ಲೈಫ್‌ಸ್ಟೈಲ್

ಬೆಳಗ್ಗೆ ಸುಸ್ತು, ಕೆಲಸದಲ್ಲಿ ಆಲಸ್ಯಕ್ಕೆ ನಿಮ್ಮ ಬ್ರೇಕ್‌ಫಾಸ್ಟ್ ಕಾರಣ; ಇಡ್ಲಿ, ದೋಸೆ ಬದಲಾಗಿ ಈ ಸೂಪರ್ ಫುಡ್ ನಿಮ್ಮ ಲಿಸ್ಟ್​ನಲ್ಲಿರಲಿ..Health Tips

  • ಬ್ರೇಕ್​ಫಾಸ್ಟ್​​​ಗೆ ಇಡ್ಲಿ, ದೋಸೆ, ಉಪ್ಪಿಟ್ಟಿನ ಬದಲಾಗಿ ಮೊಟ್ಟೆ, ಪನೀರ್ ಬುರ್ಜಿ, ಕಡಲೆ ಹಿಟ್ಟಿನ ದೋಸೆ ತಿನ್ನಿ.

  • ಪ್ರೋಟೀನ್ ಮತ್ತು ತರಕಾರಿ ಜ್ಯೂಸ್ ನಿಮಗೆ ಕಾಡುವ ಸುಸ್ತು ಹಾಗೂ ಆಯಾಸ ದೂರ ಮಾಡುತ್ತದೆ

  • ಪಾಲಕ್, ಮೆಂತ್ಯ, ತರಕಾರಿಗಳು ಮತ್ತು ಸಿಟ್ರಸ್ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು.

Breakfast What to Eat: ಕೆಲಸ ಮಾಡುವ ವಿಚಾರದಲ್ಲಿ ಕೆಲವು ದಿನ ಉತ್ಸಾಹದಿಂದ ಇದ್ದರೆ, ಇನ್ನೂ ಕೆಲವು ದಿನ ಬೇಸರ, ನಿರುತ್ಸಾಹ ಕಾಡುವುದು, ಸುಸ್ತು, ಬಳಲಿಕೆ ಕಾಡುವುದು ಸಹಜ. ಇದಕ್ಕೆ ಹವಮಾನ ಬದಲಾವಣೆ ಮಾತ್ರವಲ್ಲ. ನೀವು ಬೆಳಿಗ್ಗೆ ಸೇವಿಸುವ ಬ್ರೇಕ್​ಫಾಸ್ಟ್​ ಇದಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಖ್ಯಾತ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ.

ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ವಿಡಿಯೋ ಪ್ರಕಾರ, ನಾವು ನಿತ್ಯ ಮುಂಜಾನೆ ಬ್ರೇಕ್​ಫಾಸ್ಟ್ ಸೇವಿಸುವ ಅನ್ನ, ದೋಸೆ, ಪುರಿ ಇವುಗಳು ನಿಮಗೆ ಹೊಟ್ಟೆ ತುಂಬಿದಂತೆ ಮಾಡುತ್ತವೆ. ಆದರೆ, ಇದರಲ್ಲಿರುವ ಸಕ್ಕರೆ ಅಂಶವು ನಿಮನ್ನು ಯಾವ ರೀತಿ ಕುಗ್ಗಿಸುತ್ತದೆ, ಕೆಲಸದಲ್ಲಿ ನಿರುತ್ಸಾಹ ಮೂಡಿಸುವಂತೆ ಮಾಡುತ್ತದೆ ಎನ್ನುವ ಬಗ್ಗೆ ವಿವರಣೆ ನೀಡಿದ್ದಾರೆ.

ಪ್ಯಾನ್‌ಕೇಕ್‌ಗಳು, ಹಾಲಿನೊಂದಿಗೆ ಸಿರಿಧಾನ್ಯ ಪೌಡರ್, ಇಡ್ಲಿ, ದೋಸೆ, ಉಪ್ಪಿಟ್ಟು, ಅವಲಕ್ಕಿ ಅಥವಾ ಹಣ್ಣಿನ ರಸ ಬಿಟ್ಟು ಏನನ್ನು ತಿನ್ನಬೇಕು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ಪ್ರೋಟಿನ್ ಆಹಾರಕ್ಕೆ ಪ್ರಾಮುಖ್ಯತೆ ಕೊಡಿ

ಬೆಳಗಿನ ಉಪಾಹಾರದಲ್ಲಿ ಹೆಚ್ಚಿನ ಪ್ರೋಟೀನ್ ಸೇವಿಸುವುದರಿಂದ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಹಸಿವಾದಾಗ ಅಂಗಡಿಯಲ್ಲಿ ಕುರುಕಲು ಆಹಾರ ಸೇವನೆ ಮಾಡುವುದನ್ನು ಅವಾಯ್ಡ್ ಮಾಡಲು ಸಹಾಯ ಮಾಡುತ್ತದೆ.

