ಲೈಫ್‌ಸ್ಟೈಲ್

ಬೆಳಗಿನ ಉಪಹಾರ - ಮಧ್ಯಾಹ್ನದ ಭೋಜನದ ಮಧ್ಯೆ ಎಷ್ಟು ಗಂಟೆಗಳ ಅಂತರವಿರಬೇಕು?

ಬೆಳಿಗ್ಗೆ ರಾಜನಂತೆ ತಿನ್ನು, ಮಧ್ಯಾಹ್ನ ಮಂತ್ರಿಯಂತೆ, ರಾತ್ರಿ ಸೇವಕನಂತೆ ತಿನ್ನಬೇಕು ಎನ್ನುವ ಮಾತಿದೆ. ಅಂದರೆ ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ಯಾವ ಹೊತ್ತಿನಲ್ಲಿ ಏನು ತಿನ್ನಬೇಕು ಎಷ್ಟು ತಿನ್ನಬೇಕು ಅನ್ನುವ ಅಂಶ ಬಹಳ ಪರಿಣಾಮ ಬೀರುತ್ತದೆ. ಇದರ ಜೊತೆಗೆ ನಾವು ಯಾವ ಹೊತ್ತಿನಲ್ಲಿ ಆಹಾರ ಸೇವಿಸುತ್ತೇವೆ ಎನ್ನುವುದು ಕೂಡಾ ಬಹಳ ಮುಖ್ಯವಾಗಿ ಪರಿಗಣಿಸಬೇಕಾದ ಅಂಶ.


ಬೆಳಗ್ಗೆ ಉಪಹಾರ ತಡವಾಗಿ ಆಯಿತು ಎಂದಾದರೆ, ಮಧ್ಯಾಹ್ನ ಹಸಿವಾಗದಿದ್ದರೂ ಬಲವಂತವಾಗಿ ತಿನ್ನುವ ಅವಶ್ಯಕತೆ ಇಲ್ಲ. ಆರೋಗ್ಯಕರ ಮತ್ತು ಸಮತೋಲಿತ ಉಪಹಾರವು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುತ್ತದೆ. ಈ ಆಹಾರ ನೀಡುವ ಶಕ್ತಿಯು ದೇಹದಲ್ಲಿ 4 ರಿಂದ 5 ಗಂಟೆಗಳವರೆಗೆ ಇರುತ್ತದೆ.


ಉಪಾಹಾರದ ನಂತರ ಊಟಕ್ಕೆ ಸರಿಯಾದ ಸಮಯ :
ಉಪಾಹಾರದ ನಂತರ ಊಟಕ್ಕೆ ಸರಿಯಾದ ಸಮಯ ಯಾವುದು ಎನ್ನುವುದನ್ನು ಕೂಡಾ ತಜ್ಞರು ವಿವರಿಸುತ್ತಾರೆ. ತಜ್ಞರ ಪ್ರಕಾರ, ಬೆಳಿಗ್ಗೆ 8 ಗಂಟೆಗೆ ಉಪಹಾರ ಸೇವಿಸಿದರೆ, ಮಧ್ಯಾಹ್ನ 1 ಗಂಟೆಗೆ ಊಟ ಮಾಡಬೇಕು. ಮತ್ತೊಂದೆಡೆ, ಒಂದು ವೇಳೆ 1 ಗಂಟೆಗೆ ಊಟ ಮಾಡುವುದು ಸಾಧ್ಯವಾಗದೆ ಇದ್ದರೆ, ಮಧ್ಯಾಹ್ನ 2 ರ ನಡುವೆ ಭೋಜನ ಮುಗಿಸಬೇಕು. ಒಂದು ವೇಳೆ ಬೆಳಗಿನ ಉಪಹಾರದಲ್ಲಿ ಕಡಿಮೆ ಆಹಾರ ಸೇವಿಸಿದ್ದಾಗ ಅಥವಾ ಬೆಳಗಿನ ಉಪಾಹಾರವನ್ನು ಸೇವಿಸದಿದ್ದರೆ, ಮಧ್ಯಾಹ್ನ ಬೇಗನೆ ಹಸಿವಾಗುತ್ತದೆ. ಕೆಲವೊಮ್ಮೆ ಇದು ನಿಮ್ಮ ಚಟುವಟಿಕೆಯ ಮಟ್ಟವನ್ನು ಕೂಡಾ ಅವಲಂಬಿಸಿರುತ್ತದೆ.


ಎರಡು ಊಟಗಳ ನಡುವೆ 3 ರಿಂದ 5 ಗಂಟೆಗಳ ಅಂತರ ಇರಬೇಕು :
ಸಂಶೋಧನೆಗಳ ಪ್ರಕಾರ, Meal Frequency ತೂಕ ನಷ್ಟ, ಹೃದಯದ ಆರೋಗ್ಯ ಮತ್ತು ಮಧುಮೇಹದ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಎರಡು ಊಟಗಳ ನಡುವೆ 3 ರಿಂದ 5 ಗಂಟೆಗಳ ಅಂತರವನ್ನು ಇರಿಸಿಕೊಳ್ಳಬೇಕು. ಇದರಿಂದ ಜೀರ್ಣಕ್ರಿಯೆಗೆ ಪೂರ್ಣ ಸಮಯ ಸಿಗುತ್ತದೆ.


ಬೇಕಾ ಬಿಟ್ಟಿ ಸಮಯಗಳಲ್ಲಿ ತಿನ್ನಬೇಡಿ :
ಊಟಕ್ಕೆ ದಿನಚರಿಯನ್ನು ಹೊಂದಿಸಿಕೊಳ್ಳಿ. ಇದರಿಂದ ಯಾವಾಗ ಬೇಕೋ ಆವಾಗ ಕೈಗೆ ಸಿಕ್ಕ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸುತ್ತದೆ. ಪ್ರತಿ ದಿನ ಬೆಳಿಗ್ಗೆ ಸರಿಯಾದ ಸಮಯದಲ್ಲಿ ಉಪಹಾರವನ್ನು ಸೇವಿಸುತ್ತಾ ಬಂದರೆ ಮಧ್ಯಾಹ್ನದ ಭೋಜನವನ್ನು ಕೂಡಾ ನಿಗದಿತ ಸಮಯಕ್ಕೆ ನಿಗದಿ ಮಾಡಿಕೊಳ್ಳಬಹುದು.