ಲೈಫ್‌ಸ್ಟೈಲ್

ಸಂಜೆಗೆ ಬದನೆಕಾಯಿಯಿಂದ ಮಾಡಿದ ಈ ರೆಸಿಪಿ ಟ್ರೈ ಮಾಡಿ, ಟೇಸ್ಟಿಯಾಗಿರುತ್ತದೆ…

ಬೆಂಗಳೂರು: ಸಾಮಾನ್ಯವಾಗಿ ಸಂಜೆಯಾದರೆ ಪ್ರತಿಯೊಬ್ಬರೂ ಬಿಸಿ ಬಿಸಿಯಾದ ಮಸಾಲೆಯುಕ್ತ ತಿಂಡಿ ತಿನ್ನಲು ಬಯಸುತ್ತಾರೆ ಅಲ್ಲವೇ, ಹಾಗಾಗಿ ಇಲ್ಲಿ ಬದನೆಕಾಯಿಯಿಂದ ಮಾಡುವ ಸ್ಪೆಷಲ್ ರೆಸಿಪಿ ತೋರಿಸಿದ್ದೇವೆ. ಇದು ನಿಮಗೆ ತುಂಬಾ ಇಷ್ಟವಾಗುತ್ತದೆ. ಹಾಗಾದರೆ ಬನ್ನಿ ಅದನ್ನು ಮಾಡುವುದು ಹೇಗೆಂದು ತಿಳಿಯೋಣ...

ಬೇಕಾಗುವ ಸಾಮಗ್ರಿಗಳು
ಬದನೆಕಾಯಿ
ಕಡಲೆಹಿಟ್ಟು
ಗರಂ ಮಸಾಲ
ಕಾರದಪುಡಿ
ತರಕಾರಿ ಮಸಾಲಾ
ಉಪ್ಪು
ಎಣ್ಣೆ

ಮಾಡುವ ವಿಧಾನ
ಮೊದಲು ಕಡಲೆ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಸೇರಿಸಿ ಬೋಂಡಾದ ಹದಕ್ಕೆ ಕಲಸಿ. ರುಚಿಗೆ ತಕ್ಕಂತೆ ಉಪ್ಪು, ಕಾರದಪುಡಿ ಮತ್ತು ಗರಂ ಮಸಾಲಾ ಸೇರಿಸಿ. ನಂತರ, ಬದನೆಯನ್ನು ಉದ್ದನೆಯ ತುಂಡುಗಳಾಗಿ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಪ್ರತಿ ಬದನೆ ಕಾಯಿಯ ಹೋಳನ್ನು ತೆಗೆದುಕೊಂಡು ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಬಾಣಲೆಯಲ್ಲಿ ಹಾಕಿ ಹುರಿಯಿರಿ. ನಂತರ ಚಟ್ನಿಯೊಂದಿಗೆ ಸವಿಯಿರಿ.