Relationship killer time poverty
- ಸಂಬಂಧಗಳ ಮುರಿತಕ್ಕೆ ವಂಚನೆ ಮಾತ್ರವಲ್ಲ, ಪರಸ್ಪರ ಸಮಯ ಕೊಟ್ಟುಕೊಳ್ಳದೇ ಇರುವುದೇ ಕಾರಣ
- ಕಚೇರಿ ಕೆಲಸ, ಸ್ಮಾರ್ಟ್‌ಫೋನ್ ಬಳಕೆ ಒತ್ತಡದಿಂದ ದೂರಾಗುತ್ತಿರುವ ಕಪಲ್ಸ್
- ಡಿಜಿಟಲ್ ವ್ಯಾಮೋಹದಿಂದ ಹೊರಬಂದು ಪರಸ್ಪರ ಸಮಯ ನೀಡುವುದೇ ಇದಕ್ಕೆ ಏಕೈಕ ಪರಿಹಾರ.
Relationship killer time poverty:
ಸಾಮಾನ್ಯವಾಗಿ ಪ್ರೀತಿ, ಮದುವೆ ವಿಚಾರದಲ್ಲಿ ಇಬ್ಬರ ಮಧ್ಯೆ ಬಿರುಕು ಉಂಟಾದಾಗ ಇಬ್ಬರ ಮಧ್ಯದ ಆಲೋಚನೆ, ಚಿಂತನೆ, ಹಣದ ಸಮಸ್ಯೆ, ಹೊಂದಾಣಿಕೆ, ಕಮ್ಮಿಯಾಗುತ್ತಿರುವ ರೊಮ್ಯಾನ್ಸ್ ಅಥಬಾ ಇಬ್ಬರಲ್ಲಿ ಒಬ್ಬರಿಗೆ ವಿವಾಹೇತರ ಸಂಬಂಧವಿರಬೇಕು ಎಂದು ಊಹೆ ಮಾಡಲಾಗುತ್ತದೆ. ಹೀಗಾಗಿಯೇ ಹೆಚ್ಚು ಡಿವೋರ್ಸ್ಗಳು ಆಗಿರುವ ಉದಾಹರಣೆಯು ಇದೆ. ಆದರೆ ಇಂದಿನ ಜೆನ್ ಜೀ ಕಾಲದಲ್ಲಿ ಹೆಚ್ಚು ಬಿರುಕು ಹಾಗೂ ಪ್ರೀತಿ ಪಾತ್ರರಿಗೆ ವಂಚಿಸುತ್ತಿರುವುದಕ್ಕೆ ಕಾರಣ ಸಮಯ ನೀಡದೇ ಇರುವುದು ಎನ್ನುವುದಾಗಿ ವರದಿಯೊಂದು ಮಾಹಿತಿ ಬಿಚ್ಚಿಟ್ಟಿದೆ.
ಸಮಯ ಕೊಡದೇ ಇರುವುದೇ ದಾಂಪತ್ಯ ಬಿರುಕಿಗೆ ಕಾರಣ
ಪ್ರೇಮಿಗಳು ಮತ್ತು ದಾಂಪತ್ಯದ ಸಂಬಂಧದಲ್ಲಿ ಬಿರುಕು ಮೂಡಲು‘ಸಮಯದ ಅಭಾವ’ ಕಾರಣ ಎನ್ನುವುದನ್ನು ಇತ್ತೀಚಿನ IPSOS ಜೊತೆಗೆ ಗ್ಲೀಡೆನ್ ನಡೆಸಿದ ಹೊಸ ಅಧ್ಯಯನಗಳ ಪ್ರಕಾರ ತಿಳಿದುಬಂದಿದೆ. ಜನರೇಷನ್ ಝಡ್, ಮಿಲೇನಿಯಲ್ಸ್ ಮತ್ತು ಜನರೇಷನ್ ಎಕ್ಸ್ ಹೇಗೆ ತಮ್ಮ ಸಂಬಂಧವನ್ನು ಮುರಿದುಕೊಳ್ಳುತ್ತಾರೆ ಎನ್ನುವುದನ್ನು ಈ ವರದಿ ವಿವರಣೆ ಕೊಟ್ಟಿದೆ.
