ ಯಾವುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಸೌಂದರ್ಯ ಉತ್ಪನ್ನಗಳಲ್ಲೇ ಅತ್ಯಂತ ದುಬಾರಿ ಎಂದು ಪರಿಗಣಿಸಲಾದ ಮುಖದ ಸೀರಮ್ ಅನ್ನು ಮನೆಯಲ್ಲಿಯೇ ತಯಾರಿಸಲು ಕೇವಲ 3 ಪದಾರ್ಥಗಳು ಬೇಕಾಗುತ್ತವೆ. ಅಕ್ಕಿ ನೀರು, ಲೈಕೋರೈಸ್ ಮತ್ತು ಜೇನುತುಪ್ಪ ಕೇವಲ ಈ 3 ಪದಾರ್ಥಗಳನ್ನು ಬಳಸಿ 15 ನಿಮಿಷಗಳಲ್ಲಿ ಫೇಸ್ ಸೀರಮ್ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

3 ಚಮಚ ಅಕ್ಕಿ ನೆನೆಸಿದ ನೀರು

3 ಚಮಚ ಜೇನುತುಪ್ಪ

ಲೈಕೋರೈಸ್ - 3 ಸಣ್ಣ ತುಂಡು

ಅಕ್ಕಿ ನೀರು ಮತ್ತು ಜೇನುತುಪ್ಪವು ಮನೆಯಲ್ಲಿ ಯಾವಾಗಲೂ ಸಿಗುವ ಪದಾರ್ಥಗಳಾಗಿವೆ. ನಾವು ಕೆಲವು ಲೈಕೋರೈಸ್ ತುಂಡುಗಳನ್ನು ಖರೀದಿಸಲು ಕೇವಲ 10 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅದು ನಿಮ್ಮ ಮನೆಯಲ್ಲೇ ಇದ್ದರೆ ಯಾವುದೇ ವೆಚ್ಚವಿಲ್ಲದೆ ನೀವು ತ್ವರಿತವಾಗಿ ಮತ್ತು ಸುಲಭವಾಗಿ ಫೇಸ್ ಸೀರಮ್ ತಯಾರಿಸಬಹುದು.

ಸೀರಮ್ ತಯಾರಿಸುವುದು ಹೇಗೆ

ಮೊದಲು, ಒಂದು ಕಪ್ ನೀರನ್ನು ದಪ್ಪ ತಳವಿರುವ ಪಾತ್ರೆಯಲ್ಲಿ ಹಾಕಿ ಅದನ್ನು ಕುದಿಸಿ. ನಂತರ ಕೆಲವು ಲೈಕೋರೈಸ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ನೀರು ಬಣ್ಣ ಬದಲಾಗುವವರೆಗೆ ಕುದಿಸಿ, ನಂತರ ತಣ್ಣಗಾಗಲು ಬಿಡಿ.

ಈಗ, ಒಂದು ಕಪ್ ಲೈಕೋರೈಸ್ ನೀರಿನಲ್ಲಿ 3 ಟೀ ಚಮಚ ಅಕ್ಕಿ ನೀರು ಮತ್ತು ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನೀವು ಈ ಮಿಶ್ರಣವನ್ನು ಬ್ರಷ್ ಬಳಸಿ ನೇರವಾಗಿ ನಿಮ್ಮ ಕೈಗಳಿಗೆ ಹಚ್ಚಿಕೊಳ್ಳಬಹುದು, ಅಥವಾ ನೀವು ಅದನ್ನು ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿ ಮಾಯಿಶ್ಚರೈಸರ್ ಹಚ್ಚುವ ಮೊದಲು ನಿಮ್ಮ ಮುಖಕ್ಕೆ ಸಿಂಪಡಿಸಬಹುದು. ಇದು ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಮುಖಕ್ಕೆ ಹೊಳಪನ್ನು ನೀಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.