Home remedies: ಋತುಮಾನ ಬದಲಾದಂತೆ, ದೇಹದಲ್ಲಿ ಅನೇಕ ರೀತಿಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಶೀತ, ಕೆಮ್ಮು, ಉಸಿರಾಟದ ತೊಂದರೆ, ಗಂಟಲು ನೋವಿನಂತಹ ಸಮಸ್ಯೆಗಳು ಉಂಟಾಗುತ್ತವೆ. ಇಂತಹ ಸಂದರ್ಭದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು ಸಾಮಾನ್ಯವಾಗಿದ್ದರೂ, ಕೆಲವೊಮ್ಮೆ ನೈಸರ್ಗಿಕವಾಗಿ ಸಿಗುವಂತಹ ಮನೆಮದ್ದುಗಳನ್ನು ಬಳಸುವುದರಿಂದ ಬೇಗನೇ ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸಬಹುದು. ಹಾಗಿದ್ದರೆ, ಆ ಮನೆಮದ್ದುಗಳು ಯಾವುದು ಎಂದು ನೋಡೋಣ ಬನ್ನಿ...
ಚಳಿಗಾಲದಲ್ಲಿ ಅಥವಾ ಮಳೆಗಾಲದಲ್ಲಿ ಹಲವಾರು ಜನರು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುತ್ತಾರೆ. ಅಂತಹವರು ಬಾದಾಮಿ, ಕರಿಮೆಣಸು ಹಾಗೂ ಕಲ್ಲು ಸಕ್ಕರೆಯನ್ನು ಪುಡಿ ಮಾಡಿ ಇಟ್ಟುಕೊಳ್ಳಿ. ನಂತರ ಪ್ರತಿದಿನ ರಾತ್ರಿ ಮಲಗುವಕ್ಕಿಂತ ಮುಂಚೆ ಬೆಚ್ಚಗಿನ ಹಾಲಿಗೆ ಅಥವಾ ನೀರಿಗೆ 1 ಚಮಚ ಪುಡಿಯನ್ನು ಬೆರೆಸಿ ಕುಡಿಯಿರಿ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಹಾಗೆಯೇ, ಗಂಟಲು ನೋವನ್ನು ಕಡಿಮೆ ಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬೇಳೆ ಮತ್ತು ಅನ್ನದ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ! ಒಂದೇ ದಿನದಲ್ಲಿ ನಿಮ್ಮ ಮುಖ ಹೊಳೆಯಲು ಪ್ರಾರಂಭಿಸುತ್ತದೆ..beauty tips
ಕೆಲವೊಮ್ಮೆ ಶೀತವು ಹೆಚ್ಚಾಗಿ ಸೈನಸ್ಗೆ ತಿರುಗುತ್ತದೆ ಇದರಿಂದ ಅನೇಕ ರೀತಿಯಾಗಿ ವ್ಯಕ್ತಿಯು ಸಮಸ್ಯೆಯನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಮೂಗು ಕಟ್ಟುವುದು, ಉಸಿರಾಟದಲ್ಲಿ ಏರಿಳಿತವನ್ನು ಅನುಭವಿಸುತ್ತಾನೆ. ಹಾಗಾಗಿ ಅಂತವರು ಸಾಸಿವೆ ಎಣ್ಣೆಯನ್ನು ಮೂಗಿಗೆ ಹಾಕಿಕೊಳ್ಳುವುದರಿಂದ ಇದು ಸೂಕ್ಷ್ಮಜೀವಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಹಾಗೆಯೇ ಉಸಿರಾಟವನ್ನು ಸುಲಭಗೊಳಿಸುತ್ತದೆ. ನಿಯಮಿತವಾಗಿ ಬಳಸುವುದರಿಂದ ಅಲರ್ಜಿಗಳನ್ನು ತಪ್ಪಿಸಬಹುದು.
ಶುಂಠಿ, ಕರಿಮೆಣಸಿನ ಮಿಶ್ರಣವನ್ನು ಸೇವಿಸುವುದರಿಂದ ಕಫವನ್ನು ನಿಯಂತ್ರಿಸಿ, ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯವಾಗುತ್ತದೆ. ಹಾಗಾಗಿ ಒಂದು ಕಪ್ ನೀರಿಗೆ ಜಜ್ಜಿದ ಶುಂಠಿ ಮತ್ತು ಮೆಣಸಿನ ಕಾಳನ್ನು ಹಾಕಿ ಚೆನ್ನಾಗಿ ಕುದಿಸಿರಿ. ನಂತರ ಸ್ವಲ್ಪ ತಣ್ಣಗಾದ ಬಳಿಕ ಸೇವಿಸಿರಿ. ಹೀಗೆ ಮಾಡುವುದರಿಂದ ಕಫವನ್ನು ಕರಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಬೇಗನೆ ಆರಾಮಾಗುವಂತೆ ಮಾಡುತ್ತದೆ.
ಬೇಗನೆ ಶೀತ, ಕೆಮ್ಮು, ಉಸಿರಾಟದ ತೊಂದರೆ ಕಡಿಮೆಯಾಗ ಬೇಕು ಎಂದು ಬಯಸುವವರು ಬಿಸಿ ನೀರಿಗೆ ಸ್ವಲ್ಪ ಹನಿ ಪುದೀನಾ ಎಣ್ಣೆ ಅಥವಾ ವ್ಯಾಲೇರಿಯನ್ ಸೇರಿಸಿ ತಲೆಯ ಮೇಲೆ ಟವೆಲ್ ಹೊಚ್ಚಿಕೊಂಡು 5-10 ನಿಮಿಷಗಳ ಕಾಲ ಆವಿಯನ್ನು ತೆಗೆದುಕೊಳ್ಳಿ. ಇದು ಕಫವನ್ನು ಕರಗಿಸಿ ಉಸಿರಾಡುವಂತೆ ಮಾಡುತ್ತದೆ. ದಿನಕ್ಕೆ 2 ಬಾರಿ ಹೀಗೆ ಮಾಡುವುದರಿಂದ ಆರೋಗ್ಯದಲ್ಲಿ ಉತ್ತಮ ಲಾಭವನ್ನು ಪಡೆಯಬಹುದಾಗಿದೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.