ಲೈಫ್‌ಸ್ಟೈಲ್

ಪಿತ್ತದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಮನೆಮದ್ದು ಮಾಡಿ, ಬೇಗನೆ ಗುಣಮುಖರಾಗುತ್ತೀರಿ! |Home remidies

Home remidies: ಇಂದಿನ ಯುವಜನರಲ್ಲಿ ಎತೇಚ್ಚವಾಗಿ ಕಾಡುವಂತಹ ರೋಗಗಳಲ್ಲಿ ಪಿತ್ತವು ಕೂಡ ಒಂದು. ಈ ಸಮಸ್ಯೆಯು ಆಹಾರದ ಅಜೀರ್ಣ, ಎದೆಯುರಿ, ತಲೆನೋವು, ಮತ್ತು ಕೆಲವೊಮ್ಮೆ ಜ್ವರದಂತಹ ಲಕ್ಷಣಗಳನ್ನು ಉಂಟುಮಾಡುತ್ತವೆ. ಈ ರೀತಿ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋದರೂ ಕೆಲವೊಮ್ಮೆ ವಾಸಿಯಾಗುವುದಿಲ್ಲ. ಹಾಗಾಗಿ ಈ ರೋಗವನ್ನು ಶಮನಗೊಳಿಸಲು ಈ ಮನೆಮದ್ದುಗಳನ್ನು ಬಳಸಿ. ನಿಮ್ಮ ದೇಹದಲ್ಲಿ ಪಿತ್ತ ಕಡಿಮೆ ಆಗಲು ಸಹಾಯ ಮಾಡುತ್ತದೆ.

ನಿಂಬೆ ಮತ್ತು ಜೇನುತುಪ್ಪ

ನಿಂಬೆ ಹಣ್ಣು ಪಿತ್ತವನ್ನು ಕಡಿಮೆಮಾಡುವ ಗುಣವನ್ನು ಹೊಂದಿದೆ. ಬೆಳಿಗ್ಗೆ ಎದ್ದ ಕೂಡಲೇ, ಒಂದು ಲೋಟ ಬೆಚ್ಚಗಿನ ನೀರಿಗೆ ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿ, ಒಂದು ಚಮಚ ಜೇನುತುಪ್ಪ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ದೇಹದಲ್ಲಿರುವ ಟಾಕ್ಸಿನ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗೇಯೇ ನಿಂಬೆಯಲ್ಲಿರುವ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಯಕೃತ್ತಿನ ಕಾರ್ಯವನ್ನು ಬೆಂಬಲಿಸುವುದರ ಜೊತೆಗೆ ಪಿತ್ತದ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಶುಂಠಿ ಚಹ

ಪಿತ್ತವನ್ನು ಕಡಿಮೆ ಮಾಡಲು ಶುಂಠಿ ಚಹ ಒಂದು ಒಳ್ಳೆಯ ಸಾಧನ. ಇದು ಉರಿಯೂತ ನಿವಾರಕ ಮತ್ತು ಜೀರ್ಣಕಾರಕ ಗುಣಗಳನ್ನು ಹೊಂದಿದೆ. ಒಂದು ಕಪ್​ ನೀರಿಗೆ ಚಿಕ್ಕ ತುಂಡು ಶುಂಠಿಯನ್ನು ತುರಿದು ಹಾಕಿ ಕುದಿಸಿರಿ ನಂತರ ಸ್ವಲ್ಪ ಜೇನುತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯಿರಿ. ಇದು ದೇಹದಲ್ಲಿನ ಶಾಖವನ್ನು ಕಡಿಮೆ ಮಾಡಿ, ಪಿತ್ತದಿಂದ ಉಂಟಾಗುವ ಎದೆಯುರಿಯನ್ನು ಶಮನಗೊಳಿಸುತ್ತದೆ.

ಕೊತ್ತಂಬರಿ ಕಷಾಯ

ಕೊತ್ತಂಬರಿ ಬೀಜಗಳು ತಂಪಾಗಿರುವುದರಿಂದ ಪಿತ್ತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಒಂದು ಚಮಚ ಕೊತ್ತುಂಬರಿ ಬೀಜವನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಬೆಳಗ್ಗೆ ಎದ್ದ ತಕ್ಷಣ ಆ ನೀರನ್ನು ಕುದಿಸಿ, ಸೋಸಿ ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಪಿತ್ತದಿಂದ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡುತ್ತದೆ.

ಮಜ್ಜಿಗೆಯೊಂದಿಗೆ ಜೀರಿಗೆ

ಮಜ್ಜಿಗೆ ಸೇವನೆಯು ಪಿತ್ತವನ್ನು ದೇಹದಿಂದ ನಿರ್ಮೂಲನೆ ಮಾಡಲು ಸಹಾಯ ಮಾಡುತ್ತದೆ. ಒಂದು ಕಪ್​ ಮಜ್ಜಿಗೆಗೆ ಅರ್ಧ ಚಮಚ ಒಣಗಿಸಿದ ಜೀರಿಗೆ ಪುಡಿಯನ್ನು ಸೇರಿಸಿ, ಚಿಟಿಕೆ ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿ ಊಟ ಆದ ಬಳಿಕ ಕುಡಿಯಿರಿ. ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.

ಕರಿಬೇವಿನ ರಸ

ಕರಿಬೇವು ಪಿತ್ತದ ಸಮಸ್ಯೆಗೆ ಅತ್ಯಂತ ಪರಿಣಾಮಕಾರಿಯಾಗಿ ಬೀರುವಂತಹ ಆಹಾರವಾಗಿದೆ. 12-15 ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು, ಸ್ವಲ್ಪ ನೀರಿನೊಂದಿಗೆ ರುಬ್ಬಿ ರಸವನ್ನು ತೆಗೆದುಕೊಂಡು, ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಬೆಳಗ್ಗೆ ಸೇವಿಸಿ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸಿ, ಜೀರ್ಣಕ್ರಿಯೆಯಾಗಲು ಸಹಕಾರ ಮಾಡುತ್ತದೆ. (ಏಜೆನ್ಸೀಸ್​)

ಅಧಿಕ ಪಿತ್ತದ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರ ಬಳಿ ಒಮ್ಮೆ ಹೋಗಿ ಪರೀಕ್ಷಿಸಿಕೊಳ್ಳುವುದು ಉತ್ತಮ.ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