Food safety rules India  
ಲೈಫ್‌ಸ್ಟೈಲ್

ಹಳೆಯ, ತುಕ್ಕು ಹಿಡಿದ ಚಾಕು ಬಳಸಿದರೆ ಬೀಳುತ್ತೆ ಕೇಸ್: ಹೋಟೆಲ್, ರೆಸ್ಟೋರೆಂಟ್‌ಗಳಿಗೆ FSSAI ಎಚ್ಚರಿಕೆ!..Food safety rules India

ಪ್ರಮುಖ ಮುಖ್ಯಾಂಶಗಳು

  • ತುಕ್ಕು ಹಿಡಿದ, ಒಡೆದ ಚಾಕು ಮತ್ತು ಬ್ಲೇಡ್‌ಗಳನ್ನು ಬಳಕೆ ಮಾಡದಿರಲು ಸೂಚನೆ ಕೊಟ್ಟ FSSAI
  • ತುಕ್ಕು ಹಿಡಿದ ಚಾಕುಗಳಲ್ಲಿರಲಿವೆ ಅಪಾಯಕಾರಿ ಬ್ಯಾಕ್ಟೀರಿಯಾಗಳು
  • ನಿಯಮ ಉಲ್ಲಂಘಿಸಿ ಕಳಪೆ ಗುಣಮಟ್ಟದ ಉಪಕರಣ ಬಳಕೆ ಮಾಡುವವರ ವಿರುದ್ಧ ಬೀಳುತ್ತೆ ಕೇಸ್
Food safety rules India : ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ  ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ  (FSSAI) ಹೊಸದಾಗಿ ನಿಯಮವೊಂದನ್ನು ಪ್ರಕಟಿಸಿದೆ. ದೇಶದಲ್ಲಿರುವ ಎಲ್ಲ ರೆಸ್ಟೋರೆಂಟ್​, ಹೋಟೆಲ್​​, ಕೆಫೆ,  ಆಹಾರ ಸಂಚಾರಿ ವಾಹನಗಳು ಯಾವುದೇ ಕಾರಣಕ್ಕು ತುಕ್ಕು ಹಿಡಿದ ಬ್ಲೇಡ್, ಚಾಕು  ಬಳಕೆ ಮಾಡುವಂತಿಲ್ಲ ಎಂದು ಖಡಕ್​ ವಾರ್ನಿಂಗ್​ ಕೊಟ್ಟಿದೆ. 
ಗುಣಮಟ್ಟ ನಿಯತಂತ್ರಣ ಕಾಯ್ದೆ ಷೆಡ್ಯೂಲ್​ 4ರ ಪ್ರಕಾರ, ಆಹಾರ ಸಂಪರ್ಕಕಕ್ಕೆ ಬರುವ ಎಲ್ಲ ಉಪಕರಣಗಳು ಫುಡ್​​ ಗ್ರೇಡ್​ ಆಗಿರಬೇಕು. ವಿಷರಹಿತವಾಗಿರಬೇಕು. ಆದರೆ, ಹೋಟೆಲ್​, ರೆಸ್ಟೋರೆಂಟ್​ಗಳಳ್ಲಿ ಇಂದಿಗೂ ಸಹ ಹಳೆಯ ಚಾಕು ಪರಿಕರವನ್ನು ಬಳಕೆ ಮಾಡಲಾಗುತ್ತಿದೆ, ಇಂದಿನಿಂದ ಬಿರುಕು ಬಿಟ್ಟ ಬ್ಲೇಡ್​, ತುಕ್ಕು ಹಿಡಿದ ಚಾಕು ಬಳಕೆ ಮಾಡಲೇ ಕೂಡದು. ಹಳೆಯದನ್ನು ವಿಲೇವಾರಿ ಮಾಡಿ  ಹೊಸದನ್ನು ಕೊಂಡುಕೊಳ್ಳಿ  ಎಂದು ಎಚ್ಚರಿಕೆ ಕೊಟ್ಟಿದೆ. 

