Liver cancer: ಇಂದಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಯಾನ್ಸರ್ಗಳಲ್ಲಿ ಯಕೃತ್ತಿನ ಕ್ಯಾನ್ಸರ್ ಕೂಡಾ ಒಂದು. ಯಕೃತ್ ದೇಹದ ಪ್ರಮುಖ ಅಂಗವಾಗಿದ್ದು, ಇದು ಜೀರ್ಣಕ್ರಿಯೆ, ವಿಷಕಾರಿ ವಸ್ತುಗಳ ವಿಸರ್ಜನೆ, ಶಕ್ತಿ ಸಂಗ್ರಹಣೆ ಮತ್ತು ರೋಗನಿರೋಧಕ ಶಕ್ತಿ ಇನ್ನಿತರ ಕಾರ್ಯಗಳನ್ನು ಮಾಡಲು ಸಹಾಯ ಮಾಡುತ್ತದೆ. ಕೆಲವು ಕೆಟ್ಟ ಅಭ್ಯಾಸಗಳು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತವೆ.
ಇದು ಯಕೃತ್ತಿನ ಜೀವಕೋಶಗಳಲ್ಲಿ ಕೊಬ್ಬಿನ ಪದರವು ಕ್ರಮೇಣ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಇದರ ಆರಂಭಿಕ ಲಕ್ಷಣಗಳು ಸ್ಪಷ್ಟವಾಗಿ ಕಂಡುಬರದೇ ಇದ್ದರು, ಇದರಿಂದ ರೋಗನಿರ್ಣಯ ತಡವಾಗುತ್ತದೆ. ಆದರೆ, ಮನೆಯಲ್ಲಿಯೇ ಸಿಗುವಂತಹ ಕೆಲವು ಪದಾರ್ಥಗಳನ್ನು ಬಳಸಿ ಪಾನೀಯ ತಯಾರಿಸಿ ಕುಡಿಯುವುದರಿಂದ ಇದು ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ನಟ ದರ್ಶನ್ ಆಪ್ತ ಧನ್ವೀರ್ ಕರೆದು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು! ಕಾರಣವೇನು ಗೊತ್ತಾ? Dhanveer Gowda
ಬೀಟ್ರೂಟ್ ಗಡ್ಡೆಗಳು ಯಕೃತ್ತನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಬೀಟೈನ್ ಸಂಯುಕ್ತವು ಯಕೃತ್ತಿನಲ್ಲಿರುವ ವಿಷವನ್ನು ತೆಗೆದುಹಾಕುತ್ತವೆ. ಹಾಗೆಯೇ ಇದು ಉತ್ಕರ್ಷಣ ಗುಣಗಳನ್ನು ಹೊಂದಿದ್ದು, ಯಕೃತ್ತಿನ ನಿರ್ವಿಶೀಕರಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಒಂದು ಲೋಟಾ ಬೀಟ್ರೂಟ್ನ ರಸವನ್ನು ಕುಡಿಯುವುದರಿಂದ ಇದು ಯಕೃತ್ತಿನ ಮೇಲಿನ ಕೊಬ್ಬನ್ನು ಕಡಿಮೆ ಮಾಡಿ ರಕ್ತದಲ್ಲಿರುವ ಕಲ್ಮಶವನ್ನು ತೆಗೆಯಲು ಸಹಾಯ ಮಾಡುತ್ತದೆ.
ಈ 3 ಪದಾರ್ಥಗಳನ್ನು ಬೆರೆಸಿ ಕುಡಿಯುವುದರಿಂದ ಇದು ಯಕೃತ್ತನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಪಿತ್ತ ಲವಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹಾಗೆಯೇ, ಯಕೃತ್ತಿನಲ್ಲಿ ಹೆಚ್ಚುವರಿ ಶೇಖರಣೆಯಾದ ಕೊಬ್ಬನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಎದ್ದ ಕೂಡಲೇ, ಅರ್ಧ ನಿಂಬೆ ರಸಕ್ಕೆ ಅರ್ಧ ಚಮಚ ಆಪಲ್ ಸೈಡರ್ ವಿನೇಗರ್ನ್ನು ಬೆರೆಸಿ ಕುಡಿಯಿರಿ ಇದು ದೇಹದಲ್ಲಿರುವ ಊತವನ್ನು ತಡೆಯುತ್ತದೆ.
ಹಸಿರು ಚಹಾ ಕುಡಿಯುವುದರಿಂದ ಇದು ಉತ್ಕರ್ಷಣ ನಿರೋಧಕಗಳು ಯಕೃತ್ತಿನ ಕಿಣ್ವಗಳನ್ನು ನಿಯಂತ್ರಣದಲ್ಲಿಡುತ್ತವೆ. ವಿಶೇಷವಾಗಿ ಹೇಳುವುದಾದರೆ, ದೇಹದಲ್ಲಿ ALT ಮತ್ತು AST ಕಿಣ್ವಗಳು ಹೆಚ್ಚಾದರೆ ಇದು ಯಕೃತ್ತಿಗೆ ಒತ್ತಡವನ್ನು ಉಂಟು ಮಾಡುತ್ತದೆ. ಹಸಿರು ಚಹಾವು ಯಕೃತ್ತಿನ ಪ್ರಕ್ರಿಯೆಯನ್ನು ಹಿಮ್ಮಟ್ಟಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಹಸಿರು ಚಹಾವನ್ನು ಕುಡಿಯುವುದರಿಂದ ಯಕೃತ್ತನ್ನು ಕಾಪಾಡಿಕೊಳ್ಳಬಹುದು.
ಅರಿಶಿಣವು ನೈಸರ್ಗಿಕ ಉರಿಯೂತವನ್ನು ನಿವಾರಿಸಲು ಸಹಾಯ ಮಾಡುವ ಅಂಶವಾಗಿದೆ. ಇದರಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು, ಇದು ಯಕೃತ್ತಿನ ಕೋಶಗಳಲ್ಲಿರುವ ಉರಿಯೂತವನ್ನು ಕಡಿಮೆ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಅರಿಶಿನ ಹಾಲನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗೆಯೇ ಯಕೃತ್ತನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಇದನ್ನು ನಿರ್ಲಕ್ಷಿಸಿದರೆ, ಯಕೃತ್ನಲ್ಲಿ ಗಂಭೀರ ಸಮಸ್ಯೆ ಉಂಟಾಗುತ್ತದೆ. ಆದರಿಂದ ಸಮಯೋಜಿತ ಬದಲಾವಣೆಗಳನ್ನು ಮಾಡುವುದರಿಂದ ದೇಹದಲ್ಲಿರುವ ಅಂಗಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. (ಏಜೆನ್ಸೀಸ್)