Giving Up Sugar For 30 Days
Giving Up Sugar For 30 Days: ಈಗಂತೂ ಸಕ್ಕರೆ ತಿನ್ನುವ ಬಗ್ಗೆ ಎಲ್ಲರಿಗೂ ಸಾಕಷ್ಟು ಜಾಗೃತಿ ಮೂಡಿ ಬಂದಿದೆ. ಸಕ್ಕರೆ ದೇಹಕ್ಕೆಷ್ಟು ಒಳ್ಳೆಯದು ಕೆಟ್ಟದು, ತಿಂದರೇನಾಗುತ್ತೆ ಎನ್ನುವ ಬಗ್ಗೆ ಆಗಾಗ್ಗೆ ಎಚ್ಚರವಹಿಸುತ್ತಾರೆ. ಆದರೆ, ಕೆಲವೊಮ್ಮೆ ಸಕ್ಕರೆಯ ಅಂಶವುಳ್ಳ ಆಹಾರಗಳಾದ ಐಸ್ಕ್ರೀಂ, ಬಿಸ್ಕೇಟ್, ಸ್ವೀಟ್ಸ್ ತಿನ್ನೋದನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗೋದೆ ಇಲ್ಲ. ಹೀಗೋಮ್ಮೆ ಮಾಡಿ 30 ದಿನ ಸಕ್ಕರೆಯನ್ನೇ ಮುಟ್ಟಬಾರದು ಎಂದು ನಿಮಗೆ ನೀವು ನಿಯಮ ಹಾಕಿಕೊಳ್ಳಿ. ಇದರಿಂದ ಮುಂದಾಗುವ ಪರಿಣಾಮ ಹೇಗಿರುತ್ತೆ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
ಹಣ್ಣು, ಹಾಲು, ತರಕಾರಿಗಳನ್ನು ತಿನ್ನುವ ಮೂಲಕ ದೇಹಕ್ಕೆ ಸೇರುವ ಸಕ್ಕರೆಗಿಂತಲೂ, ಮನೆಯಲ್ಲಿ ಬಳಕೆ ಮಾಡುವ ಕೃತಕ ಸಕ್ಕರೆ ಅಂದರೆ, ಸಿಹಿ ತಿಂಡಿ, ಬಿಸ್ಕೇಟ್, ಚಾಕೋಲೇಟ್ಗಳಲ್ಲಿರುವ ಸಿಹಿ ದೇಹಕ್ಕೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಗುಣಪಡಿಸಲಾಗದಂತಹ ರೋಗವನ್ನು ತಂದೊಡ್ಡುತ್ತದೆ.
ಕ್ಲಿನಿಕಲ್ ಡಯಾಬಿಟಿಸ್ ಜನರ್ಲ್ ಪ್ರಕಾರ, ಒಂದು ತಿಂಗಳು ಸಕ್ಕರೆ ಸೇವನೆಯನ್ನು ಕೈಬಿಡೋದ್ರಿಂದಾಗಿ ದೇಹದಲ್ಲಿ ಸಕರಾತ್ಮಕ ಬದಲಾವಣೆ ಕಾಣಿಸುತ್ತದೆ. ಹಾಗಾದ್ರೆ ಏನೆಲ್ಲ ಪರಿಣಾಮ ಕಾಣಿಸಿಕೊಳ್ಳುತ್ತದೆ ಎಂದು ನೋಡೋಣ.
ಮೊದಲವಾರದಲ್ಲಿ ಹೀಗೆಲ್ಲ ಸಹಾಯವಾಗುತ್ತದೆ
ಸಕ್ಕರೆಯಿಂದ ತಯಾರಾದ ಪದಾರ್ಥಗಳಿಂದ ದೂರವಿದ್ದ ಒಂದು ತಿಂಗಳು ಮೊದಲು ನಿಮ್ಮನ್ನು ಮೂಡ್ ಸ್ವಿಂಗ್ಸ್ ಕಾಡುತ್ತದೆ. ಹಸಿವಿನಿಂದ ಒದ್ದಾಡುವಂತೆ ಮಾಡುವ ಸಾಧ್ಯತೆ ಇದೆ. ನ್ಯೂಟ್ರಿಯೆಂಟ್ಸ್ ಜರ್ನಲ್' ಪ್ರಕಟಿಸಿದ ಸಂಶೋಧನೆಯ ಪ್ರಕಾರ, ಈ ಪರಿಣಾಮವು ಅಲ್ಪಕಾಲಿಕವಾಗಿದ್ದು, ದಿನ ಕಳೆದಂತೆ ನಿಮ್ಮ ನಾಲಿಗೆಯ ರುಚಿಯ ಆದ್ಯತೆಗಳು ಬದಲಾಗುತ್ತವೆ. ನೀವು ಸಕ್ಕರೆ ರಹಿತ ಆಹಾರ ಸೇವನೆ ಮಾಡಲು ಆರಂಭಿಸುತ್ತೀರಿ.
