ಲೈಫ್‌ಸ್ಟೈಲ್

ನೀವು ಜೀನ್ಸ್​ ಧರಿಸಿ ಮಲಗುತ್ತೀರಾ? ಮಲಗಿದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ... Sleeping With Jeans

Sleeping With Jeans: ಜೀನ್ಸ್​ ಉಡುಗೆ ಇಂದು​ ನಮ್ಮ ಫ್ಯಾಶನ್‌ನ ಒಂದು ಭಾಗವಾಗಿದೆ. ಒಳ್ಳೆಯ ಲುಕ್​ ನೀಡುತ್ತೆ ಎಂಬ ಕಾರಣಕ್ಕೆ ಜೀನ್ಸ್​ ಧರಿಸುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರು ರಾತ್ರಿ ಸಮಯದಲ್ಲಿ ಜೀನ್ಸ್​ ಹಾಕಿಕೊಂಡೆ ಮಲಗುತ್ತಾರೆ. ಆದರೆ, ಆ ರೀತಿ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಏಕೆಂದರೆ, ಜೀನ್ಸ್ ಸಾಮಾನ್ಯವಾಗಿ ಬಿಗಿಯಾಗಿರುತ್ತದೆ. ಸರಿಯಾಗಿ ಉಸಿರಾಡಲು ಸಾಧ್ಯವಾಗದ ಡೆನಿಮ್ ಬಟ್ಟೆಯಿಂದ ಕೂಡಿರುತ್ತದೆ. ಹೀಗಾಗಿ ಅಂತಹ ಬಟ್ಟೆಗಳನ್ನು ಧರಿಸಿ ಮಲಗುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಜೀನ್ಸ್​ ಬೆವರನ್ನು ಹೀರಿಕೊಳ್ಳುವುದಿಲ್ಲ. ಇದರಿಂದ ತ್ವಚೆಯಲ್ಲಿ ಹೆಚ್ಚು ತೇವಾಂಶ ಉಂಟಾಗಿ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಇದರ ಪರಿಣಾಮವಾಗಿ ತುರಿಕೆ, ದದ್ದುಗಳು ಮತ್ತು ಸೋಂಕುಗಳು ಬರುವ ಅಪಾಯವಿದೆ.

ಇನ್ನು ಜೀನ್ಸ್ ದೇಹವನ್ನು ಬೆಚ್ಚಗಿಡುತ್ತದೆ ಮತ್ತು ನಿದ್ರೆಯನ್ನು ತಡೆಯುತ್ತದೆ. ಬಿಗಿಯಾದ ಜೀನ್ಸ್ ಧರಿಸುವುದರಿಂದ ರಕ್ತ ಪರಿಚಲನೆಯನ್ನು ನಿರ್ಬಂಧಿಸುತ್ತದೆ. ಇದರಿಂದಾಗಿ ಹಲವು ಅಂಗಗಳಿಗೆ ಸರಿಯಾಗಿ ರಕ್ತ ಪೂರೈಕೆಯಾಗುವುದಿಲ್ಲ. ಜೀನ್ಸ್ ಹೊಟ್ಟೆಯ ಮೇಲೂ ಒತ್ತಡ ಹೇರುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳು ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಜೀನ್ಸ್ ಸೊಂಟ, ತೊಡೆಗಳು ಮತ್ತು ಪೃಷ್ಠದ ಮೇಲೆ ಗಟ್ಟಿಯಾಗಿ ಹೊಂದಿಕೊಳ್ಳುತ್ತದೆ. ಇದು ನೋವನ್ನು ಉಂಟುಮಾಡಬಹುದು. ಜೀನ್ಸ್ ಗರ್ಭಾಶಯ ಮತ್ತು ಹೊಟ್ಟೆಯ ಮೇಲೆ ಒತ್ತಡವನ್ನು ಬೀರುತ್ತದೆ. ಇದರಿಂದ ಮುಟ್ಟಿನ ಸಮಯದಲ್ಲಿ ಹೆಚ್ಚು ನೋವು ಉಂಟಾಗುತ್ತದೆ.

ಮಲಗುವಾಗ ಯಾವ ಉಡುಪನ್ನು ಧರಿಸಬೇಕು?

ಹತ್ತಿ ಬಟ್ಟೆಯು ಚರ್ಮಕ್ಕೆ ಮೃದುವಾಗಿರುತ್ತದೆ ಮತ್ತು ಬೆವರನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ರೇಷ್ಮೆ ಬಟ್ಟೆಗಳು ಚರ್ಮವನ್ನು ತಂಪಾಗಿರಿಸುತ್ತವೆ ಮತ್ತು ಮೃದುವಾಗಿರುತ್ತವೆ. ಹೀಗಾಗಿ ಇಂತಹ ಬಟ್ಟೆಗಳನ್ನು ಧರಿಸಿ. ಆದಷ್ಟೂ ಬಿಗಿಯಾದ ಬಟ್ಟೆಗಳಿಗಿಂತ ಸಡಿಲವಾದ ಬಟ್ಟೆಗಳನ್ನು ಧರಿಸಿ. ವಿಶೇಷವಾಗಿ ಗರ್ಭಿಣಿಯರು ಮತ್ತು ಮುಟ್ಟಿನ ಮಹಿಳೆಯರು ಜೀನ್ಸ್ ಬದಲಿಗೆ ಹತ್ತಿಯಂತಹ ಸೂಕ್ಷ್ಮವಾದ ಬಟ್ಟೆಯಿಂದ ಮಾಡಿದ ಸಡಿಲವಾದ ಬಟ್ಟೆಗಳನ್ನು ಧರಿಸಬೇಕು.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. (ಏಜೆನ್ಸೀಸ್)