Alum For Skin ಸಾಂದರ್ಭಿಕ ಚಿತ್ರ
Alum For Skin: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮುಖದ ಚರ್ಮವನ್ನು ಆರೋಗ್ಯಕರವಾಗಿ, ಕಾಂತಿಯುತವಾಗಿ ಮತ್ತು ಹೊಳೆಯುವಂತೆ ಮಾಡಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಅತ್ಯಂತ ದುಬಾರಿ ಸೌಂದರ್ಯವರ್ಧಕ ಉತ್ಪನ್ನಗಳನ್ನು ಖರೀದಿಸುತ್ತಾರೆ. ಆದರೆ, ಇಂತಹ ದುಬಾರಿ ಪ್ರಾಡಕ್ಟ್‌ಗಳಿಂದ ತಾತ್ಕಾಲಿಕ ಹೊಳಪು ಸಿಕ್ಕರೂ, ದೀರ್ಘಾವಧಿಯಲ್ಲಿ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು. ಆದಾಗ್ಯೂ, ನಮ್ಮ ಹಿರಿಯರ ಕಾಲದಿಂದಲೂ ಬಳಸಲ್ಪಡುವ, ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುವ ಆಲಂ ಚರ್ಮದ ಸೌಂದರ್ಯಕ್ಕೆ ಒಂದು ರಾಮಬಾಣ ಎಂಬುದು ಹಲವರಿಗೆ ತಿಳಿದಿಲ್ಲ.
ಇದರ ಬ್ಯಾಕ್ಟೀರಿಯಾ ವಿರೋಧಿ ಗುಣವು ಚರ್ಮವನ್ನು ಬಿಗಿಗೊಳಿಸಲು ಮತ್ತು ಶುದ್ಧೀಕರಿಸಲು, ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ಇದು ಎಣ್ಣೆಯುಕ್ತತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆಲಂ ಚರ್ಮದ ಮೇಲಿನ ಪದರವನ್ನು ನಿಧಾನವಾಗಿ ಎಫ್ಫೋಲಿಯೇಟ್ ಮಾಡಿ, ಹೊಸ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹಾಗಿದ್ದರೆ, ಆಲಂನ್ನು ಯಾವುದರ ಜೊತೆ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಕಾಂತಿಯನ್ನು ಪಡೆಯಬಹುದು ಎಂದು ನೋಡೋಣ ಬನ್ನಿ....
1. ಆಲಂ ಮತ್ತು ರೋಸ್ ವಾಟರ್
ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕಲು ಹರಳೆಣ್ಣೆ ಮತ್ತು ರೋಸ್ ವಾಟರ್ ಒಂದು ಬಹಳ ಉಪಯುಕ್ತ ಸಾಧನವಾಗಿದೆ. ಮೊದಲು ಹರಳೆಣ್ಣೆಯನ್ನು ರೋಸ್ ವಾಟರ್ನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ನಂತರ ಇದನ್ನು ಮುಖಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ಚೆನ್ನಾಗಿ ಮಸಾಜ್ ಮಾಡಿ ನಂತರ ತೊಳೆಯಿರಿ. ಇದು ಮುಖದ ಅಂದವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
2. ಆಲಂ ಮತ್ತು ಮುಲ್ತಾನಿ ಮಿಟ್ಟಿ ಪೇಸ್ಟ್
ಚರ್ಮದ ಮೇಲಿನ ಕಲೆಗಳನ್ನು ತೆಗೆದುಹಾಕಲಿ ಹರಳೆಣ್ಣೆ ಆಲಂ ಪುಡಿ ಮತ್ತು ಮುಲ್ತಾನಿ ಮಿಟ್ಟಿಯನ್ನು ಬಳಸಬಹುದು. ಈ ಎರಡೂ ಮಿಶ್ರಣವನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ನಂತರ ಮುಖಕ್ಕೆ ಹಚ್ಚಿ 10-15 ನಿಮಿಷಗಳ ಕಾಲ ಬಿಡಿ. ಈ ಪೇಸ್ಟ್ನ್ನು ವಾರಕ್ಕೊಮ್ಮೆ ಹಚ್ಚುವುದರಿಂದ ಮುಖದಲ್ಲಾದ ಕಲೆಗಳು ಮಾಯವಾಗುತ್ತವೆ.
3. ಆಲಂ ಮತ್ತು ತೆಂಗಿನ ಎಣ್ಣೆ
ನಿಮ್ಮ ಚರ್ಮ ಒಣಗಿದ್ದರೆ, ತೆಂಗಿನ ಎಣ್ಣೆಯೊಂದಿಗೆ ಹರಳೆಣ್ಣೆಯನ್ನು ಬೆರೆಸಿ ನಿಮ್ಮ ಚರ್ಮದ ಮೇಲೆ ಹಚ್ಚಿ. ಮಿಶ್ರಣವನ್ನು ಹಚ್ಚಿದ ನಂತರ, 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ನೀರಿನಿಂದ ತೊಳೆಯಿರಿ ಕೆಲವು ದಿನಗಳವರೆಗೆ ಹೀಗೆ ಮಾಡುವುದರಿಂದ ಚರ್ಮವು ಮೃದುವಾಗುತ್ತದೆ.
4. ಆಲಂ ಮತ್ತು ಆಲೂಗಡ್ಡೆ
ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕಲು ಆಲಂ ಮತ್ತು ಆಲೂಗಡ್ಡೆಯನ್ನು ಬಳಸಬಹುದು. ಇದಕ್ಕಾಗಿ ಮೊದಲು ಆಲೂಗಡ್ಡೆ ರಸದೊಂದಿಗೆ ಸ್ಪಟಿಕದ ಪುಡಿಯನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದನ್ನು ಮುಖಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ ತೊಳೆಯಿರಿ. ಇದು ನಿಮ್ಮ ಮುಖದಲ್ಲಾಗಿರುವ ಕಪ್ಪು ಕಲೆಗಳನ್ನು ತೆಗೆಯಲು ಸಹಾಯ ಮಾಡುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.