ತುಕ್ಕಿನಿಂದ ಆರೋಗ್ಯದ ಮೇಲಾಗುವ ಪರಿಣಾಮ ವೇನು?

ತುಕ್ಕು ಹಿಡಿದ ಚಾಕು ಬಳಕೆ ಮಾಡುವುದರಿಂದ ಗಂಭೀರ ಸಮಸ್ಯೆಗೆ ನಾಂದಿ ಹಾಡುತ್ತದೆ.ತುಕ್ಕು ಹಿಡಿದ ಮೇಲ್ಮೈಯಲ್ಲಿರುವ ಸಣ್ಣ ರಂಧ್ರಗಳಲ್ಲಿ ತೇವಾಂಶ ಮತ್ತು ಆಹಾರದ ಕಣಗಳು ಸಿಕ್ಕಿಹಾಕಿಕೊಳ್ಳುತ್ತವೆ.  ಇದರಲ್ಲಿರುವ ಸಾಲ್ಮೊನೆಲ್ಲಾ  ಹಾಗೂ ಇ ಕೋಲೈನಂತಹ ಬ್ಯಾಕ್ಟೀರಿಯಾಗಳು ಬೆಳಯುತ್ತದೆ. ಆಗ ಚಾಕುವನ್ನು ಎಷ್ಟೇ ಸ್ವಚ್ಛಗೊಳಿಸಿದರು ಬ್ಯಾಕ್ಟೀರಿಯಾ ದೂರ ಹೋಗೋದಿಲ್ಲ,
ಇವು ಹೊಟ್ಟೆಗೆ ಸೇರಿ  ಸೋಂಕಿನ ಕಾಯಿಲೆ, ಫುಡ್​ ಪಾಯಿಸನ್​,ಮ ವಾಂತಿ -ಬೇಧಿ ಸೇರಿದಂತೆ ನಾನಾ ಕಾಯಿಲೆಗಳು ವಕ್ಕರಿಸಿಕೊಳ್ಳುತ್ತದೆ.ಒಡೆದ ಚಾಕುವಿನ ಸಣ್ಣ ಲೋಹದ ಚೂರುಗಳು ಅಥವಾ ತುಕ್ಕಿನ ಕಣಗಳು ಆಹಾರದಲ್ಲಿ ಸೇರಿಕೊಂಡು, ಗಂಟಲು ಅಥವಾ ಹಲ್ಲುಗಳಿಗೆ ಹಾನಿಯುಂಟು ಮಾಡುತ್ತದೆ.

ಯಾವ ನಿಯಮ ಪಾಲಿಸ್ಬೇಕು?

ಆಹಾರ ಉದ್ಯಮಗಳು ಇನ್ನು ಮುಂದೆ ಚಾಕುಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ತುಕ್ಕು ಹಿಡಿದ ಅಥವಾ ಮುರಿದ ಚಾಕುವನ್ನು ಬಿಸಾಡಬೇಕು. ಫುಡ್​ಗ್ರೇಡ್ ಚಾಕು ಬಳಕೆ ಮಾಡ್ಬೇಕು. ಸ್ಯಾನಿಟೈಸ್ ಮಾಡುವುದು.ಉಪಕರಣಗಳನ್ನು ಶುಷ್ಕ ಮತ್ತು ಸ್ವಚ್ಛವಾದ ಜಾಗದಲ್ಲಿ ಸಂಗ್ರಹಿಸುವುದು.ಶುಚಿತ್ವದ ಬಗ್ಗೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಹೇಳಿದೆ.

ಕಾನೂನು ಕ್ರಮ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸೂಚನೆ ಕೊಟ್ಟ ನಂತರವೂ ನಿಯಮ ಉಲ್ಲಂಘಿಸಿದರೆ, . ನಿಯಮಗಳನ್ನು ಉಲ್ಲಂಘಿಸಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ದಂಡ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ, (ಏಜೆನ್ಸೀಸ್).