ಶತ್ರುವಾಗುತ್ತಿರುವ ಬ್ಯುಸಿ ಲೈಫ್
ಈ ಆಧುನಿಕ ಕಾಲಘಟ್ಟದಲ್ಲಿ ನಿತ್ಯ ಕೆಲಸ ಮಾಡುವುದು, ಅಡುಗೆ ತಯಾರಿ, ಕಚೇರಿ ಕೆಲಸದ ಡೆಡ್‌ಲೈನ್, ಟ್ರಾಫಿಕ್ನಲ್ಲಿ ಗಂಟೆಗಟ್ಟಲೇ ಸಮಯ ಕಳೆಯೋದು, ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯು ಸಂಗಾತಿ ಅಥವಾ ಪ್ರೇಮಿಯೊಂದಿಗೆ ಪರಸ್ಪರ ಮಾತನಾಡುವುದು, ತಮಾಷೆ ಮಾಡಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಸಂಜೆ ಹೊರಗೆ ಹೋಗೋದಾಗಿ ಪ್ಲ್ಯಾನ್ ಮಾಡಿದರೂ ಸಹ ಜನರು ದೈಹಿಕವಾಗಿ ಅಲ್ಲಿದ್ದರೆ, ಮಾನಸಿಕವಾಗಿ ಇನ್ನೆಲ್ಲೋ ಗಮನ ಹರಿಸಿರುತ್ತಾರೆ. ಇಲ್ಲವೇ ಮೊಬೈಲ್ನಲ್ಲಿ ರೀಲ್ಸ್ಗಳನ್ನು ನೋಡಿ ಕಾಲ ಕಳೆಯುತ್ತಾರೆ. ಇಲ್ಲವೇ ದೇಹವೆಲ್ಲ ದಣಿದು ಜರ್ಜರಿತಗೊಂಡು ಮಾತನಾಡಲು ಆಗದಂತೆ ಕ್ಷಣಿಕ ಎಂಟರ್ಟೇನ್ಮೆಂಟ್ಗೆ ತುತ್ತಾಗುತ್ತಾರೆ.
ಎಷ್ಟು ಜನರ ದಾಂಪತ್ಯ ಜೀವನ ಯಾವ ಮಟ್ಟಕ್ಕಿದೆ?
IPSOS ಜೊತೆಗೆ ಗ್ಲೀಡೆನ್ ನಡೆಸಿದ ಸಮೀಕ್ಷೆ ನಡೆಸಿದ ಪ್ರಕಾರ ಶೇ. 94ರಷ್ಟು ಜನರು ಮೇಲ್ನೋಟಕ್ಕೆ ನಾವು ಚೆನ್ನಾಗಿದ್ದೇವೆ ಎಂದು ತೋರ್ಪಡಿಸಿಕೊಳ್ಳುತ್ತಾರೆ. ಇನ್ನೂ ಶೇ.25ರಷ್ಟು ಮಂದಿ ಯಾವುದೇ ಕೊರತೆಯಿಲ್ಲ ಎನ್ನುವುದು ಈ ವರದಿಯಲ್ಲಿದೆ. ಶೇ.51ರಷ್ಟು ಜನರು ಭಾವನಾತ್ಮಕ ಕೊರತೆಯಿಂದ ಬಳಲುತ್ತಿದ್ದರೆ, ಇನ್ನು ಶೇ.40ರಷ್ಟು ಜನರು ಯಾವುದೇ ಕುತೂಹಲಗಳಿಲ್ಲದೆ ಬಳಲುತ್ತಿದ್ದಾರೆ ಎನ್ನಲಾಗಿದೆ.
ಪರಿಹಾರ ಏನು?
ಸಮಯದ ಅಭಾವದಿಂದ ಎದುರಾಗುವ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಸ್ಮಾರ್ಟ್ ಫೋನ್ಗಳಿಂದ ಹೆಚ್ಚು ದೂರವಿರಿ..ಸಿನಿಮಾ ಹಾಗೂ ಸ್ಥಳೀಯ ಸ್ಥಳಕ್ಕೆ ಭೇಟಿ ನೀಡಿ. ಒಬ್ಬರಿಗೊಬ್ಬರು ಹೆಚ್ಚು ಹೊತ್ತು ಕುಳಿತು ಮಾತನಾಡಿ ಸಮಸ್ಯೆ ಆಲಿಸಿಕೊಳ್ಳಿ. ವೀಕೆಂಡ್ಗಳಲ್ಲಿ ಪಾರ್ಕ್ ಅಥವಾ ನೈಟ್ ಔಟ್, ಹೋಟೆಲ್ಗಳಿಗೆ ತೆರಳಿ ಜೊತೆಗೆ ಮಾತನಾಡುತ್ತಾ ಆಹಾರ ಸೇವನೆ ಮಾಡೋದು ಆರೋಗ್ಯಕ್ಕೂ ಒಳ್ಳೆಯದು, (ಏಜೆನ್ಸೀಸ್).