ಬೆಟ್ಟದ ನೆಲ್ಲಿಕಾಯಿ  
ಲೈಫ್‌ಸ್ಟೈಲ್

ನೀರು ಕುಡಿದಾಗ ಸಿಹಿಯಾಗುವ ನೆಲ್ಲಿಕಾಯಿಯಲ್ಲಿದೆ ಈ ಅದ್ಭುತ ಪ್ರಯೋಜನಗಳು; ಇಲ್ಲಿದೆ ಉಪಯುಕ್ತ ಮಾಹಿತಿ | Amla

Amla Benefits: ಸಾಮಾನ್ಯವಾಗಿ ಭಾರತೀಯ ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಆಮ್ಲಾ/ ಗೂಸ್​ಬೆರಿ ಎಂದು ಕರೆಯುತ್ತಾರೆ. ಇದು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುವುದರ ಜತೆಗೆ ದೇಹಕ್ಕೆ ಬೆಸ್ಟ್​ ಮೆಡಿಸನ್​ ಎಂದೇ ಗುರುತಿಸಿಕೊಂಡಿದೆ. ವರ್ಷದ ಪೂರ ಲಭಿಸುವ ನೆಲ್ಲಿಕಾಯಿಯ ಸೇವನೆ ನಮ್ಮ ದೇಹಕ್ಕೆ ಒಳ್ಳೆಯದು ಎಂಬುದು ಗೊತ್ತಿದೆ. ಆದರೆ, ಅದರಲ್ಲಿರುವ ಹತ್ತು ಹಲವು ಪ್ರಯೋಜನಗಳು ಇಂದಿಗೂ ಅಷ್ಟಾಗಿ ಯಾರಿಗೂ ತಿಳಿದಿಲ್ಲ.

ನೈಸರ್ಗಿಕ ಕೂಲರ್​

ನೆಲ್ಲಿಕಾಯಿ ಸೇವನೆ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಒಳಿತು. ಆಮ್ಲ ದೇಹದಲ್ಲಿ ಕೂಲಿಂಗ್ ಅಂಶವಾಗಿ ಕೆಲಸ ಮಾಡುತ್ತದೆ ಹಾಗೂ ಹೆಚ್ಚಾಗಿ ದೇಹವನ್ನು ತಂಪಾಗಿಡಲು ಸಹಕಾರಿಯಾಗಿದೆ. ದಿನಕ್ಕೆ ಒಂದು ಅಥವಾ ಎರಡು ತಿನ್ನಬಹುದು ಇಲ್ಲವೇ ಜ್ಯೂಸ್​ ರೂಪದಲ್ಲಿ ಕುಡಿದರೂ ಉತ್ತಮವೇ.

ವಿಟಮಿನ್​ ಸಿ ಹೇರಳ

ಈ ಹುಳಿ ಹಣ್ಣಿನಲ್ಲಿರುವ ವಿಟಮಿನ್​ 'ಸಿ' ಅಂಶ ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚಿದ್ದು, ಇದನ್ನು ಸೇವಿಸುವುದರಿಂದ ಟಾನಿನ್​ ಅಂಶ ಹೆಚ್ಚಾಗಿ, ಚರ್ಮದ ಸುಕ್ಕು ನಿವಾರಣೆಯಾಗುತ್ತದೆ. ಇದರಲ್ಲಿ ವಿಟಮಿನ್, ಕಬ್ಬಿಣ, ಫೈಬರ್​, ಪೋಟ್ಯಾಶಿಯಂ ಮತ್ತು ಪೋಷಕಾಂಶಗಳು ಹೇರಳವಾಗಿರುವ ಕಾರಣ ದೇಹದಲ್ಲಿನ ಹಲವಾರು ಸಮಸ್ಯೆಗಳಿಗೆ ನೆಲ್ಲಿಕಾಯಿ ರಾಮಬಾಣ.

ಆಮ್ಲ ರಸ

ನೆಲ್ಲಿಕಾಯಿಯಲ್ಲಿ ಆ್ಯಂಟಿ-ಆಕ್ಸಿಡೆಂಟ್​ಗಳ ಅಂಶ ಬಲಿಷ್ಟವಾಗಿರುವ ಕಾರಣ ಇದು ಹೃದಯ ಸಮಸ್ಯೆಗಳನ್ನು ತಡೆಗಟ್ಟುವುದರ ಜತೆಗೆ ಹೃದಯದ ಸ್ನಾಯುಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಸಮಯದಲ್ಲಿ ಆಮ್ಲ ರಸ​ ದೇಹಕ್ಕೆ ತಂಪು ಹಾಗೂ ಕಾಂತಿಯುತವಾದ ತ್ವಚೆ ನೀಡುತ್ತದೆ ಮತ್ತು ತುರಿಕೆ, ಮೊಡವೆಗಳಿಂದ ಮುಕ್ತಿ ಕೊಡುತ್ತದೆ.

ಬಿಳಿ ಕೂದಲಿಗೂ ಬೆಸ್ಟ್​

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಗೆ ಈ ಬಿಳಿ ಕೂದಲಿನ ಸಮಸ್ಯೆಗಳು ತೀವ್ರವಾಗಿ ಕಾಡುತ್ತಿದೆ. ವಯಸ್ಸಾದ ಮೇಲೆ ಬರುತ್ತಿದ್ದ ಬಿಳಿ ಕೂದಲು, ಕೇವಲ 20ನೇ ವಯಸ್ಸಿಗೆ ಕಾಡಲಾರಂಭಿಸಿದೆ. ಇಂತಹ ಸಮಸ್ಯೆಗಳಿಗೆ ನೆಲ್ಲಿಕಾಯಿ ಉತ್ತಮ ಪರಿಹಾರ. ನೆಲ್ಲಿಕಾಯಿ ಸೇವನೆ ಅಥವಾ ಅದರ ಪೇಸ್ಟ್​ ಕೂದಲಿಗೆ ಹಚ್ಚುವುದರಿಂದಲೂ ಬಿಳಿ ಕೂದಲು ಏಕಾಏಕಿ ಮಾಯವಾಗದೇ ಇರಬಹುದು. ಆದರೆ, ನಿಧಾನವಾಗಿ ಕಡಿಮೆಯಾಗುವ ಎಲ್ಲ ಸಾಧ್ಯತೆಗಳು ಹೆಚ್ಚಿವೆ.​
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.