meat: ಪ್ರಪಂಚದಾದ್ಯಂತ ಮಾಂಸಾಹಾರಿಗಳು ಮಟನ್, ಚಿಕನ್, ಮೀನು ತಿನ್ನಲು ಇಷ್ಟಪಡುತ್ತಾರೆ. ಆದರೆ, ಪುರುಷರು ಹೆಚ್ಚು ಮಾಂಸ ತಿನ್ನುತ್ತಾರೋ ಅಥವಾ ಮಹಿಳೆಯರು ಹೆಚ್ಚು ತಿನ್ನುತ್ತಾರೋ ಎನ್ನುವ ಪ್ರಶ್ನೆ ನಿಮಗೆ ಇದ್ದರೆ ನಾವು ಈ ಕುರಿತಾಗಿ ನಿಮಗೆ ತಿಳಿಸಿಕೊಡಲಿದ್ದೇವೆ.
ಒಂದು ಅಧ್ಯಯನವೊಂದರ ಪ್ರಕಾರ, 23 ದೇಶಗಳ 20,800 ಜನರ ಮೇಲೆ ಯಾರು ಹೆಚ್ಚು ಮಾಂಸ ತಿನ್ನುತ್ತಾರೆ ಎಂಬುದನ್ನು ಕಂಡುಹಿಡಿಯಲು ಒಂದು ಅಧ್ಯಯನವನ್ನು ನಡೆಸಲಾಯಿತು. ಪುರುಷರು ಮಹಿಳೆಯರಿಗಿಂತ ಹೆಚ್ಚು ಮಾಂಸ ತಿನ್ನುತ್ತಾರೆ ಎಂದು ಕಂಡುಬಂದಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಪುರುಷರು ಮತ್ತು ಮಹಿಳೆಯರು ಸಮಾನ ಸ್ಥಾನಮಾನ ಮತ್ತು ಸ್ವಾತಂತ್ರ್ಯವನ್ನು ಹೊಂದಿದ್ದರೂ, ಪುರುಷರು ಹೆಚ್ಚು ಮಾಂಸ ಸೇವಿಸುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಅವರು ಹೆಚ್ಚು ಸಂಸ್ಕರಿಸಿದ ಮಾಂಸವನ್ನು ತಿನ್ನುತ್ತಾರೆ ಎಂದು ಕಂಡುಬಂದಿದೆ ಎಂದು ಖಾಸಗಿವಾಹಿನಿಯೊಂದು ವರದಿ ಮಾಡಿದೆ. ಯಾವ ಸಂಶೋಧನ ಕೇಂದ್ರ ಈ ವರದಿ ಮಾಡಿದೆ ಎನ್ನುವ ಕುರಿತಾಗಿ ಹೆಚ್ಚಿನ ಮಾಹಿತಿ ಇಲ್ಲ.
ಪುರುಷರು ಹೆಚ್ಚು ಮಾಂಸ ತಿನ್ನುವುದೇಕೆ?
ಹಲವು ದೇಶಗಳಲ್ಲಿ ಮಾಂಸ ತಿನ್ನುವುದನ್ನು ಪುರುಷತ್ವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮಾಂಸ ತಿನ್ನುವವರು ಬಲಿಷ್ಠರು ಎಂಬ ನಂಬಿಕೆ ಇದೆ.
ಜೀಮ್ ಹೋಗುವುದು ಬಾಡಿಬಿಲ್ಡಿಂಗ್ ಮಾಡುವುದು ಮಹಿಳೆಯರಿಗಿಂತ ಪುರುಷರ ಸಂಖ್ಯೆ ಹೆಚ್ಚು. ವರ್ಕ್ಔಟ್ ಮಾಡಲು ಶಕ್ತಿ ಅಗತ್ಯವಾಗಿರುವುದರಿಂದ ಮಾಂಸಹಾರ ಹೆಚ್ಚಾಗಿ ಸೇವಿಸುತ್ತಾರೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಪುರುಷರು ತಾವು ತಿನ್ನುವುದರಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ, ಆದ್ದರಿಂದ ಅವರು ಹೆಚ್ಚಾಗಿ ಮಾಂಸವನ್ನು ಆಯ್ಕೆ ಮಾಡುತ್ತಾರೆ.
ವಯಸ್ಸಾದಂತೆ ಮಾಂಸ ಸೇವನೆ ಕಡಿಮೆಯಾಗುತ್ತದೆ, ಆದರೆ ಯುವಜನರು ಮತ್ತು ಮಧ್ಯವಯಸ್ಕ ಜನರು ಹೆಚ್ಚು ಮಾಂಸವನ್ನು ತಿನ್ನುತ್ತಾರೆ.
ಚೀನಾ, ಭಾರತ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ ಪುರುಷರು ಮತ್ತು ಮಹಿಳೆಯರ ನಡುವಿನ ವ್ಯತ್ಯಾಸ ಕಡಿಮೆ. ಯಾರು ಹೆಚ್ಚು ಮಾಂಸ ತಿನ್ನುತ್ತಾರೆ ಎಂಬುದರಲ್ಲಿ ದೊಡ್ಡ ವ್ಯತ್ಯಾಸವಿಲ್ಲ.
ಪ್ರಪಂಚದಾದ್ಯಂತ ಅನೇಕ ಜನರು ಈಗ ತಮ್ಮ ಮಾಂಸ ಸೇವನೆಯನ್ನು ಕಡಿಮೆ ಮಾಡಿ ಸಸ್ಯಾಹಾರಕ್ಕೆ ಬದಲಾಗುತ್ತಿದ್ದಾರೆ. ಆರೋಗ್ಯ, ಪರಿಸರ ಮತ್ತು ಪ್ರಾಣಿ ಕಲ್ಯಾಣದ ಬಗ್ಗೆ ಹೆಚ್ಚಿದ ಜಾಗೃತಿಯಿಂದಾಗಿ ಈ ಬದಲಾವಣೆ ಸಂಭವಿಸುತ್ತಿದೆ.
ಒಟ್ಟಾರೆಯಾಗಿ, ಪುರುಷರು ಮಹಿಳೆಯರಿಗಿಂತ ಹೆಚ್ಚು ಮಾಂಸವನ್ನು ತಿನ್ನುತ್ತಾರೆ ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ, ಭವಿಷ್ಯದಲ್ಲಿ ಈ ವ್ಯತ್ಯಾಸ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ.