ಲೈಫ್‌ಸ್ಟೈಲ್

ಸವಿ ಸವಿ ಸಂಕ್ರಾಂತಿ

ನಾಳೆಯೇ ಸಂಕ್ರಾಂತಿ ಹಬ್ಬ. ಬಹುತೇಕ ಮನೆಗಳಲ್ಲಿ ಇವತ್ತಿನಿಂದಲೇ ಸಿಹಿ ತಿನಿಸುಗಳ ತಯಾರಿ ಭರ್ಜರಿಯಿಂದ ಸಾಗಿದೆ. ಸಾಮಾನ್ಯವಾಗಿ ಸಿಹಿ ಮತ್ತು ಖಾರದ ಪೊಂಗಲ್ ಎಲ್ಲರಿಗೂ ತಿಳಿದದ್ದೇ. ಅವುಗಳನ್ನು ಹೊರತುಪಡಿಸಿ ಸಂಕ್ರಾಂತಿ ದಿನದಂದು ವಿವಿಧೆಡೆ ಮಾಡುವ ತಿನಿಸುಗಳನ್ನು ಹೇಗೆ ಮಾಡುವುದು ಎಂದು ನೋಡೋಣ

ನವಣೆ ಪೊಂಗಲ್

ಬೇಕಾಗುವ ಸಾಮಗ್ರಿಗಳು: ್ಣೆನೆಸಿದ ನವಣೆ-1 ಕಪ್ಣ್​ಹೆಸರು ಬೇಳೆ- ಅರ್ಧ ಕಪ್ ್ಣೋಡಂಬಿ ಮತ್ತು ದ್ರಾಕ್ಷಿ-100 ಗ್ರಾಂ ್ಣಣ ಕೊಬ್ಬರಿ ತುರಿ-ಕಾಲು ಕಪ್ ್ಣಚ್ಚ ಕರ್ಪರ-1 ಚಿಟಿಕೆ . ತುಪ್ಪ -ಅರ್ಧ ಕಪ್ ್ಣಾಕಾಯಿ ಪುಡಿ-1 ಚಿಟಿಕೆ ್ಣವಂಗ-5, ಪುಡಿ ್ಣೆಲ್ಲ-ಒಂದೂವರೆ ಕಪ್ ್ಣಾಲು-4 ಕಪ್ ್ಣಲಕ್ಕಿ ಪುಡಿ-ಸ್ವಲ್ಪ

ಮಾಡುವುದು ಹೀಗೆ: ಗೋಡಂಬಿ, ದ್ರಾಕ್ಷಿ ತುಪ್ಪದಲ್ಲಿ ಹುರಿದುಕೊಳ್ಳಿ. ಸ್ವಲ್ಪ ತುಪ್ಪ ಬಿಸಿ ಮಾಡಿ ನವಣೆ ಮತ್ತು ಹೆಸರು ಬೇಳೆ ಹಾಕಿ 2-3 ನಿಮಿಷ ಹುರಿಯಿರಿ. ಇದಕ್ಕೆ ಹಾಲು, ಜಾಕಾಯಿ ಪುಡಿ, ಪಚ್ಚ ಕರ್ಪರ, ಲವಂಗ ಸೇರಿಸಿ ಕುಕ್ಕರ್​ನಲ್ಲಿ ಮೂರು ಸೀಟಿ ಕೂಗಿಸಿ. ಈ ಮಿಶ್ರಣ ತಣ್ಣಗಾದ ನಂತರ ಬೆಲ್ಲ, ಏಲಕ್ಕಿ ಪುಡಿ, ಒಣ ಕೊಬ್ಬರಿ ಮತ್ತು ಮಿಕ್ಕ ತುಪ್ಪ ಸೇರಿಸಿ ಐದು ನಿಮಿಷ ಬೇಯಿಸಿ. ಕೊನೆಗೆ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ.