Halasina Hannina Enamanaka: ಹಲಸಿನ ಹಣ್ಣಿನ ಸೀಸನ್‌ನಲ್ಲಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ, ಸಾಂಪ್ರದಾಯಿಕ ಸಿಹಿ ತಿಂಡಿ ಹಲಸಿನ ಹಣ್ಣಿನ ಎಣಮಣಕ (Halasina Hannina Enamanaka) ತಿನ್ನಲು ಬಹಳ ರುಚಿಯಾಗಿರುತ್ತದೆ. ಆದಾಗ್ಯೂ, ಈ ಸೀಸನ್‌ನಲ್ಲಿ ಈ ಹಣ್ಣು ಜನಪ್ರಿಯವಾಗಿರುವುದರಿಂದ ಮನೆಯಲ್ಲೇ ಸುಲಭವಾಗಿ ಈ ರೆಸಿಪಿಯನ್ನು ಮಾಡಬಹುದು. ಹಾಗಿದ್ದರೆ, ಇನ್ಯಾಕೆ ತಡ ಈಗ್ಲೇ ಮಾಡಿ ರುಚಿ ನೋಡಿ..
ಬೇಕಾಗುವ ಸಾಮಗ್ರಿಗಳು
* 15-20 ಹಲಸಿನ ಹಣ್ಣಿನ ತೊಳೆಗಳು
ಮಾಡುವ ವಿಧಾನ
ಮೊದಲು ನೆನೆಸಿಟ್ಟ ಅಕ್ಕಿಯನ್ನು ನೀರು ಸೋಸಿ ಮಿಕ್ಸಿ ಜಾರಿಗೆ ಹಾಕಿ. ಅದರ ಜೊತೆಗೆ ಹಲಸಿನ ಹಣ್ಣಿನ ತೊಳೆಗಳು, ಬೆಲ್ಲ ಮತ್ತು ತೆಂಗಿನ ತುರಿಯನ್ನು ಸೇರಿಸಿ ರುಬ್ಬಿಕೊಳ್ಳಿ. ಈ ಮಿಶ್ರಣವು ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ.
ನಂತರ ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ವರ್ಗಾಯಿಸಿ, ಅದಕ್ಕೆ ಏಲಕ್ಕಿ ಪುಡಿ ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. (ಹಿಟ್ಟು ಹೆಚ್ಚು ತೆಳುವಾದರೆ 1-2 ಚಮಚ ಚಿರೋಟಿ ರವೆ ಸೇರಿಸಬಹುದು).
ಬಾಂಡ್ಲಿಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಕೈಯಿಂದ ಅಥವಾ ಚಮಚದ ಸಹಾಯದಿಂದ ಸಣ್ಣ ಸಣ್ಣ ಉಂಡೆಗಳಾಗಿ ಎಣ್ಣೆಗೆ ಬಿಡಿ. ಮಧ್ಯಮ ಉರಿಯಲ್ಲಿ ಎಣಮಣಕಗಳು ಕಂದು ಬಣ್ಣಕ್ಕೆ ಬರುವವರೆಗೆ ತಿರುಗಿಸುತ್ತಾ ಬೇಯಿಸಿ. ಬಿಸಿ ಇರುವಾಗಲೇ ಸೇವಿಸಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.