ಮಾಂಸಹಾರಿಗಳಿಗೆ-ಸಸ್ಯಹಾರಿಗಳಿಗೆ ಈ ಆಹಾರ ಸೂಕ್ತ

ಮೊಟ್ಟೆ ಬುರ್ಜಿ, ಪನೀರ್ ಬುರ್ಜಿ ಮತ್ತು ಕಡಲೆ ಹಿಟ್ಟಿನಿಂದ ತಯಾರಿಸಲಾದ ದೋಸೆಯು ಪ್ರೋಟೀನ್ ಸಮೃದ್ಧ ಆಹಾರ. ಇದು ಆಗಾಗ ಸಿಕ್ಕಿದ್ದನ್ನೆಲ್ಲ ತಿನ್ನುವಂತೆ ಮಾಡುವುದನ್ನು ತಪ್ಪಿಸುತ್ತದೆ. ಜೊತೆಗೆ ಇವು ಚಯಾಪಚಯ ಕ್ರಿಯೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

ಆಯಾಸಕ್ಕೆ ಹೇಳಿ ಗುಡ್​ ಬೈ

ನಿತ್ಯ ಕಾಡುವ ಸುಸ್ತು, ಬಳಲಿಕೆಯಿಂದ ದೂರವಿರಲು ದೈನಂದಿನ ಆಹಾರ ಮತ್ತು ದಿನಚರಿಯಲ್ಲಿ ಸರಳ ಬದಲಾವಣೆಯನ್ನು ತಂದುಕೊಳ್ಳಿ. ಪಾಲಕ್, ಕೇಲ್ ಮತ್ತು ಮೆಂತ್ಯ ಸೊಪ್ಪಿನಿಂದ ಬ್ರೇಕ್​ ಫಾಸ್ಟ್ ತಯಾರಿಸಿ. ಬೆರ್ರಿಗಳು ಮತ್ತು ಸಿಟ್ರಸ್ ಹಣ್ಣುಗಳನ್ನು ಕೊಂಡು ತಿನ್ನಿ.

ದಿನದ ಆರಂಭಕ್ಕೆ ಆದರ್ಶ ಉಪಾಹಾರ ಮಾದರಿ

ನಿಮ್ಮ ದಿನವು ಹಣ್ಣು ತಿನ್ನುವ ಮೂಲಕ ಆರಂಭಿಸಿ. ಹಸಿವಾದರೆ, 1-2 ಮೊಟ್ಟೆಗಳುಹಾಗೂ ಒಂದು ಟೋಸ್ಟ್ ಸೇವಿಸಿ. ಇದರ ಬೆನ್ನಲ್ಲೇ ಟೊಮೆಟೊ + ಕ್ಯಾರೆಟ್ + ಬೀಟ್ರೂಟ್ ಜ್ಯೂಸ್ ಅಥವಾ ಬೂದುಕುಂಬಳಕಾಯಿ ಜ್ಯೂಸ್ ಕುಡಿಯಬಹುದು. ಉಪ್ಪು ಮತ್ತು ಕಾಳುಮೆಣಸಿನೊಂದಿಗೆ ತವಾದಲ್ಲಿ ಹುರಿದ 100 ಗ್ರಾಂ ಪನೀರ್, ಪನೀರ್ಅಥವಾ ಪನೀರ್ ಬುರ್ಜಿ ಸೇವಿಸಿ. ಇದರೊಂದಿಗೆ ಒಂದು ಗ್ಲಾಸ್ ತರಕಾರಿ ಜ್ಯೂಸ್ ಅನ್ನು ಸಸ್ಯಹಾರಿಗಳು ಸೇವನೆ ಮಾಡಬಹುದು, (ಏಜೆನ್ಸೀಸ್).