Rent house (ಸಾಂದರ್ಭಿಕ ಚಿತ್ರ)
Rent house: ಹೊಸ ಪರಿಚಯವಿಲ್ಲದ ನಗರಗಳಿಗೆ ಸ್ಥಳಾಂತರಗೊಳ್ಳುವಾಗ ಮನೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದಾಗ್ಯೂ, ಮನೆ ಖರೀದಿಸುವುದು ಎಲ್ಲರಿಗೂ ಸುಲಭದ ಮಾತೇನಲ್ಲ. ಹಾಗಾಗಿ ಬಾಡಿಗೆ ಮನೆ ಹುಡುಕಾಟ ನಡೆಸಲು ಪ್ರಾರಂಭಿಸುತ್ತಾರೆ. ಆದರೆ, ಪರಿಚಯ ಇಲ್ಲದ ಊರಿನಲ್ಲಿ ನಿಮ್ಮ ಅಗತ್ಯಗಳಿಗೆ ತಕ್ಕಂತೆ ಮನೆಯನ್ನು ಹುಡುಕುವುದು ಬಹಳ ಕಷ್ಟವಾಗಬಹುದು.
ನೀವೇನಾದರೂ ಮೊದಲ ಬಾರಿಗೆ ಮನೆಯನ್ನು ಬದಲಾಯಿಸುತ್ತಿದ್ದರೆ, ಮನೆ ಹುಡುಕುವುದು ಅಥವಾ ಹೊಂದಿಕೊಳ್ಳಲು ಕಷ್ಟವಾಗಬಹುದು. ಹಾಗಾಗಿ ನಾವಿಂದು ಮನೆಯನ್ನು ಹುಡುಕಲು ನಿಮಗೆ ಸಹಾಯ ಮಾಡುವ ಕೆಲವು ಒಳ್ಳೆಯ ಸಲಹೆಗಳನ್ನು ನೀಡುತ್ತಿದ್ದೇವೆ. ಇವು ನಿಮಗೆ ಹೊಸ ಮನೆಯನ್ನು ಹುಡುಕಲು ಸಹಾಯ ಮಾಡುತ್ತದೆ.
ಉತ್ತಮ ಸ್ಥಳ ಆಯ್ಕೆ ಮಾಡಿಕೊಳ್ಳಿ
ಮನೆ ಹುಡುಕುವಾಗ, ಅತ್ಯಂತ ಮುಖ್ಯವಾದ ವಿಷಯವೆಂದರೆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅದು ಕಚೇರಿ ಎಲ್ಲಿದೆ, ಮಕ್ಕಳ ಸ್ಕೂಲ್ ಎಷ್ಟು ದೂರದಲ್ಲಿದೆ ಎಂಬುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ, ನಿಮ್ಮ ಕಚೇರಿ ಅಥವಾ ಶಾಲೆಯಿಂದ ದೂರದಲ್ಲಿ ನೀವೇನಾದರೂ ಮನೆಯನ್ನು ಹೊಂದಿದರೆ, ಪ್ರಯಾಣ ಮಾಡಲು ತುಂಬಾ ಸಮಯ ಬೇಕಾಗುತ್ತದೆ. ಹಾಗಾಗಿ ಮನೆಯ ಹತ್ತಿರವೇ ಬಸ್ ನಿಲ್ದಾಣ, ಮೆಟ್ರೋ, ದಿನಸಿ ಅಂಗಡಿಗಳು, ವೈದ್ಯಕೀಯ ಅಂಗಡಿಗಳು, ಹತ್ತಿರದ ಆಸ್ಪತ್ರೆಗಳಂತಹ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.
