ನೀಳವಾದ ಉದ್ದ ಕೂದಲಿಗೆ ಸೀಳು ತುದಿ ಸಮಸ್ಯೆ ಕಾಡೋದು ಯಾಕೆ?.
ಕೂದಲಿನಲ್ಲಿ ತುದಿ ಒಡೆಯಲು ಕಾರಣ ಏನು?.
ಪೌಷ್ಠಿಕಾಂಶ, ವಿಟಮಿನ್ ಎ, ಸಿ, ಇ ಅಂಶವು ಇಲ್ಲದಿರುವುದು ಕಿರುಚೀಲ ದುರ್ಬಲಕ್ಕೆ ಕಾರಣ.
ಮಹಿಳೆಯರಿಗೆ ಕೂದಲೇ ಅಂದ, ನೀಳವಾದ ಉದ್ದ ಕೂದಲು ಇರಬೇಕು ಎನ್ನುವುದು ಪೋಷಕರ ಆಶಯ. ಅದೆಷ್ಟೋ ಹುಡುಗರು ಆ ನೀಳವಾದ ಕೂದಲಿಗೆ ಮನಸೋತಿರುತ್ತಾರೆ. ಇತ್ತೀಚಿನ ದಿನದಲ್ಲಿ ಹಲವರು ಕೂದಲ ತುದಿ ಸೀಳುವ ಸಮಸ್ಯೆಗೆ ಬೇಸತ್ತು ಆಗಾಗ್ಗೆ ಹೇರ್ ಕಟ್ ಮಾಡಿಕೊಂಡು ಶಾರ್ಟ್ ಮಾಡಿಸಿಕೊಂಡು ಬಿಡುತ್ತಾರೆ. ಕೆಲವರಿಗೆ ಹೇರ್ ಡೊನೇಟ್ ಮಾಡಲು ಮುಜುಗರ. ಹಾಗಾದ್ರೆ ಈ ದಿನ ಈ ಕೂದಲಿನ ತುದಿ ಒಡಿಯೋದ್ಯಾಕೆ ಇದ್ರಿಂದ ಮುಕ್ತಿ ಪಡೆದುಕೊಳ್ಳೋದು ಹೇಗೆ ಎನ್ನುವುದನ್ನು ನೋಡೋಣ.
ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ, ಒಂದು ಹೇರ್ಫಾಲ್, ಡ್ಯಾಂಡ್ರಾಫ್ ಮತ್ತು ಕೂದಲು ಸೀಳುಬಿಡುವುದು. ಸಾವಿರಾರು ರೂಪಾಯಿ ಕೊಟ್ಟು ಪಾರ್ಲರ್, ದುಬಾರಿ ಕ್ರೀಂ ಬಳಕೆ ಮಾಡಿಕೊಂಡರೂ, ಬ್ಯೂಟಿ ಪಾರ್ಲರ್ಗೆ ಭೇಟಿ ಕೊಟ್ಟರೂ ಸಹ ಸಮಸ್ಯೆಗೆ ಪರಿಹಾರ ಸಿಕ್ತಿಲ್ಲ. ಹೀಗಾಗಿ ಮನೆಯಲ್ಲಿಯೇ ಕೆಲವು ನೈಸರ್ಗಿಕ ಟಿಪ್ಸ್ ಫಾಲೋ ಮಾಡಿದ್ರೆ ಸಾಕು ಎಲ್ಲ ಸಮಸ್ಯೆ ಮಾಯವಾಗುತ್ತದೆ.
