ಡೇಟ್ ಮೈ ಫ್ರೆಂಡ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ವೈರಲ್.
ಪಿಪಿಟಿ ಮೂಲಕ ನಿಮ್ಮ ಫ್ರೆಂಡ್ಗೆ ಬಾಳ ಸಂಗಾತಿ ಹುಡುಕಿಕೊಡಲು ಸದಾವಕಾಶ.
ಹುಡ್ಗಿ ಸಿಕ್ತಿಲ್ವೋ ಎಂದು ಒಂಟಿಯಾಗಿರುವ ಗೆಳೆಯನಿಗೆ ನೀವೆ ಮುಂದೆ ನಿಂತು ಜಂಟಿಯನ್ನಾಗಿ ಮಾಡಿ.
Date My Friend: ಆಧುನಿಕ ಕಾಲಘಟ್ಟದಲ್ಲಿ ಸಂಬಂಧ ವಿಚಾರದಲ್ಲಿ ನಾನಾ ಬದಲಾವಣೆಗಳು ಕೇಳಿಬರುತ್ತಲೇ ಇರುತ್ತದೆ. ಈಗಂತು ಜೆನ್ ಜೀಗಳು ಸಿಚುವೇಶನ್ ಶಿಪ್, ಟ್ರಾವೆಲ್ ಡೇಟಿಂಗ್, ರೆಡ್-ಗ್ರೀನ್ ಫ್ಲ್ಯಾಗ್ ಸೇರಿದಂತೆ ನಾನಾ ಟ್ರೆಂಡ್ ಅನ್ನು ತಂದಿದ್ದಾರೆ. ಇದರೊಂದಿಗೆ ವೈರಲ್ ಆಗ್ತಿರುವ ಮತ್ತೊಂದು ವಿಚಾರ ಎಂದರೆ ಅದು ಡೇಟ್ ಮೈ ಫ್ರೆಂಡ್.
ಇದೇನಪ್ಪಾ ಹೀಗಿದೆ ಎನ್ನುತ್ತೀರಾ ಇದೊಂದು ಹೊಸ ಜೆನ್ ಜೀ ಟ್ರೆಂಡ್. ಇದರ ಮೂಲಕ ಪ್ರತಿ ಬಾರಿ ನಿಮ್ಮನ್ನು ಭೇಟಿ ಮಾಡಿದ ಗೆಳೆಯ ಮಗಾ ಯಾವುದು ಹೆಣ್ಣು ಸಿಗ್ತಿಲ್ವೋ, ವಯಸ್ಸಾಗ್ತಿದೆ ಮದುವೆ ಆಗಿಲ್ಲ, ಹುಡ್ಗಿ ಜೊತೆ ಓಡಾಡಿಲ್ಲ. ಯಾರ ಮೇಲೆ ನಂಬಿಕೆ ಬರ್ತಿಲ್ಲ ಎಂದು ಗೋಳಾಡೋದನ್ನು ಕೇಳಿ ಕೇಳಿ ನಿಮ್ಗೆ ಬೇಸರವಾಗಿರೋದಂತು ಗ್ಯಾರಂಟಿ. ಆದರೆ, ಇನ್ಮುಂದೆ ಆ ಟೆನ್ಶನ್ ಇರೋದಿಲ್ಲ. ಯಾಕೆಂದರೆ, ಡೇಟ್ ಮೈ ಫ್ರೆಂಡ್ ನಿಮ್ಮ ಫ್ರೆಂಡ್ ಬಗ್ಗೆ ಪ್ರೆಸೆಂಟೇಶನ್ ಕೊಟ್ಟು ಬಾಳ ಸಂಗಾತಿಯನ್ನು ಹುಡುಕಿ ಕೊಡಬಹುದಾಗಿದೆ. ಏನಿದು ಟ್ರೆಂಡ್ ಹೇಗೆಲ್ಲ ಇರತ್ತೆ ಇದರ ಪ್ರಕ್ರಿಯೆ ಎನ್ನುವುದಕ್ಕೆ ಮಾಹಿತಿ ಇಲ್ಲಿದೆ.
ಸೋಷಿಯಲ್ ಮೀಡಿಯಾದಲ್ಲಿ ಈಗ 'ಡೇಟ್ ಮೈ ಫ್ರೆಂಡ್' ವೈರಲ್ ಆಗುತ್ತಿದೆ. ಆ ಮೂಲಕ ಒಂಟಿಯಾಗಿರುವ ಸ್ನೇಹಿತರನ್ನು ಜಂಟಿಯಾಗಿ ಮಾಡಲು. ಅವರ ಫೋಟೋ ಹಂಚಿಕೊಂಡು ಅವರ ಬಗ್ಗೆ ಪ್ರಸೆಂಟೇಶನ್ ಕೊಡುವ ಮೂಲಕ ಅವರಿಗೆ ಬಾಳ ಸಂಗಾತಿಯನ್ನು ಹುಡುಕಿ ಕೊಡಬಹುದಾಗಿದೆ. ಇದು ಸುಳ್ಳಲ್ಲ ಈಗಾಗಲೇ ಇನ್ಸ್ಟಾಗ್ರಾಮ್ನಲ್ಲಿ ಇಂತಹ ರೀಲ್ಸ್ಗಳು ವೈರಲ್ ಆಗಿವೆ.
ಇದು ಜಾಗತಿಕವಾಗಿ ಸಿಂಗಾಪುರ, ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್‌ನಲ್ಲಿ ಯುವಜನರಲ್ಲಿ ಹೆಚ್ಚು ಪ್ರಖ್ಯಾತಿ ಪಡೆಯುತ್ತಿರುವ ಒಂದು ವಿನೂತನ ಈವೆಂಟ್ ಆಗಿದೆ.
ನೀವು ನಿಮ್ಮ ಫ್ರೆಂಡ್ಗೆ ಬಾಳ ಸಂಗಾತಿಯನ್ನು ಹುಡುಕಲು ಯತ್ನಿಸುತ್ತಿದ್ದರೆ, ಡೇಟ್ ಮೈ ಫ್ರೆಂಡ್ ಮೂಲಕ 'ಸ್ನೇಹಿತ ಎ' ಬಗ್ಗೆ ಮತ್ತೊಬ್ಬ 'ಸ್ನೇಹಿತ ಬಿ'ಗೆ ಪರಿಚಯಿಸಲು 3 ರಿಂದ 5 ನಿಮಿಷಗಳ ಪಿಪಿಟಿ ಸಿದ್ಧಪಡಿಸಬೇಕು. ನೀವು ಡೇಟ್ ಮಾಡಲು ಬಯಸಿರುವ ನನ್ನ ಬೆಸ್ಟ್ ಫ್ರೆಂಡ್ನಲ್ಲಿ ಈ ಉತ್ತಮ ಗುಣಗಳಿದೆ. ಅವರೆಷ್ಟು ಕೇರಿಂಗ್, ಡೇಟ್ ಮಾಡುವುದರಿಂದಾಗುವ ಲಾಭ ಏನು? ಎನ್ನುವುದನ್ನು ಈ ಪಿಪಿಟಿಯಲ್ಲಿ ಇರಬೇಕು.
ಫ್ರೆಂಡ್ನ ಉತ್ತಮ ಗುಣಗಳ ಬುಲೆಟ್ ಪಾಯಿಂಟ್, ಫೋಟೋ, ಮೀಮ್, ಗ್ರಾಫಿಕ್ಸ್ ಹಾಗೂ ತಮಾಷೆ ಜೊತೆಗೆ ಮನಸ್ಸಿಗೆ ಹತ್ತಿರವಾಗುವ ವಿಚಾರಗಳನ್ನು ಪ್ಯಾರಾಗಳಂತೆ ವಿವರಿಸಬೇಕು. ಪ್ರೆಸೆಂಟೇಶನ್ ಮುಗಿದ ಬಳಿಕ ಅಲ್ಲಿರುವ ಎಲ್ಲ ಸ್ನೇಹಿತರು ಸೇರಿ ಪ್ರೆಸೆಂಟರ್ ಅನ್ನು ತೀವ್ರವಾದ ಪ್ರಶ್ನೆಗಳಿಗೆ ಒಳಪಡಿಸುತ್ತಾರೆ.
