ಲೈಫ್‌ಸ್ಟೈಲ್

ಜನ ಮನ ಗೆದ್ದ ಹಂಟರ್ ವುಡ್ 350 ಬೈಕ್ , ಮೊದಲ ಉತ್ಸವದಲ್ಲೇ ಭಾರಿ ಬೇಡಿಕೆ

ಬೆಂಗಳೂರು: ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ವಿಶೇಷ ಹಾಗೂ ವಿಭಿನ್ನತೆಯಿಂದ ತನ್ನದೆ ಆದ ಚಾಪೂ ಮೂಡಿಸಿ ಲಕ್ಷಾಂತರ ದ್ವಿಚಕ್ರ ವಾಹನ ಪ್ರಿಯರ ಮನಗೆದ್ದಿರುವ ರಾಯಲ್ ಎನ್ಫಿಲ್ಡ್ ಸಂಸ್ಥೆ ಸದ್ಯ ಹಂಟರ್ ವುಡ್ ಉತ್ಸವದ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

ಚೆನ್ನೈನ ಐಲ್ಯಾಂಡ್ ಮೈದಾನದಲ್ಲಿ ನಡೆದ ಬೀದಿ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ನ ನೂತನ ‘ಹಂಟರ್ 350 ’ಆವೃತ್ತಿಯನ್ನು ಬಿಡುಗಡೆಗೊಳಿಸಿ ಬುಲೆಟ್ ಬೈಕ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

ಹೊಸ ಹಂಟರ್ 350 ಆವೃತ್ತಿಯಲ್ಲಿ ರಿಯೋ ವೈಟ್, ಟೋಕಿಯೋ ಬ್ಲಾಕ್, ಲಂಡನ್ ರೆಡ್ ಸೇರಿ ಗ್ರಾೈಟ್ ಗ್ರೇ ಎಂಬ ಆಕರ್ಷಕ ಬಣ್ಣಗಳನ್ನು ಒಳಗೊಂಡಿದ್ದು, ಉತ್ಸವದಲ್ಲಿ ಪಾಲ್ಗೋಂಡ ಸಾರ್ವಜನಿಕರ ಗಮನ ಸೆಳೆಯಿತು. ಇದೇ ವೇಳೆ ನೂರಾರು ಜನರು ಮೋಟಾರು ಬೈಕ್ ಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

‘ಹಂಟರ್ ವುಡ್ ’ ಬಿಡುಗಡೆ ಉತ್ಸವದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಗೀತ ಸಂಜೆ, ರ‌್ಯಾಂಪ್ ವಾಕ್ ಹಾಗೂ ವಿವಿಧ ಬಗೆಯ ನೃತ್ಯದಲ್ಲಿ ಯುವಕರು, ಮಕ್ಕಳು ಕುಣಿದು ಕುಪ್ಪಳಿಸಿದರು. ಈ ವೇಳೆ ಬೈಕ್ ಸವಾರರು, ಕಲಾವಿದರು, ಸ್ಕೇಟರ್ಸ್ ಸೇರಿ ಇನ್ನಿತರರು ಭಾಗವಹಿಸಿದ್ದರು.

ಹಂಟರ್ 350 ವಿಶೇಷ:

ಹೊಸ ರಾಯಲ್ ಎನ್‌ಫೀಲ್ಡ್ ನ ಹಂಟರವುಡ್ 350 ಹಲವು ವಿಶೇಷತೆಗಳೊಂದಿಗೆ ಬಿಡಗೊಂಡಿದ್ದು, ಈ ಹಿಂದಿಯ ಆವೃತ್ತಿಗಳಿಗಿಂತ ವಿಭಿನ್ನತೆ ಒಳಗೊಂಡಿದೆ. ಸಾಮಾನ್ಯ ವ್ಯಕ್ತಿಗಳು ಸಹ ಬುಲೆಟ್ ಬೈಕ್ ಖರೀದಿಸಬೇಕೆಂದು ಸಂಸ್ಥೆಯು ಉತ್ತಮ ಬೆಲೆ ನಿಗಧಿಮಾಡಿದೆ.

ಈ ಬೈಕ್ ಕಡಿಮೆ ಬೆಲೆಯಲ್ಲಿ 60 ಕಿ.ಮೀ ಮೈಲೇಜ್ ಮತ್ತು 250 ಕಿ.ಮೀ ಸ್ಪೀಡ್ ನೀಡುತ್ತದೆ. 349 ಸಿಸಿ ಸಿಂಗಲ್-ಸಿಲಿಂಡರ್ ಹೊಂದಿದೆ. ಏರ್-ಆಯಿಲ್ ಕೂಲ್ಡ್ ಎಂಜಿನ್ ಜತೆಗೆ ಇದು ಸುಮಾರು 20.2 ಬಿಎಚ್‌ಪಿ ಪವರ್ ಮತ್ತು 27 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ 5 ಸ್ಪೀಡ್ ಗೇರ್‌ಬಾಕ್ಸೃ್ ಸುಗಮ ಶಿಫ್ಟಿಂಗ್ ಅನುಭವ ನೀಡುವುದಲ್ಲದೆ ನಗರ ಪ್ರದೇಶದ ಸವಾರಿಯಲ್ಲಿ ಇದರ ನಿರ್ವಹಣೆ ತುಂಬಾ ಹಗುರವಾಗಿರುತ್ತದೆ ಹಾಗೂ ಸಂಚಾರದಲ್ಲಿ ಬೈಕ್ ನಿರ್ವಹಣೆ ಸುಲಭವಾಗುತ್ತದೆ.

ಜನಾಭಿಪ್ರಾಯ

ಬುಲೆಟ್ ಎಂದರೇನೇ ಅದೊಂದು ಗತ್ತು. ನನಗೆ ರಾಯಲ್ ಎನ್ಫಲ್ಡ್ ಬೈಕ್ ಎಂದರೇ ಬಹಳ ಇಷ್ಟ

ನನಗೆ ಬೈಕ್ ಖರೀದಿಸುವ ಹಾಗೂ ಸಂಗ್ರಹಿಸುವ ಹವ್ಯಾಸ ಇದೆ. ಹಂಟರ್ ಹುಡ್ ಕಾರ್ಯಕ್ರಮ ತುಂಬಾ ಪ್ರಯೋಜನವಾಗಿದೆ ಜತೆಗೆ ರಸ ಸಂಜೆ, ಬೈಕ್ ರೈಡಿಂಗ್, ನೃತ್ಯ ಎಲ್ಲವು ಹೊಸತನಕ್ಕೆ ಕಾರಣವಾಗಿದೆ.