Hair health tips: ನಮ್ಮ ಕೂದಲಿನ ಆರೈಕೆಗಾಗಿ ನಾವು ಹಲವಾರು ರೀತಿಯ ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತೇವೆ. ಹಾಗೆಯೇ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಶಾಂಪುಗಳು, ಕಂಡೀಷನರ್ ಸಿರಮ್ಗಳನ್ನು ಬಳಸುತ್ತೇವೆ. ಇದು ಕೆಲವು ಸಮಯದಷ್ಟು ಮಾತ್ರ ಕೂದಲು ಹೊಳೆಯುವಂತೆ ಮಾಡುತ್ತದೆ. ಆದರೆ ಕೂದಲಿನ ಒಳಗಿನ ಪೋಷಣೆಯನ್ನು ಕಾಪಾಡುವಲ್ಲಿ ವಿಫಲವಾಗುತ್ತದೆ. ಮಾಲಿನ್ಯ, ಕಳಪೆ ಆಹಾರ, ಒತ್ತಡ ಮತ್ತು ಹಾರ್ಮೋನುಗಳ ಬದಲಾವಣೆಗಳು ನಮ್ಮ ಕೂದಲನ್ನು ಒಣಗಿಸಿ, ಮಂದಗೊಳಿಸಿ ಮತ್ತು ಉದುರುವಂತೆ ಮಾಡುತ್ತದೆ. ಹಾಗಾಗಿ ಇತ್ತೀಚಿನ ಜನರು ಮನೆಮದ್ದುಗಳನ್ನು ಬಳಸುವತ್ತ ಗಮನಹರಿಸಿದ್ದಾರೆ.
ಅಡುಗೆಮನೆಯಲ್ಲಿ ಲಭ್ಯವಿರುವಂತಹ ಪದಾರ್ಥಗಳಲ್ಲಿ ಒಂದಾದ ಅಗಸೆ ಬೀಜವು ಕೂದಲಿನ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಕೂದಲಿನ ಬೆಳವಣಿಗೆ, ಶಕ್ತಿ ಮತ್ತು ಹೊಳಪನ್ನು ಹೆಚ್ಚಿಸಲು ಅಗಸೆ ಬೀಜಗಳನ್ನು ವ್ಯಾಪಕವಾಗಿ ಬಳಸಿರಿ. ಕೆಳಗೆ ನೀಡಿದ ರೀತಿಯಲ್ಲಿ ಅಗಸೆ ಬೀಜಗಳನ್ನು ಬಳಸುವುರಿಂದ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು...
ಅಗಸೆಬೀಜವು ಒಮೆಗಾ-3 ನಂತಹ ಕೊಬ್ಬಿನಾಮ್ಲಗಳು, ಪ್ರೋಟೀನ್, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಗಳನ್ನು ಒಳಗೊಂಡಿದೆ. ಇದು ಕೂದಲನ್ನು ಆಳದಿಂದ ಪೋಷಿಸಲು ಸಹಾಯ ಮಡುತ್ತದೆ. ಹಾಗಾಗಿ ನಿಮ್ಮ ಕೂದಲು ಒಣಗಿದ್ದರೆ, ಮಂದವಾಗಿದ್ದರೆ ಕೂದಲಿನ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಅಗಸೆ ಬೀಜವನ್ನು ನಿಯಮಿತವಾಗಿ ನೀವು ಸೇವಿಸುವುದರಿಂದ ಹಾನಿಗೊಳಗಾದ ಕೂದಲಿನ ಕೋಶಗಳನ್ನು ಸಮೃದ್ಧಪಡಿಸಲು ಸಹಾಯ ಮಾಡುತ್ತದೆ.
