ಲೈಫ್‌ಸ್ಟೈಲ್

ಮಕ್ಕಳಿಗೆ ಫೋನ್ ತೋರಿಸಿ ಊಟ ಮಾಡಿಸ್ತೀರಾ? ಇರಲಿ ಎಚ್ಚರ.. Health

Webdesk - Savina Naik

Health: ಮಕ್ಕಳು  ಊಟ ಮಾಡುತ್ತಿಲ್ಲವೆಂದು ಫೋನ್ ತೋರಿಸಿ ಅನ್ನ ತಿನ್ನಿಸುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಬರುವುದು ಖಚಿತ ಎನ್ನುತ್ತಾರೆ ವೈದ್ಯಕೀಯ ತಜ್ಞರು. ನಾವು ಇಂದು ಈ ಕುರಿತಾಗಿ ತಿಳಿದು ಕೊಳ್ಳೋಣ...

ಫೋನ್ ನೋಡುತ್ತಲೇ ಮಕ್ಕಳು ಬಾಯಿಗೆ ಆಹಾರ ಹಾಕಿಕೊಂಡು ಜಗಿಯದೆ ನುಂಗುತ್ತಾರೆ. ಇದು ಚಯಾಪಚಯವನ್ನು ದುರ್ಬಲಗೊಳಿಸುತ್ತದೆ. ಇದಲ್ಲದೇ ಹಲವು ರೋಗಗಳು ಬರುವ ಅಪಾಯವಿದೆ ಎನ್ನುತ್ತಾರೆ ತಜ್ಞರು.

ಮಕ್ಕಳು ಫೋನ್ ನೋಡುವಾಗ ಅತಿಯಾಗಿ ತಿನ್ನುತ್ತಾರೆ ಅಥವಾ ಕಡಿಮೆ ತಿನ್ನುತ್ತಾರೆ, ಇದು ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅವರು ಹೇಳುತ್ತಾರೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ ಎಂದು ತಿಳಿದುಬಂದಿದೆ.

ಫೋನ್ ನೋಡುವುದರಿಂದ ಮಕ್ಕಳ ಕಣ್ಣು ಹಾಳಾಗುವ ಅಪಾಯವೂ ಇದೆ. ಮಕ್ಕಳ ಕಣ್ಣುಗಳು ದಣಿದಿರಬಹುದು, ಇದು ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಬಹುದು...

ಊಟ ಮಾಡುವಾಗ ಫೋನ್ ನೋಡುವುದು ಮಕ್ಕಳ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ಫೋನ್ ನೋಡುತ್ತಾ ಮಗು ಸರಿಯಾಗಿ ಊಟ ಮಾಡದೇ ಇರುವುದೇ ಇದಕ್ಕೆ ಕಾರಣ. ಈ ಕಾರಣದಿಂದಾಗಿ, ದೇಹವು ಪೋಷಣೆಯನ್ನು ಪಡೆಯುವುದಿಲ್ಲ. ಹಾರ್ಮೋನ್ ಮಟ್ಟವು ಕಡಿಮೆಯಾಗಬಹುದು. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಫೋನ್ ನೋಡುವುದರಿಂದ ಮಗುವಿಗೆ ತಿನ್ನಲು ಮನಸ್ಸಾಗುವುದಿಲ್ಲ ಮತ್ತು ದೇಹವು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತದೆ ಎಂದು ಹೇಳಲಾಗುತ್ತದೆ.