ಲೈಫ್‌ಸ್ಟೈಲ್

ಎದೆಯುರಿ, ಜೀರ್ಣಕ್ರಿಯೆ ಸಮಸ್ಯೆಗೆ ಈ ಮನೆಮದ್ದುಗಳು ರಾಮಬಾಣ! | Home Remedy

ಮಣಿಕಂಠ ಪಾ ಹಿರೇಮಠ

Home Remedy: ಶ್ರಾವಣ ಮಾಸ ಹಬ್ಬಗಳ ಕಾಲ, ಕರಿದ ಮತ್ತು ಖಾರವಾದ ಆಹಾರವನ್ನು ತಿನ್ನುವ ಕಾಲ. ರುಚಿಗೆ ಸಂಬಂಧಿಸಿದಂತೆ ಈ ತಿಂಗಳು ಖಂಡಿತವಾಗಿಯೂ ಪ್ರತಿಯೊಬ್ಬ ಆಹಾರಪ್ರಿಯರಿಗೂ ಇಷ್ಟ. ಆದರೆ ಆರೋಗ್ಯ ಮತ್ತು ಆರೋಗ್ಯಕರ ಆಹಾರ ಪದ್ಧತಿಗೆ ಸಂಬಂಧಿಸಿದಂತೆ, ಎದೆಯುರಿ, ಜೀರ್ಣಕ್ರಿಯೆಯಿಂದ ಬಳಲುತ್ತಿರುವವರಿಗೆ ಇದು ಕಷ್ಟದ ಸಮಯ ಎಂದರೆ ತಪ್ಪಾಗದು.

ಜೀರ್ಣಕ್ರಿಯೆ ಸರಿ ಇಲ್ಲದವರು ಮಸಾಲೆಯುಕ್ತ ಅಥವಾ ಕರಿದ ಪದಾರ್ಥ ತಿಂದಾಗ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಾತ್ರೆಗಳಿಂದ ದೂರವಿರಬಹುದು.

ನೀವು ಪ್ರಯತ್ನಿಸಬಹುದಾದ ಮನೆಮದ್ದುಗಳು ಇಲ್ಲಿವೆ.

1. ಶುಂಠಿ

ಜೀರ್ಣಕ್ರಿಯೆಗೆ ಬಳಸುವ ಪದಾರ್ಥಗಳಲ್ಲಿ, ಶುಂಠಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಎದೆಯುರಿಯಂತಹ ಸಮಸ್ಯೆಗಳನ್ನು ತಡೆಯುತ್ತದೆ. ಊಟದ ನಂತರ ಶುಂಠಿ ಮತ್ತು ಸ್ವಲ್ಪ ನಿಂಬೆ ರಸದ ಮಿಶ್ರಣವನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್​ ತೊಂದರೆಯಿಂದ ದೂರವಿರಬಹುದು.

2. ಅಲೋವೆರಾ ಜ್ಯೂಸ್

ಅಲೋವೆರಾ ಜ್ಯೂಸ್ ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದ್ದು, ಇದು ನಮ್ಮ ಜೀರ್ಣಾಂಗ ಸಮಸ್ಯೆಯನ್ನು ಶಮನಗೊಳಿಸುತ್ತದೆ ಮತ್ತು ಅಜೀರ್ಣವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನೀವು ಪ್ರತಿದಿನ 15-20 ಮಿಲಿ ತಾಜಾ ಅಲೋವೆರಾ ಜ್ಯೂಸ್ ತೆಗೆದುಕೊಳ್ಳುವುದು ಉತ್ತಮ ಪರಿಹಾರ.

3. ಮೆಂತ್ಯ ಬೀಜಗಳು (ಮೇಥಿ)

ರಾತ್ರಿಯಿಡೀ ಮೆಂತ್ಯವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮೆಂತ್ಯ ನೀರನ್ನು ಕುಡಿಯುವುದರಿಂದ ಹುಳಿ ಹೊಟ್ಟೆ ಉಬ್ಬರ ಸಮಸ್ಯೆ ನಿವಾರಣೆಯಾಗುತ್ತದೆ.

4. ಮೊಸರು

ಹೆಚ್ಚಿನ ಹಾಲಿನ ಉತ್ಪನ್ನಗಳು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಿದರೆ, ಮೊಸರು ಇದಕ್ಕೆ ವಿರುದ್ಧ ಪರಿಣಾಮವನ್ನು ಬೀರುತ್ತದೆ. ಇದರಲ್ಲಿರುವ ಪ್ರೋಬಯಾಟಿಕ್‌ಗಳು ಹೊಟ್ಟೆಯ ಅಸ್ವಸ್ಥತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ನೀಡುತ್ತದೆ.(ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.