ನಿಮ್ಮ ಕೂದಲು ಸೀಳು ಬಿಡಲು ಕಾರಣ ದೇಹದಲ್ಲಿ ಉಂಟಾದ ಪೌಷ್ಠಿಕಾಂಶ ಕೊರತೆಯೇ ಕಾರಣ. ನಿಮ್ಮಲ್ಲಿ ವಿಟಮಿನ್ ಬಿ 7, ವಿಟಮಿನ್ ಎ, ವಿಟಮಿನ್ ಸಿ ಅಂಶಗಳು ಕಡಿಮೆಯಾಗಿ ಕೂದಲಿನ ಕಿರುಚೀಲಗಳು ದುರ್ಬಲಗೊಳ್ಳುತ್ತದೆ. ಆ ಕಾರಣದಿಂದಾಗಿ ಕೂದಲಿನ ತುದಿ ಒಡೆಯಲು ಆರಂಭವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ನಿತ್ಯ ದೇಹಕ್ಕಾಗಿ ಅನ್ನ ಸಾರು, ಇಡ್ಲಿ, ಚಪಾತಿ ಹೀಗೆ ಈ ಆಹಾರ ಸೇವಿಸುವ ಬದಲು ಕೂದಲಿಗೆ ಅವಶ್ಯಕತೆ ಇರುವ ಪೌಷ್ಠಿಕಾಶ ತಿನ್ನುವುದು ಒಳ್ಳೆಯದು.
ಇದನ್ನೂ ಓದಿ: ನೈಸರ್ಗಿಕವಾಗಿ ಮನೆಯಿಂದ ಹಲ್ಲಿಗಳನ್ನು ಓಡಿಸಬೇಕಾ?; ಈ ಸಸ್ಯಗಳನ್ನು ಮನೆಗೆ ಇಂದೇ ತಂದಿಡಿ..Lizard Repellent
ಕೂದಲು ಒಡೆಯುವಿಕೆಯನ್ನು ತಡೆಗಟ್ಟಲು ನೀವು ಮನೆಯಲ್ಲಿಯೇ ಮದ್ದನ್ನು ಮಾಡಿಕೊಳ್ಳಬಹುದಾಗಿದೆ. ನೈಸರ್ಗಿಕವಾಗಿ ಹೇರ್ ಮಾಸ್ಕ್ ತಯಾರಿಸಿಕೊಳ್ಳುವುದು, ದುಬಾರಿ ಬ್ಯೂಟಿ ಪಾರ್ಲರ್ ಖರ್ಚು ಹಾಗೂ ಕ್ರೀಂಗಳನ್ನು ಹಚ್ಚಿ ಕೂದಲಿನ ಸತ್ವವನ್ನು ಹಾಳು ಮಾಡುವುದನ್ನು ತಪ್ಪಿಸುವುದಲ್ಲದೆ. ಹಣ ಸೇವಿಂಗ್ಗೆ ಸಹಾಯ ಮಾಡುತ್ತದೆ. ಅಲೋವೆರಾ ಜೆಲ್, ಒಂದು ಚಮಚ ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ, ಕ್ಯಾಸ್ಟರ್ ಆಯಿಲ್ ಮತ್ತು ಜೇನುತುಪ್ಪ.
ಈಗ ಒಂದು ಬಟ್ಟಲಿಗೆ ಅಲೋವೆರಾ ಜೆಲ್, ಎಣ್ಣೆ ಮತ್ತು ಜೇನುತಪ್ಪ ಮಿಕ್ಸ್ ಮಾಡಿ. ಇದನ್ನು ಚೆನ್ನಾಗಿ ಕಲಸಿಕೊಳ್ಳಿ. ಈಗ ನಿಮ್ಮ ಕೂದಲನ್ನು ಎರಡು ವಿಭಾಗ ಮಾಡಿ ನೀರು ಸಿಂಪಡಿಸಿ ತುದಿಗೆ ಈ ಮಿಶ್ರಣ ಹಚ್ಚಿ. ಈಗ ಟವಲ್ ಅನ್ನು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ನೆನಸಿ ಕೂದಲಿಗೆ ಕಟ್ಟಿಕೊಳ್ಳಿ. 15 ರಿಂದ 20 ನಿಮಿಷದ ನಂತರ ಕೂದಲನ್ನು ನೀರಿನಿಂದ ತೊಳೆದುಕೊಂಡರೆ, ನಿಮ್ಮ ಸೀಳು ಬಿಟ್ಟ ಕೂದಲಿಗೆ ಮುಕ್ತಿ ನೀಡುತ್ತದೆ, (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.