ಲೈಫ್‌ಸ್ಟೈಲ್

ಥೈರಾಯ್ಡ್ ಸಮಸ್ಯೆ ಇದ್ರೆ ಈ ಎಲ್ಲಾ ಆಹಾರಗಳನ್ನ ಸೇವಿಸಿ..!

ಥೈರಾಯ್ಡ್ ಅಂದ್ರೆ ಏನು, ದೇಹದ ಯಾವ ಭಾಗದಲ್ಲಿದೆ? ಥೈರಾಯ್ಡ್ ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಒಂದು ಗೃಂಥಿ. ಈ ಗೃಂಥಿಯು ನಿಮ್ಮ ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯಕವಾದ ಥೈರಾಯ್ಡ್ ಹಾರ್ಮೋನ್‍ಗಳನ್ನು ಉತ್ಪಾದಿಸುತ್ತದೆ. ಜೀವನ ಶೈಲಿ ಹಾಗೂ ಆಹಾರ ಕ್ರಮದಲ್ಲಿನ ಬದಲಾವಣೆಗಳು ಮನುಷ್ಯನಲ್ಲಿ ಕೆಲವೊಂದು ರೋಗಗಳಿಗೆ ಕಾರಣವಾಗುತ್ತದೆ. ಅಂತೆಯೇ ಮನುಷ್ಯನಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಲ್ಲಿ ಥೈರಾಯ್ಡ್ ಕೂಡ ಒಂದಾಗಿರುತ್ತದೆ.

ಹಾಗಿದ್ರೆ ಥೈರಾಯ್ಡ್​​ ಸಮಸ್ಯೆಯಿಂದ ಬಳಲುತ್ತಿರುವವರು ಯಾವ ರೀತಿಯ ಆಹಾರವನ್ನ ಸೇವಿಸಬೇಕು ಅನ್ನೋದನ್ನ ನೋಡೋಣ:
ಬೀನ್ಸ್ ಮತ್ತು ದ್ವಿದಳ ಧಾನ್ಯಗಳು
ಪ್ರೋಟೀನ್‍ನ ಈ ಸಮೃದ್ಧ ಮೂಲಗಳು ನಿಮ್ಮ ಚಯಾಪಚಯವನ್ನು ಸುಧಾರಿಸುತ್ತದೆ. ಹೆಚ್ಚು ಊಟ ತಿನ್ನಬೇಕು ಎನ್ನಿಸಲ್ಲ. ಇದರಿಂದ ನಿಮ್ಮ ತೂಕವನ್ನು ನಿಯಂತ್ರಿಸಬಹುದು.

ತರಕಾರಿಗಳು
ಟೊಮ್ಯಾಟೊ ಮತ್ತು ಬೆಲ್ ಪೆಪರ್‍ಗಳಂತಹ ತರಕಾರಿಗಳನ್ನು ಸೇವಿಸುವುದರಿಂದ ಥೈರಾಯ್ಡ್ ರೋಗಿಗಳಿಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಏಕೆಂದರೆ ಅವುಗಳು ವಿಟಮಿನ್ ಸಿ, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‍ಗಳಲ್ಲಿ ಸಮೃದ್ಧವಾಗಿವೆ.

ನೀರು ಮತ್ತು ಕೆಫೀನ್ ಇಲ್ಲದ ಪಾನೀಯಗಳು
ನಿಮ್ಮ ನೀರಿನ ಸೇವನೆಯನ್ನು ಹೆಚ್ಚಿಸುವುದರಿಂದ ನಿಮ್ಮ ಹಾರ್ಮೋನುಗಳನ್ನು ನಿಯಂತ್ರಣದಲ್ಲಿರಿಸುತ್ತದೆ. ಮತ್ತು ನಿಮ್ಮ ತೂಕ ನಷ್ಟ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ.

ಸೀಡ್ಸ್ ಮತ್ತು ನಟ್ಸ್
ಬ್ರೆಜಿಲ್ ನಟ್ಸ್ ಸೆಲೆನಿಯಮ್ ಮತ್ತು ಸತುವುಗಳ ಅತ್ಯುತ್ತಮ ಮೂಲವಾಗಿದ್ದು ಥೈರಾಯ್ಡ್ ಗ್ರಂಥಿಯ ಉತ್ತಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಚಿಯಾ ಮತ್ತು ಕುಂಬಳಕಾಯಿ ಬೀಜಗಳು ಸತುವಿನ ಸಮೃದ್ಧ ಮೂಲಗಳಾಗಿವೆ. ಇವುಗಳಿಂದ ರೋಗಿಯು ಅತಿಯಾಗಿ ಸೇವನೆ ಮಾಡುವುದನ್ನು ಕಡಿಮೆ ಮಾಡಬಹುದು.