2ನೇ ವಾರ ಏನಾಗುತ್ತದೆ?
ಕೃತಕ ಸಕ್ಕರೆ ಸೇವನೆ ಮಾಡೋದನ್ನು ಕೈ ಬಿಟ್ಟಾಗ ಸಕ್ಕರೆ ಮಟ್ಟವು ಸ್ಥಿರಗೊಳ್ಳಲು ಪ್ರಾರಂಭವಾಗುತ್ತದೆ. ಈ ಬೆಳವಣಿಗೆಯು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹಸಿವಿನ ಅಡಚಣೆಗಳನ್ನು ಕಡಿಮೆ ಮಾಡುತ್ತದೆ ಎಂದು ಫ್ರಂಟ್ಸ್ ಆಫ್ ನ್ಯೂಟ್ರೇಷನ್ ಜರ್ನಲ್ ಹೇಳಿದೆ
ಮೂರನೇ ವಾರ ಈ ಬದಲಾವಣೆಯನ್ನು ಗಮನಿಸಿ
ಸಕ್ಕರೆ ಸೇವನೆ ಕಡಿಮೆ ಮಾಡುವುದರಿಂದ ಶಕ್ತಿಯ ಮಟ್ಟ ಮತ್ತು ನಿದ್ರೆಯ ಗುಣಮಟ್ಟ ಉತ್ತಮಗೊಳ್ಳುತ್ತದೆ.. ಮಧ್ಯಾಹ್ನದ ವೇಳೆ ಕಾಡುವ ಆಯಾಸ ಕಡಿಮೆಯಾಗುತ್ತದೆ. ದೇಹ ಮತ್ತು ಮೆದುಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಆಳವಾದ ಮತ್ತು ನೆಮ್ಮದಿಯ ನಿದ್ರೆ ಬಹಳ ಮುಖ್ಯ.
ನಾಲ್ಕನೇ ವಾರ ತೂಕ ಇಳಿಕೆಗೆ ಸಹಕಾರಿ
ಸಂಸ್ಕರಿಸಿದ ಸಕ್ಕರೆ ಹಾಗೂ ಆಹಾರ ಸಿಹಿ ಪಾನೀಯಗಳನ್ನು ಕಡಿಮೆ ಮಾಡುವುದರಿಂದ ತೂಕ ಇಳಿಕೆ ಮತ್ತು ಸೊಂಟದ ಸುತ್ತಳತೆ ಕಡಿಮೆಯಾಗಲು ಸಹಾಯವಾಗುತ್ತದೆ ಎಂದು ಒಬೆಸಿಟಿ ಜರ್ನಲ್ ಹೇಳುತ್ತದೆ.
ಚರ್ಮ ಕಾಂತಿಗೆ ಸಹಕಾರಿ
ಸಕ್ಕರೆ ಪದಾರ್ಥ ಸೇವನೆ ಕಡಿಮೆ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಅಧ್ಯಯನವೊಂದರ ಪ್ರಕಾರ ಸಕ್ಕರೆಯಲ್ಲಿರುವ ಗ್ಲುಕೋಸ್ ಮತ್ತು ಫ್ರುಕ್ಟೋಸ್ 'ಗ್ಲೈಕೇಶನ್' ಪ್ರಕ್ರಿಯೆಯ ಮೂಲಕ ಚರ್ಮದ ಕಾಲಜನ್ ಮತ್ತು ಇಲಾಸ್ಟಿನ್ ನಾರುಗಳೊಂದಿಗೆ ಸೇರಿಕೊಂಡು 'AGEs' ಉತ್ಪಾದಿಸುತ್ತವೆ. ಇದು ಚರ್ಮವನ್ನು ಗಟ್ಟಿಯಾಗಿಸಿ, ಬೇಗನೆ ಸುಕ್ಕುಗಳು ಮೂಡುವಂತೆ ಮಾಡುತ್ತದೆ.
ಇದರೊಂದಿಗೆ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವುದನ್ನು ನಿಯಂತ್ರಣದಲ್ಲಿಡುತ್ತದೆ, (ಏಜೆನ್ಸೀಸ್).