ಅಗಸೆ ಬೀಜಗಳಿಂದ ಹೇರ್ ಜೆಲ್ ತಯಾರಿಸಿ ಅದನ್ನು ತಲೆಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಆಗುತ್ತದೆ. 2 ಚಮಚ ಅಗಸೆ ಬೀಜವನ್ನು ಕುದಿಸಿ ಅವುಗಳಲ್ಲಿರುವ ಸಾರವನ್ನು ಹೊರತೆಗೆದು ಅದರಲ್ಲಿ ಸ್ವಲ್ಪ ಅಲೋವೆರಾ ಜೆಲ್ ಅನ್ನು ಮಿಶ್ರಣ ತಲೆಗೆ ಹಚ್ಚಿರಿ 15 ನಿಮಿಷ ಮಸಾಜ್ ಮಾಡಿ ಮರುದಿನ ತೊಳೆಯಿರಿ. ಇದು ಕೂದಲನ್ನು ಬಲಿಷ್ಟವಾಗಿರುವಂತೆ ಮಾಡುತ್ತದೆ. ಈ ರೀತಿಯಾಗಿ ಅಗಸೆ ಬೀಜವನ್ನು ನಿಯಮಿತವಾಗಿ ಬಳಸುವುದರಿಂದ ತಲೆಹೊಟ್ಟು ಕಡಿಮೆಯಾಗಿ ನೆತ್ತಿ ಸ್ವಚ್ಛವಾಗಿರಿಸುತ್ತದೆ.
ನಿಮ್ಮ ಕೂದಲು ವೇಗವಾಗಿ ಬೆಳೆಯಬೇಕೆಂದರೆ, ಅಗಸೆ ಬೀಜವನ್ನು ಪುಡಿಮಾಡಿ ಅದನ್ನು ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಅದನ್ನು ನಿಮ್ಮ ಕೂದಲು ಹಾಗೂ ನೆತ್ತಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಂತರ ತೊಳೆಯಿರಿ. ಇದು ನಿಮ್ಮ ಕೂದಲನ್ನು ಪೋಷಿಸಲು ಸಹಾಯ ಮಾಡುತ್ತದೆ.
ಒಂದು ವಾರಕ್ಕೆ ಎರಡು ಬಾರಿ ನಿಮ್ಮ ಕೂದಲಿಗೆ ಅಗಸೆಬೀಜದ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ ಮತ್ತು ಕೇಶಗಳ ನೈಸರ್ಗಿಕ ಹೊಳಪು ಹೆಚ್ಚಾಗುತ್ತದೆ. ಅಗಸೆಬೀಜದ ಎಣ್ಣೆ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುವುದರೊಂದಿಗೆ, ಕೂದಲಿನ ಬೇರುಗಳನ್ನು ಪೋಷಿಸುತ್ತದೆ. ಈ ಎಣ್ಣೆ ಕೂದಲಿಗೆ ಜಲಸಂಚಯನವನ್ನು ಒದಗಿಸುತ್ತದೆ. ನಿಯಮಿತ ಇದನ್ನು ಬಳಸುವುದರಿಂದ ಕೂದಲುಗಳು ಹೆಚ್ಚು ಆರೋಗ್ಯಕರವಾಗಿರುತ್ತವೆ.
ಅಗಸೆಬೀಜಗಳನ್ನು ಸೇವಿಸುವುದರಿಂದ ತಲೆಹೊಟ್ಟು ಕಡಿಮೆಯಾಗಲಿದ್ದು, ಇದರಲ್ಲಿರುವ ಪೋಷಕಾಂಶಗಳು ನೆತ್ತಿಯ ಮೇಲಿನ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ತಡೆಯುತ್ತವೆ. ಅಗಸೆಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ತೆಳುವಾಗುವುದು, ಒಡೆಯುವುದು ಅಥವಾ ಅತಿಯಾದ ಕೂದಲು ಉದುರುವಿಕೆ ಸೇರಿದಂತೆ ಅನೇಕ ಸಮಸ್ಯೆಗಳು ಕಾಲ ಕ್ರಮೇಣ ಕಡಿಮೆಯಾಗುತ್ತವೆ. ಅಗಸೆಬೀಜಗಳಲ್ಲಿರುವ ಕೊಬ್ಬಿನಾಮ್ಲಗಳು ನೆತ್ತಿಯಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲುಗಳನ್ನು ಬಲಪಡಿಸುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