ಸಾಂದರ್ಭಿಕ ಚಿತ್ರ 
ಲೈಫ್‌ಸ್ಟೈಲ್

ನಮ್ಮಲ್ಲಿನ ಈ ಚಿಕ್ಕ ಬದಲಾವಣೆಯೂ ಮೈಗ್ರೇನ್​​ ಮುನ್ಸೂಚನೆ; ಇಲ್ಲಿದೆ ಉಪಯುಕ್ತ ಮಾಹಿತಿ

ಮೈಗ್ರೇನ್​​ ಮೆದುಳಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಈ ನೋವಿನಿಂದ ಬಳಲುವ ಜನರು ತಮ್ಮ ತಲೆಯ ಒಂದು ಭಾಗದಲ್ಲಿ ತೀವ್ರ ನೋವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಅನೇಕ ಸಮಯದಲ್ಲಿ ತಲೆನೋವಿನ ಜತೆಗೆ ವಾಕರಿಕೆ, ವಾಂತಿ, ಅತಿಸಾರದ ಸಮಸ್ಯೆಯು ಎದುರಾಗುತ್ತದೆ. ಇದು ದೈನಂದಿನ ಜೀವನಶೈಲಿಗೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಮೈಗ್ರೇನ್​ ಬರುವ ಮುನ್ನ ನಮಗೆ ಕೆಲವು ಮುನ್ಸೂಚನೆಯೂ ಸಿಗುತ್ತದೆ. ಅದನ್ನು ತಿಳಿದು ವೈದ್ಯರನ್ನು ಸಂಪರ್ಕಿಸಿದರೆ ಪರಿಹಾರ ಬೇಗ ಸಿಗುತ್ತದೆ. ಹಾಗಾದ್ರೆ ನಮ್ಮಲ್ಲಾಗುವ ಯಾವೆಲ್ಲಾ ಬದಲಾವಣೆಗಳು ಮೈಗ್ರೇನ್​​ ಅನ್ನು ಸೂಚಿಸುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

  • ಸಾಮಾನ್ಯವಾಗಿ ಮೈಗ್ರೇನ್​ ಆರಂಭವಾದಾಗ ನಮಗೆ ಯಾವುದೆ ವಿಚಾರವಾದರೂ ಕಿರಿಕಿರಿ ಎಂದು ಅನುಭವವಾಗುತ್ತದೆ. ಸಿಗರೇಟ್​ ಹೊಗೆ, ಕಾರ್​ ಎಕ್ಸಾಸ್ಟ್​​​, ಪರ್ಫ್ಯೂಮ್​​, ಹೀಗೆ ಯಾವುದೇ ಸ್ಮೆಲ್​​ ಅಥವಾ ಬೆಳಕು, ಯಾರಾದರೂ ಮಾತನಾಡಿದರು ಅವರ ಧ್ವನಿ ಕಿರಿಕಿರಿಯನ್ನು ಉಂಟುಮಾಡುತ್ತದೆ.
  • ಮೈಗ್ರೇನ್​ ಬರುವ ಮೊದಲು ಹೆಚ್ಚು ಹಸಿವಾಗುತ್ತದೆ. ಇಲ್ಲವಾದರೆ ಸಿಹಿತಿಂಡಿಗಳಂತಹ ನಿರ್ದಿಷ್ಟ ಆಹಾರವನ್ನು ತಿನ್ನಬೇಕು ಎನ್ನಿಸುವುದು ಅಥವಾ ಏನನ್ನು ತಿನ್ನುವುದು ಬೇಡ ಎಂದೆನ್ನಿಸುವುದು. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಲಕ್ಷಣಗಳು ಕಾಣುತ್ತದೆ.
  • ಮಲಬದ್ಧತೆ, ಕುತ್ತಿಗೆ ಬಿಗಿಯಾಗುವುದು, ಆಗಾಗ್ಗೆ ಮೂತ್ರ ವಿಸರ್ಜನೆಯಂತಹ ಲಕ್ಷಣಗಳನ್ನು ಅನುಭವಿಸಬಹುದು.
  • ಮೈಗ್ರೇನ್‌ನಿಂದ ಬಳಲುತ್ತಿರುವ ವ್ಯಕ್ತಿಯು ತಲೆನೋವಿನ ಮೊದಲು ಅಥವಾ ಸಮಯದಲ್ಲಿ ಒಂದು ರೀತಿಯ ಸೆಳವು ಉಂಟಾಗುತ್ತದೆ. ಅದು ಅವರ ನರಮಂಡಲದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
  • ಮೈಗ್ರೇನ್‌ನಿಂದ ಬಳಲುತ್ತಿರುವ ವ್ಯಕ್ತಿಯು ಧ್ವನಿ ಮತ್ತು ಬೆಳಕಿಗೆ ಸಂವೇದನಾಶೀಲರಾಗುತ್ತಾರೆ. ಇದರಿಂದಾಗಿ ಅವರ ದೃಷ್ಟಿ ಸ್ವಲ್ಪ ಸಮಯದವರೆಗೆ ಮಸುಕಾಗುತ್ತದೆ.
  • ಕೈ ಅಥವಾ ಪಾದಗಳಲ್ಲಿ ಸೂಜಿಯಿಂದ ಚುಚ್ಚಿದಂತ, ಮುಖದ ಒಂದು ಭಾಗ ಮರಗಟ್ಟುವಿಕೆಯಂತೆ ಆಗುವ, ಮಾತನಾಡಲು ತೊಂದರೆಯಾಗುತ್ತಿದೆ ಎಂಬ ಅನುಭವವಾಗುತ್ತದೆ.

ಮೈಗ್ರೇನ್‌ ಬರಲು ನಿಖರವಾದ ಕಾರಣವನ್ನು ಸಂಶೋಧಕರು ಇನ್ನೂ ಖಚಿತವಾಗಿ ತಿಳಿಸಿಲ್ಲ. ನಿಮ್ಮ ರಕ್ತನಾಳಗಳಲ್ಲಿನ ನಿರ್ದಿಷ್ಟ ನರಗಳು ನಿಮ್ಮ ಮೆದುಳಿಗೆ ನೋವಿನ ಸಂಕೇತ ಕಳುಹಿಸುತ್ತವೆ . ಇದು ನಿಮ್ಮ ತಲೆಯ ನರಗಳು ಮತ್ತು ರಕ್ತನಾಳಗಳಲ್ಲಿ ಉರಿಯೂತದ ವಸ್ತುಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮೈಗ್ರೇನ್​ ಬರುತ್ತದೆ ಎನ್ನಲಾಗಿದೆ.