Depression : ನಿಮ್ಮ ದೇಹದ ಉಷ್ಣತೆ ನಿಮಗಿರುವ ಖಿನ್ನತೆ ಬಗ್ಗೆ ಹೇಳುತ್ತದೆ ಎಂದು ಎಂದಾದರೂ ಭಾವಿಸಿದ್ದೀರಾ? ಅಲ್ಲದೆ, ನೀವು ಕೆಟ್ಟ ಖಿನ್ನತೆ ಅನುಭವಿಸುತ್ತಿರುವಾಗ ದೇಹದ ಉಷ್ಣತೆ ಏರಾಪೇರಾಗುತ್ತೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಖಿನ್ನತೆ ಮತ್ತು ದೇಹದ ಉಷ್ಣತೆಗೆ ಲಿಂಕ್..!
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸ್ಯಾನ್ ಫ್ರಾನ್ಸಿಸ್ಕೋ (UCSF)ದ ತಜ್ಞರು ಈ ಸಂಶೋಧನೆಯನ್ನು ನಡೆಸಿದರು. 106 ದೇಶಗಳಲ್ಲಿ 20,000 ಜನರನ್ನು ಅಧ್ಯಯನ ಮಾಡಿದ ವಿಜ್ಞಾನಿಗಳು ಖಿನ್ನತೆಯಿಂದ ಬಳಲುತ್ತಿರುವವರ ದೇಹದ ಉಷ್ಣತೆಯು ಸ್ವಲ್ಪ ಹೆಚ್ಚಾಗಿದೆ ಎಂದು ಕಂಡುಕೊಂಡಿದ್ದಾರೆ.
ಇದು ಸಾಮಾನ್ಯ 98.6°F ಗಿಂತ ಸುಮಾರು 1°F ಹೆಚ್ಚಾಗಿದೆ. ವಯಸ್ಸು ಅಥವಾ ಹವಾಮಾನವನ್ನು ಲೆಕ್ಕಿಸದೆ ಈ ವ್ಯತ್ಯಾಸ ಕಂಡುಬಂದಿದೆ. ಇದು ತಾಪಮಾನ ಮತ್ತು ಮಾನಸಿಕ ಆರೋಗ್ಯದ ನಡುವೆ ಜೈವಿಕ ಸಂಬಂಧ ಸೂಚಿಸುತ್ತದೆ ಎಂದು ವಿಜ್ಞಾನಿಗಳು ನಡೆಸಿದ ಅಧ್ಯಯನ ತಿಳಿಸಿದೆ.
ಕ್ಲಿನಿಕಲ್ ಟ್ರಯಲ್ ನಡೆಸಿದ್ದೇಗೆ?
106 ದೇಶಗಳಲ್ಲಿ 20,000 ಜನರನ್ನು ಅಧ್ಯಯನದಲ್ಲಿ ಒಂದು ಮೌಖಿಕ ಥರ್ಮಾಮೀಟರ್, ಮತ್ತು ಇನ್ನೊಂದು ಪ್ರತಿ ನಿಮಿಷಕ್ಕೂ ಚರ್ಮದ ತಾಪಮಾನವನ್ನು ಅಳೆಯುವ ಸ್ಮಾರ್ಟ್ ರಿಂಗ್ ಆಳವಡಿಸಲಾಗಿತ್ತು. ಖಿನ್ನತೆ, ಆಲಸ್ಯ ಮತ್ತು ಶಕ್ತಿಯ ಕೊರತೆಯನ್ನು ಅನುಭವಿಸುವ ಜನರು ಹಗಲಿನಲ್ಲಿ ಹೆಚ್ಚಿನ ದೇಹದ ಉಷ್ಣತೆಯನ್ನು ಹೊಂದಿರುತ್ತಾರೆ ಎಂದು ದಾಖಲಿಸಲಾಗಿದೆ. ರಾತ್ರಿಯಲ್ಲಿ ಅವರ ದೇಹದ ಉಷ್ಣತೆಯು ಹೆಚ್ಚು ಕಡಿಮೆಯಾಗುವುದಿಲ್ಲ ಎಂದು ಕಂಡುಕೊಂಡಿದ್ದಾರೆ.
ವಿಜ್ಞಾನಿಗಳು ಹೇಳೊದೇನು?
ದೇಹದ ಉಷ್ಣತೆಯಲ್ಲಿ ಸ್ವಲ್ಪ ಹೆಚ್ಚಳವು ಖಿನ್ನತೆಯ ಮುಂಚಿನ ಎಚ್ಚರಿಕೆಯ ಸಂಕೇತವಾಗಿರಬಹುದು. ನಮ್ಮ ದೇಹದ 'ಆಂತರಿಕ ಗಡಿಯಾರ' (ಸರ್ಕಾಡಿಯನ್ ರಿದಮ್) ನಮ್ಮ ನಿದ್ರೆ, ಹಾರ್ಮೋನುಗಳು ಮತ್ತು ಮನಸ್ಥಿತಿಯನ್ನು ನಿಯಂತ್ರಿಸಲು ತಾಪಮಾನ ಬದಲಾವಣೆಗಳನ್ನು ಅವಲಂಬಿಸಿದೆ. ಆ ತಾಪಮಾನದಲ್ಲಿನ ಸಣ್ಣ ವ್ಯತ್ಯಾಸವೂ ಸಹ ದೇಹದ ಸಮತೋಲನವನ್ನು ಅಡ್ಡಿಪಡಿಸುತ್ತದೆ.
ಉಷ್ಣತೆಯಿಂದ ತಪ್ಪಿಸಿಕೊಳ್ಳೊದೇಗೆ?
ಕೆಲವು ಅಧ್ಯಯನಗಳು ಶಾಖಕ್ಕೆ ನಿಯಂತ್ರಿತವಾಗಿ ಒಡ್ಡಿಕೊಳ್ಳುವುದರಿಂದ (ದೇಹಕ್ಕೆ ಶಾಖವನ್ನು ಅನ್ವಯಿಸುವುದರಿಂದ) ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತವೆ. ಬಿಸಿ ಸ್ನಾನ ಮತ್ತು ಸೌನಾಗಳು ಸಕಾರಾತ್ಮಕ ಫಲಿತಾಂಶಗಳನ್ನು ತೋರಿಸಿವೆ. 'ಅತಿ ತಂಪಾಗಿಸುವ' ಪರಿಣಾಮ... ನಿಮಗೆ ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಹೊಂದಿಸುತ್ತದೆ. ಒಂದು ಸಣ್ಣ ಪ್ರಯೋಗದಲ್ಲಿ, ಶಾಖ ಚಿಕಿತ್ಸೆಯನ್ನು ಪಡೆದ 12 ಜನರಲ್ಲಿ 11 ಜನರು ಖಿನ್ನತೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡರು.(ಏಜೆನ್ಸೀಸ್)