ಲೈಫ್‌ಸ್ಟೈಲ್

ಸವಿ ಸವಿ ಸಂಕ್ರಾಂತಿ

ನಾಳೆಯೇ ಸಂಕ್ರಾಂತಿ ಹಬ್ಬ. ಬಹುತೇಕ ಮನೆಗಳಲ್ಲಿ ಇವತ್ತಿನಿಂದಲೇ ಸಿಹಿ ತಿನಿಸುಗಳ ತಯಾರಿ ಭರ್ಜರಿಯಿಂದ ಸಾಗಿದೆ. ಸಾಮಾನ್ಯವಾಗಿ ಸಿಹಿ ಮತ್ತು ಖಾರದ ಪೊಂಗಲ್ ಎಲ್ಲರಿಗೂ ತಿಳಿದದ್ದೇ. ಅವುಗಳನ್ನು ಹೊರತುಪಡಿಸಿ ಸಂಕ್ರಾಂತಿ ದಿನದಂದು ವಿವಿಧೆಡೆ ಮಾಡುವ ತಿನಿಸುಗಳನ್ನು ಹೇಗೆ ಮಾಡುವುದು ಎಂದು ನೋಡೋಣ

ಕುಂಬಳಕಾಯಿ ಹಲ್ವಾ

ಬೇಕಾಗುವ ಸಾಮಗ್ರಿಗಳು: ್ಣೋಡಂಬಿ- ನಾಲ್ಕೈದು ್ಣುಂಬಳಕಾಯಿ 2 ಕೆಜಿ ್ಣಕ್ಕರೆ ಅರ್ಧ ಕೆಜಿ ್ಣುಪ್ಪ ಅರ್ಧ ಕೆಜಿ ್ಣೋವಾ ಸ್ವಲ್ಪ ್ಣ್ರಾಕ್ಷಿ- 8-10 ್ಣಲಕ್ಕಿ ಪುಡಿ - ಒಂದು ಚಮಚ ್ಣೇಸರಿ ಬಣ್ಣ- ಚಿಟಿಕೆ

ಮಾಡುವ ವಿಧಾನ: ಕುಂಬಳಕಾಯಿಯ ಸಿಪ್ಪೆ ತೆಗೆಯಿರಿ. ನಂತರ ಅದರ ತಿರುಳು ಹಾಗೂ ಬೀಜವನ್ನೂ ತೆಗೆದು ಮಿಕ್ಕಿದ್ದನ್ನು ತುರಿದು ಬೇಯಿಸಿಕೊಳ್ಳಬೇಕು. ಅದರ ರಸ ಜಾಸ್ತಿ ಇದ್ದರೆ ಅದನ್ನು ಹಿಂಡಿ ತೆಗೆಯಬೇಕು. ಬೆಂದ ನಂತರ ತಿರುಳಿಗೆ ಸಕ್ಕರೆ ಹಾಕಿ ಸಣ್ಣ ಉರಿಯಲ್ಲಿ ಒಲೆಯ ಮೇಲಿಟ್ಟು ತುಪ್ಪ ಸೇರಿಸಿ ಕಲಕುತ್ತಿರಿ. ಪಾತ್ರೆಗೆ ಅಂಟದ ಹಾಗೆ ಹದ ಬಂದಾಗ ಏಲಕ್ಕಿ ಪುಡಿ ಕೇಸರಿ ಬಣ್ಣ ಹಾಕಿ ಕಲಕಿ ಇಳಿಸಿಬಿಡಿ. ಇಳಿಸುವ ಮೊದಲು ಖೋವಾ ಪುಡಿ ಮಾಡಿ ಸೇರಿಸಿ. ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಹಾಕಿದರೆ ಹೆಚ್ಚು ರುಚಿ.