Epsom Salt hot water Swollen Feet Remedy
- ಕಾಲು ನೋವು, ಊತ ಶಮನಕ್ಕೆ 10 ನಿಮಿಷದ ಎಪ್ಸಮ್ ಸಾಲ್ಟ್ ವಾಟರ್ ಥೆರಪಿ ಮದ್ದು.
- ಮ್ಯಾಗ್ನೇಷಿಯಂ ಸಲ್ಫೇಟ್ ಪಾದಗಳ ಉರಿಯೂತ ಮತ್ತು ಊತವನ್ನು ತಕ್ಷಣ ತಗ್ಗಿಸುತ್ತದೆ.
- ಉಗುರುಬೆಚ್ಚಗಿನ ನೀರು ಸ್ನಾಯುಗಳನ್ನು ಸಡಿಲಗೊಳಿಸಿ ಕಾಲುಗಳಲ್ಲಿ ರಕ್ತ ಪರಿಚಲನೆ ಸುಗಮಗೊಳಿಸತ್ತೆ.
Epsom Salt hot water Swollen Feet Remedy: ಒಂದೇ ಕಡೆ ಕುಳಿತು ಕೆಲಸ ಮಾಡುವುದು, ಅಥವಾ ನಿಂತೇ ಇರುವುದು ಕಾಲು ಬೇನೆಗೆ ಕಾರಣವಾಗುತ್ತದೆ, ಇತ್ತೀಚಿನ ದಿನದಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದರ ಜೊತೆಗೆ ನರಗಳ ಆಯಾಸ, ಒತ್ತಡವೂ ಹೆಚ್ಚಾಗುತ್ತದೆ. ಇದರಿಂದ ಮುಕ್ತಿ ಪಡೆಯಲು ನಿತ್ಯ 10 ನಿಮಿಷಗಳ ಕಾಲ 'ಎಪ್ಸಮ್ ಸಾಲ್ಟ್' ಎನ್ನುವ ಟ್ರಿಕ್ ಪ್ರಯೋಗಿಸಿ ಅಥವಾ ಕಾಲುಗಳನ್ನು ಗೋಡೆ ಮೇಲೆ ನಿಮ್ಮ ಕಾಲನ್ನು ಒರಗಿಸುವ ವ್ಯಾಯಾಮ ಮಾಡಿ.
ಟ್ರಿಕ್ಸ್ ಯಾವುದು ಗೊತ್ತಾ?
ನಾವು ಸಣ್ಣವರಿದ್ದಾಗ ನೋಡಿಯೇ ಇದ್ದೇವೆ, ಕಾಲು ನೋವು ಎಂದಾಗ ನಮ್ಮ ಹಿರಿಯರು ಕೊಂಚ ಬಿಸಿ ನೀರಿಗೆ ಉಪ್ಪಿನ ನೀರನ್ನು ಹಾಕಿ ಕೊಡುವುದು ಗೊತ್ತೆ ಇದೆ ಅದೇ ಟ್ರಿಕ್ಸ್ ಅನ್ನು ಆಧುನಿಕ ಕಾಲಘಟ್ಟದಲ್ಲಿ 'ಎಪ್ಸಮ್ ಸಾಲ್ಟ್' ಎಂದು ಕರೆಯಲಾಗುತ್ತದೆ. ಒಂದು ಸಣ್ಣ ಟಬ್ ಅಥವಾ ಬಕೆಟ್ ಕಾಲಿಡಲು ಸೂಕ್ತವಾಗಿರುವಷ್ಟು ಬಿಸಿಯ ನೀರು. ನೀರಿಗೆ ಎಪ್ಸಮ್ ಸಾಲ್ಟ್ ಸೇರಿಸಿ ಚೆನ್ನಾಗಿ ಕರಗಿಸಿ. ಈಗ ಆ ನೀರಿನಲ್ಲಿ ನಿಮ್ಮ ಕಾಲನ್ನು ಇಟ್ಟು 10-15 ನಿಮಿಷ ಹಾಗೆಯೇ ಬಿಡಿ. ಇದು ನಿಮ್ಮ ಕಾಲಿನ ಬೇನೆಯನ್ನು ಶಮನ ಮಾಡುತ್ತದೆ. ಅಲ್ಲದೆ ಮನಸ್ಸಿಗೂ ನಿರಾಳ ನೀಡುವ ಕೆಲಸವನ್ನು ಇದು ಮಾಡಲಿದೆ.