ಅರಿಯದೇ ಯಾರನ್ನೋ ಡೇಟ್ ಮಾಡಿ ಹಣ ಕಳೆದುಕೊಳ್ಳುವುದು ಅಥವಾ ಮೋಸಕ್ಕೆ ಒಳಗಾಗುವುದನ್ನು ಇದು ತಪ್ಪಿಸುತ್ತದೆ. ಅಕಸ್ಮಾತ್ ವಂಚನೆಗೆ ಒಳಗಾದರೂ ಇಲ್ಲಿ ಹುಡುಗಿಯನ್ನು ಹುಡುಕುವಾಗ ಜೊತೆಯಿದ್ದ ಫ್ರೆಂಡ್ಗಳ ಸಹಾಯ ಮತ್ತಿತ್ತರ ಲಾಭವು ಸಿಗಲಿದೆ. ಜೊತೆಗೆ ಸಂಗಾತಿಯ ಜೀವನಶೈಲಿ, ಅಭ್ಯಾಸಗಳು, ಲಭ್ಯತೆ, ಹಾಗೂ ಅವರ ಒಳ್ಳೆಯ ಹಾಗೂ ಕೆಟ್ಟ ಗುಣಗಳ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಸಿಗುತ್ತದೆ. ಜೊತೆಗೆ ಈ ಪಿಪಿಟಿಯಿಂದ ಒಂದಾದ ಸಂಗಾತಿಗಳು ಡೇಟ್ ಮುಂದುವರೆಸಬಹುದು, ಮದುವೆಯಾಗಬಹುದು ಅಥವಾ ಬ್ರೇಕಪ್ ಸಹ ಮಾಡಿಕೊಳ್ಳಬಹುದು. ಇಲ್ಲಿ ವಂಚನೆ ಅಥವಾ ಹಾರ್ಟ್ ಬ್ರೇಕ್ಗಳಿಗಂತೂ ಜಾಗನೇ ಇರೋದಿಲ್ಲ,
ನಿಮ್ಮ ಮದುವೆ ಆಗೋಯ್ತು ನನಗಿನ್ನೂ ಹುಡುಗಿ ಸಿಕ್ತಿಲ್ಲ. ಸಿಕ್ಕವರು ಒಳ್ಳೆಯವರಾ ಕೆಟ್ಟವರಾ ಅನ್ನೋದು ತಿಳಿಯುತ್ತಿಲ್ಲ ಎಂದು ನಿಮ್ಮ ಬಳಿ ನಿಮ್ಮ ಸ್ನೇಹಿತರು ಗೋಳಾಡುವುದು. ಇದರಿಂದ ನೀವು ಕಂಗೆಟ್ಟು ಯಾರ್ಯಾರನ್ನೋ ಹುಡುಕಿ ತಲೆ ಕೆಡಿಸಿಕೊಳ್ಳುವುದು,. ಇನ್ನೂ ಮ್ಯಾಟ್ರಿಮೋನಿ ಹಾಗೂ ಬ್ರೋಕರ್ಗಳಿಗೆ ದುಬಾರಿ ಹಣ ಕೊಟ್ಟು ಸಾಲಗಾರರಾಗುವ ಚಿಂತೆ ಈ ಟ್ರೆಂಡ್ನಲ್ಲಿ ಇಲ್ಲ, (ಏಜೆನ್ಸೀಸ್).