- ಮಾವಿನ ಹಣ್ಣನ್ನು 30 ನಿಮಿಷ ನೆನಸಿಟ್ಟು ತಿನ್ನುವುದು ಆರೋಗ್ಯಕ್ಕೆ ಸಹಕಾರಿ
- ದೇಹದ ಶಾಖ ನಿಯಂತ್ರಿಸಿ ಮೊಡವೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ತಡೆಯುತ್ತದೆ.
- ಹಣ್ಣಿನ ಮೇಲಿರುವ ಅಪಾಯಕಾರಿ ರಾಸಾಯನಿಕ ಮತ್ತು ಕೀಟನಾಶಕಗಳನ್ನು ಶುಚಿಗೊಳಿಸುತ್ತದೆ.
Soak Mangoes:
ಹಣ್ಣುಗಳ ರಾಜನಾದ ಮಾವಿನ ಸೀಸನ್ ಇದು. ತೋತಾಪುರಿ, ಬಾದಾಮಿ, ಮಲ್ಗೋವಾ, ರಸಪುರಿ ಹೀಗೆ ನಾನಾ ವಿಧದಲ್ಲಿ ಮಾವುಗಳಿವೆ. ಅದರ ಸುವಾಸನೆ ಮೂಗಿನ ಹೊಳ್ಳಿಗೆ ತಟ್ಟುತ್ತಲೇ ಅದನ್ನು ಕೊಂಡು ಅಥವಾ ಮರದಲ್ಲಿರುವುದನ್ನು ಕಿತ್ತು ತಿನ್ನಬಿಡಬೇಕೆನ್ನು ಕಾತುರ ಕಾಡುತ್ತದೆ.
ಮಾವಿನಲ್ಲಿರುವ ವಿಟಮಿನ್ ಎ, ಸಿ ಮತ್ತು ಫೈಬರ್ ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳು ದೇಹದ ತೂಕ ನಿವಾಣೆಗೆ ಹಾಗೂ ಹೃದಯದ ಆರೋಗ್ಯಕ್ಕೆ ಸಹಕಾರಿ. ಜೀರ್ಣಕ್ರಿಯಗೆ ಮತ್ತು ಚರ್ಮದ ಆರೋಗ್ಯಕ್ಕೆ ಸಹಕಾರಿ ಎಂದು ವೈದ್ಯರು ಹೇಳುತ್ತಾರೆ. ಆದರೆ, ಅಸಲಿ ವಿಚಾರ ಎಂದರೆ, ಮಾವನ್ನು ತಿನ್ನುವ ಮೂವತ್ತು ನಿಮಿಷಕ್ಕೂ ಮುನ್ನ ನೀರಿನಲ್ಲಿ ಹಣ್ಣನ್ನು ನೆನೆಸಿ ತಿನ್ನುವುದು ಉತ್ತಮ ಎನ್ನುವುದು ಗ್ಯಾಸ್ಟ್ರೋಎಂಟರಾಲಜಿಸ್ಟ್ ಸಲಹೆ.
ಮಾವಿನ ಹಣ್ಣನ್ನು ನೀರಿನಲ್ಲಿ ನೆನಸಿಟ್ಟು ತಿನ್ನಬೇಕಾಗಿರೋದಾದ್ರು ಯಾಕೆ, ಇಲ್ಲದಿದ್ದರೆ ದೇಹದ ಮೇಲೆ ಬೀರುವ ಪರಿಣಾಮವೇನು ಎನ್ನುವುದು ಈ ಲೇಖನದಲ್ಲಿ ಇದೆ,
ಮಾವಿನ ಹಣ್ಣನ್ನು ನೀರಿನಲ್ಲಿ ನೆನಸಿಡಬೇಕು ಏಕೆ?
ಎಲ್ಲ ಸಸ್ಯಗಳಲ್ಲಿ ಇರುವಂತೆ ಮಾವಿನ ಹಣ್ಣಿನಲ್ಲಿ ಫೈಟಿಕ್ ಆಮ್ಲವಿರುತ್ತದೆ. 'ಇದನ್ನು ವೈಜ್ಞಾನಿಕವಾಗಿ ಆಂಟಿ-ನ್ಯೂಟ್ರಿಯೆಂಟ್' ಎಂದರೆ ಪೋಷಕಾಂಶ ವಿರೋಧಿ ಎಂದು ಕರೆಯಲಾಗುತ್ತದೆ. ಫೈಟಿಕ್ ಆಮ್ಲವು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವಂತಹ ಅಗತ್ಯವಸ್ತುಗಳು ದೇಹ ಹೀರಿಕೊಳ್ಳದನ್ನು ತಪ್ಪಿಸುತ್ತದೆ ಎನ್ನಲಾಗಿದೆ.
ಕಾನ್ಸಾಸ್ ವಿಶ್ವವಿದ್ಯಾಲಯದ ವೈದ್ಯಕೀಯ ಪ್ರೊಫೆಸರ್ ಡಾ. ಪ್ರತೀಕ್ ಶರ್ಮಾ ಅವರ ಪ್ರಕಾರ ಹಣ್ಣನ್ನು ನೆನಸಿಟ್ಟು ತಿನ್ನುವುದರಿಂದ ದೇಹಕ್ಕೆ ಎಲ್ಲ ಪೋಷಕಾಂಶ ಅಂಶಗಳು ದೊರೆಯುತ್ತದೆ ಎಂದು ಹೇಳಿದ್ದಾರೆ.
ಚರ್ಮರೋಗ ನಿಯಂತ್ರಣ
ಮಾವು ದೇಹದಲ್ಲಿ ಶಾಖವನ್ನು ಹೆಚ್ಚಿಸುವ ಗುಣವನ್ನು ನೈಸರ್ಗಿಕವಾಗಿ ಹೊಂದಿದೆ. ಹಣ್ಣನ್ನು ನೆನಸದೆ ಹಾಗೆಯೇ ತಿಂದರೆ ಅದು ದೇಹದ ಆಂತರಿಕ ಉಷ್ಣತೆಯನ್ನು ಹೆಚ್ಚಿಸಿ ಮುಖದ ಮೇಲೆ ಮೊಡವೆ ಮತ್ತು ಚರ್ಮದ ಮೇಲೆ ದದ್ದು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ. ಬಾಯಿಯ ಸುತ್ತ ಗುಳ್ಳೆಗಳು ತುರಿಕೆ ಉಂಟಾಗುತ್ತದೆ. ನೀರಿನಲ್ಲಿ ನೆನಸಿ ತಿನ್ನುವುದರಿಂದ ಹಣ್ಣಿನ ಉಷ್ಣತೆಯು ಕಡಿಮೆಯಾಗಿ, ಅದು ಜೀರ್ಣಕ್ರಿಯೆಗೆ ಪೂರಕವಾಗುತ್ತದೆ.
ಇಂದಿನ ದಿನಗಳಲ್ಲಿ ಮಾವಿನ ಮರಕ್ಕೆ ಮತ್ತು ಹಣ್ಣಿಗೆ ಹತ್ತುವ ಹುಳವನ್ನು ತಡೆಯಲು ಮತ್ತು ಬೇಗನೇ ಹಣ್ಣು ಮಾಡಲು ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್ ಎನ್ನುವ ರಾಸಾಯನಿಕ ಸಿಂಪಡಿಸಲಾಗುರತ್ತದೆ. ಇವುಗಳಲ್ಲಿರುವ ಆರ್ಸೆನಿಕ್ ಮತ್ತು ರಂಜಕ ಅಂಶ ಕೇವಲ ತೊಳೆದರೆ ನಾಶ ವಾಗುವುದಿಲ್ಲ.
ಇವು ನೆನಸಿಟ್ಟು ತಿನ್ನುವುದರಿಂದ ಹಣ್ಣಿನ ಮೇಲೆ ಇರುವ ರಾಸಾಯನಿಕ ಮತ್ತು ಮೇಣದ ಪದರ ಸಂಪೂರ್ಣ ನಾಶವಾಗಿ ಶುಚಿಯಾಗುತ್ತದೆ. ಹಣ್ಣಿನ ತೊಟ್ಟು ಬಳಿ ಇರುವ ಅಂಶವು ಚರ್ಮಕ್ಕೆ ತಗುಲಿದರೆ, ಚರ್ಮಕ್ಕಾಗುವ ಅಪಾಯವನ್ನು ಈ ವಿಧಾನದಿಂದ ತಡೆಗಟ್ಟಬಹುದಾಗಿದೆ.
ಮಾವಿನ ಹಣ್ಣುಗಳ ಕೊಯ್ಲು ನಂತರ ಅದರಲ್ಲಿರುವ ತೇವಾಂಶವನ್ನು ಕಳೆದುಕೊಂಡಿರುತ್ತದೆ, ಹೀಗಾಗಿ ಹಣ್ಣನ್ನು ನೆನಸಿ ತಿನ್ನುವುದರಿಂದ ಹಣ್ಣು ಹೈಡ್ರೇಟ್ ಆಗಿರುತ್ತದೆ. ಇದು ಹೆಚ್ಚು ರಸಭರಿತವಾಗುತ್ತದೆ ಮತ್ತು ಸಿಪ್ಪೆ ತೆಗೆಯುವುದು ಸುಲಭವಾಗುತ್ತದೆ, (ಏಜೆನ್ಸೀಸ್).