ಸುರಕ್ಷಿತ ಪರಿಸರ
ನೀವು ಮನೆಯಲ್ಲಿ ವಾಸಿಸಬೇಕೆಂದರೆ, ಮೊದಲು ಸ್ಥಳದ ಸುರಕ್ಷತೆಯ ಬಗ್ಗೆ ಗಮನಹರಿಸುವುದು ಉತ್ತಮ. ಆ ಪ್ರದೇಶದಲ್ಲಿನ ಮನೆ, ಪರಿಸರ, ಸುರಕ್ಷಿತ ಬಗ್ಗೆ ಯೋಚಿಸಿ ನಿರ್ಧಾರ ತೆಗದುಕೊಳ್ಳಿ. ಆ ಸ್ಥಳ ಸುರಕ್ಷಿತವಾಗಿದಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ಅಂಶಗಳು ಸುರಕ್ಷತಾ ಮಾನದಂಡಗಳನ್ನು ಪೂರೈಸಿದರೆ, ಆ ಪ್ರದೇಶವು ನಿಮಗೆ ಸೂಕ್ತವಾಗಿರುತ್ತದೆ. ಇಲ್ಲದಿದ್ದರೆ, ನೀವು ಅನಗತ್ಯ ತೊಂದರೆಗೆ ಸಿಲುಕಬಹುದು.
ಬಜೆಟ್ ಕೂಡ ಮುಖ್ಯ
ನೀವು ಮನೆಯನ್ನು ಬಾಡಿಗೆಗೆ ಪಡೆಯುತ್ತಿದ್ದರೆ, ನಿಮ್ಮ ಬಜೆಟ್ ಅನ್ನು ಪರಿಗಣಿಸುವುದು ಮುಖ್ಯವಾಗಿರುತ್ತದೆ. ನಿಮ್ಮ ಬಾಡಿಗೆಯನ್ನು ನಿಮ್ಮ ಸಂಬಳದ 25 ರಿಂದ 30 ಪ್ರತಿಶತದಷ್ಟು ಇರಿಸಿಕೊಳ್ಳಲು ಪ್ರಯತ್ನಿಸಿ, ಇದಕ್ಕಿಂತ ಹೆಚ್ಚು ಖರ್ಚು ಮಾಡುವುದು ನಿಮ್ಮ ಬಜೆಟ್ನ್ನು ಮೀರಿಸುತ್ತದೆ. ಬಾಡಿಗೆಯ ಜೊತೆಗೆ ನೀವು ಠೇವಣಿಯನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ನೀವು ಸ್ವಲ್ಪ ವಿಚಾರ ಮಾಡಿ ಮನೆಯನ್ನು ಹುಡುಕಿ.
ಮನೆಯ ಭೌತಿಕ ತಪಾಸಣೆ
ಇತ್ತೀಚಿನ ದಿನಗಳಲ್ಲಿ, ಸಮಯದ ಅಭಾವದಿಂದಾಗಿ, ಜನರು ಹೆಚ್ಚಾಗಿ ಫೋಟೋಗಳನ್ನು ನೋಡಿ ಮನೆಗಳನ್ನು ಬುಕ್ ಮಾಡುತ್ತಾರೆ. ಆದಾಗ್ಯೂ, ಫೋಟೋಗಳನ್ನು ಅವಲಂಬಿಸಿ ಮನೆಗಳಿಗೆ ಹೋಗುವ ಬದಲು ನೀವೇ ಖುದ್ದಾಗಿ ಒಮ್ಮೆ ಮನೆಗೆ ಭೇಟಿ ನೀಡಿ ಮನೆಯ ವಾತಾವರಣವನ್ನು ನೋಡುವುದು ಉತ್ತಮ.
ಬಾಡಿಗೆ ಒಪ್ಪಂದದ ನಿಯಮಗಳು
ಪರಿಚಯವಿಲ್ಲದ ನಗರದಲ್ಲಿ ಕಾನೂನು ರಕ್ಷಣೆ ನಿರ್ಣಾಯಕವಾಗಿದೆ. ಮನೆ ಖರೀದಿಸುವಾಗ, ಬಾಡಿಗೆ ಒಪ್ಪಂದವನ್ನು ಮಾಡಿಕೊಳ್ಳುವುದು ಉತ್ತಮ. ಇದು ಮುಂದೆ ಆಗುವ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗೆಯೇ ಭವಿಷ್ಯದ ವಿವಾದಗಳನ್ನು ತಪ್ಪಿಸಲು ಮೌಖಿಕ ಒಪ್ಪಂದದ ಬದಲಿಗೆ ಲಿಖಿತ ಒಪ್ಪಂದವನ್ನು ಅವಲಂಬಿಸಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.