ಲೈಫ್‌ಸ್ಟೈಲ್

ಈ ಆಹಾರಗಳು ಮೌನವಾಗಿ ಯಕೃತ್ತನ್ನು ಕೊಲ್ಲುತ್ತವೆಯಂತೆ! Liver Health

Liver Health: ನೈಸರ್ಗಿಕ ಆಹಾರಗಳು ಆರೋಗ್ಯಕರ ಹಾಗೂ ಪೌಷ್ಟಿಕ ಎಂದು ಜನರು ಹೇಳುವುದನ್ನು ನಾವು ಕೇಳಿರಬಹುದು. ಯಾವ ಆಹಾರಗಳು ನೈಸರ್ಗಿಕವಾಗಿರುತ್ತವೆಯೋ ಅವುಗಳನ್ನು ಹಾನಿಕರವಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ಇದು ನಿಜವಲ್ಲ ಎಂದು ತಿಳಿದರೆ ಶಾಕ್​ ಆಗಬಹುದು. ಕೆಲವೊಂದು ಆಹಾರಗಳು ಯಕೃತ್ತಿನ ಕೆಲವು ಭಾಗಗಳಿಗೆ ಹಾನಿಯನ್ನುಂಟು ಮಾಡಬಹುದು.

ಫಿಟ್ನೆಸ್​ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಲವಾರು ಮಂದಿ ವೈದ್ಯರನ್ನು ಭೇಟಿಯಾಗದೇ, ಗಿಡಮೂಲಿಕೆ ಪೂರಕಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಇವು ಆರೋಗ್ಯಕ್ಕೆ ಒಳ್ಳೆಯದು ಎಂದು ನಂಬುತ್ತಾರೆ. ಆದರೆ, ಕೆಲವೊಮ್ಮೆ ಎಲ್ಲಾ ಗಿಡಮೂಲಿಕೆಗಳು ಪ್ರಯೋಜನಕಾರಿಯಾಗಿರುವುದಿಲ್ಲ. ನಿಮಗೆ ಆರೋಗ್ಯಕರ ಆಹಾರ ಎಂದು ತೋರುವ ಆಹಾರಗಳು ಯಕೃತ್ತಿಗೆ ಸಮಸ್ಯೆಯನ್ನು ತಂದೊಡ್ಡಬಹುದು.

1. ಅರಿಶಿಣ

ಅರಿಶಿಣ ಉರಿಯೂತವನ್ನು ಕಡಿಮೆ ಮಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರ ಪದಾರ್ಥವಾಗಿದೆ. ಆದರಿಂದ ಇದನ್ನು ಆಹಾರ ತಯಾರಿಸುವಲ್ಲಿ ಬಳಸಲಾಗುತ್ತದೆ. ಅರಿಶಿಣವನ್ನು ಹೆಚ್ಚಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರವಾಗಬಹುದು. ಕೆಲವು ಸಂದರ್ಭದಲ್ಲಿ ಯಕೃತ್ತಿನ ಹಾನಿ ಅಥವಾ ಮೂತ್ರಪಿಂಡದ ಕಲ್ಲುಗಳನ್ನು ದೇಹದಲ್ಲಿ ಉತ್ಪಾದಿಸುತ್ತದೆ. ಆದರಿಂದ ಆಹಾರ ತಯಾರಿಸುವಾಗ ಅರಿಶಿಣವನ್ನು ಕಡಿಮೆ ಉಪಯೋಗಿಸಿ.

2. ಅಶ್ವಗಂಧ

ಒತ್ತಡವನ್ನು ಕಡಿಮೆ ಮಾಡುವಲ್ಲಿ ಅಶ್ವಗಂಧ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆದರೆ, ಇದರ ಅತಿಯಾದ ಸೇವನೆಯು ಯಕೃತ್ತಿನ ಆರೋಗ್ಯದಲ್ಲಿ ಏರುಪೇರು ಉಂಟು ಮಾಡುತ್ತದೆ. ಕಲಬೆರಕೆ ಇರುವಂತಹ ಅಶ್ವಗಂಧವನ್ನು ಹೆಚ್ಚಾಗಿ ಬಳಸುವುದರಿಂದ ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ.

3. ಗ್ರೀನ್ ಟೀ ಸಾರ

ಗ್ರೀನ್​ ಟೀ ಕುಡಿಯುವುದು ಪ್ರಯೋಜನಕಾರಿಯಾಗಬಹುದು. ಆದರೆ ಅದರ ಸಾರವನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕರವಾಗಬಹುದು. ಇದು ಕ್ಯಾಪ್ಸುಲ್‌ಗಳು ಕ್ಯಾಟೆಚಿನ್‌ಗಳು ಎಂಬ ಸಂಯುಕ್ತವನ್ನು ಹೊಂದಿದೆ. ಇದು ಯಕೃತ್ತನ್ನು ಹಾನಿ ಮಾಡಲು ಪ್ರೇರೇಪಿಸುತ್ತದೆ.

4. ಕಪ್ಪು ಕೊಹೊಶ್

ಅನೇಕ ಮಹಿಳೆಯರು ಋತುಬಂಧದ ಸಮಯದಲ್ಲಿ ಕಪ್ಪು ಕೊಹೊಶ್​ನ್ನು ಬಳಸುತ್ತಾರೆ. ಆದಾಗ್ಯೂ, ಈ ಗಿಡಮೂಲಿಕೆಗಳು ಉರಿಯೂತ, ಕಾಮಾಲೆ ಹಾಗೂ ರಕ್ತದೊತ್ತಡದಂತಹ ಗಂಭೀರ ಸಮಸ್ಯೆಗಳನ್ನು ಹೇರಳವಾಗಿ ಉಂಟುಮಾಡಬಹುದು. ಈಗಾಗಲೇ ಯಕೃತ್ತಿನ ಸಮಸ್ಯೆ ಹೊಂದಿರುವಂತಹವರು ಇದನ್ನು ಸೇವಿಸುವುದನ್ನು ನಿಲ್ಲಿಸುವುದು ಉತ್ತಮ.

5. ಕೆಂಪು ಯೀಸ್ಟ್ ಅಕ್ಕಿ

ಈ ಅಕ್ಕಿಯನ್ನು ಹೆಚ್ಚಾಗಿ ಕೊಲೆಸ್ಟ್ರಾಲ್​ನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಇದು ಯಕೃತ್ತಿನ ಹಾನಿಯುಂಟು ಮಾಡುವ ಮೊನಾಕೊಲಿನ್ ಕೆ ಗುಣಗಳನ್ನು ಹೊಂದಿದೆ. ಈ ಡೊಸೇಜ್​ಗಳು ಉತ್ಪನ್ನದಿಂದ ಉತ್ಪನ್ನಕ್ಕೆ ಬದಲಾಗುತ್ತವೆ. ಹಾಗಾಗಿ ಇದರ ಅತಿಯಾದ ಸೇವನೆಯನ್ನು ತಪ್ಪಿಸುವುದು ಉತ್ತಮ ಮಾರ್ಗ. (ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.