ಹೇಗೆ ನಿವಾರಿಸುತ್ತದೆ.
ಕಾಲು ಊತ ಹಾಗೂ ನೋವು ಕಾಣಿಸಿಕೊಂಡಾಗ ಎಪ್ಸಮ್ ಸಾಲ್ಟ್ ಹಾಕಿ ಬೆಚ್ಚಗಿನ ನೀರಿನಲ್ಲಿ ಕಾಲನ್ನು ಇಡುವುದರಿಂದ ಇದರಲ್ಲಿರುವ ಅಂಶವು ಚರ್ಮದ ಮೂಲಕ ದೇಹಕ್ಕೆ ಸೇರುತ್ತದೆ. ಆಗ ಕಾಲಿನಲ್ಲಿ ಸಂಗ್ರಹವಾಗಿರುವ ಹೆಚ್ಚುವಿ ದ್ರವವನ್ನು ಕಡಿಮೆ ಮಾಡಿ, ಉರಿಯೂತ ಕಡಿಮೆ ಮಾಡಲು ಸಹಾಯ ಆಡುತ್ತದೆ. ಆಮೂಲಕ ಬೇನೆ ಶಮನವಾಗುತ್ತದೆ,
ಹೇಗೆ ಕೆಲಸ ಮಾಡುತ್ತದೆ
ಬೆಳಗೆದ್ದು ಆಫೀಸು, ಅಡುಗೆ ಕೆಲಸ ಸಂಜೆ ಟ್ರಾಫಿಕ್ನಲ್ಲಿ ಗಂಟೆ ಗಟ್ಟಲೇ ಬಸ್ನಲ್ಲಿ ಕೂರುವುದು ಸೇರಿದಂತೆ ಆಧುನಿಕ ಜೀವನದ ಈ ಬದುಕು ನರಗಳ ಆಯಾಸಕ್ಕೆ ಕಾರಣವಾಗುತ್ತದೆ. ಎಪ್ಸಮ್ ಸಾಲ್ಟ್ ಮಿಶ್ರಿತ ಬಿಸಿನೀರಿನಲ್ಲಿ ಪಾದಗಳನ್ನಿಡುವುದರಿಂದ ದೇಹದಲ್ಲಿ ಮೆಲಟೋನಿನ್ ಮತ್ತು ಸಿರೊಟೋನಿನ್ ಹಾರ್ಮೋನ್‌ಗಳ ಉತ್ಪಾದನೆಗೆ ಪ್ರಚೋದನೆ ಸಿಗುತ್ತದೆ. ಇದು ನಿಮ್ಮ ನರಮಂಡಲವನ್ನು ಶಾಂತಗೊಳಿಸಿ, ಒತ್ತಡ ಮತ್ತು ಆತಂಕವನ್ನು ದೂರ ಮಾಡುತ್ತದೆ
ಉಗುರುಬೆಚ್ಚಗಿನ ನೀರು ಪಾದಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಸ್ನಾಯುಗಳ ಬಿಗಿತವನ್ನು ಸಡಿಲಗೊಳಿಸಿ, ಇಡೀ ದೇಹಕ್ಕೆ ನಿರಾಳತೆಯನ್ನು ನೀಡುತ್ತದೆ.ದಿನದ ಕೊನೆಯಲ್ಲಿ ಈ 10 ನಿಮಿಷದ ಟ್ರಿಕ್ ಮಾಡುವುದರಿಂದ ಮನಸ್ಸು ಪ್ರಶಾಂತಗೊಂಡು, ರಾತ್ರಿ ನಿಶ್ಚಿಂತೆಯಾಗಿ ಹಾಗೂ ಗಾಢವಾಗಿ ನಿದ್ರೆ ಮಾಡಲು ಸಹಾಯವಾಗುತ್ತದೆ, (ಏಜೆನ್ಸೀಸ್).