ಬೆಂಗಳೂರು: ಎಲ್ಲ ದಿಕ್ಕುಗಳಲ್ಲೂ ಬೆಂಗಳೂರು ವಿಸ್ತಾರವಾಗುತ್ತಿದೆಯಾದರೂ ಉತ್ತರ ಬೆಂಗಳೂರಿನ ಯಲಹಂಕ ಸುತ್ತಮುತ್ತಲಿನ ಮೂಲಸೌಕರ್ಯ ವೃದ್ಧಿಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಗ್ರಾಹಕರು ಇತ್ತ ಹೆಚ್ಚು ಗಮನ ನೀಡುವ ಸಾಧ್ಯತೆಯಿದೆ.
ಮುಂದಿನ ಐದು ವರ್ಷಗಳಲ್ಲಿ ಹೆಬ್ಬಾಳ ಸೇರಿ ಸುತ್ತಲಿನ ಸ್ಥಳಗಳ ಕಚೇರಿ ಬಾಡಿಗೆ ದರದಲ್ಲಿ ಶೇ.140ವರೆಗೂ ಏರಿಕೆಯಾಗುತ್ತದೆ ಎಂದು ಸಮೀಕ್ಷೆಯೊಂದು 2019ರಲ್ಲಿ ತಿಳಿಸಿತ್ತು. ಮಾನ್ಯತಾ ಟೆಕ್ ಪಾರ್ಕ್ ಸೇರಿ ಸುತ್ತಲಿನ ಬಹುತೇಕ ಪ್ರದೇಶಗಳು ಐಟಿ ಹಬ್ ಆಗಿವೆ. ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಮಾತ್ರವಿದ್ದ ಅನೇಕ ಐಟಿ ಉದ್ಯಮಗಳು ಉತ್ತರ ಬೆಂಗಳೂರಿನತ್ತಲೂ ಆಕರ್ಷಿತವಾಗುತ್ತಿವೆ. ಮುಖ್ಯವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು ಉದ್ಯಮಿಗಳನ್ನು ಹೆಚ್ಚು ಸೆಳೆಯುತ್ತಿದೆ.
ಅಭಿವೃದ್ಧಿ ಮುನ್ಸೂಚನೆ: ಬಳ್ಳಾರಿ ರಸ್ತೆಯ ಆಸುಪಾಸಿನಲ್ಲಿ ಬರುವ ಉತ್ತರ ಬೆಂಗಳೂರು ಈಗಾಗಲೆ ಸಾಕಷ್ಟು ಬೆಳವಣಿಗೆ ಕಂಡಿದೆ. ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಪರಿಹರಿಸಲು ಫ್ಲೈಓವರ್ ಮಾಡಲಾಗಿದ್ದು, ಸಂಚಾರ ಸಾಕಷ್ಟು ಸಲೀಸಾಗಿದೆ. ಆದರೂ ದಿನದಿಂದ ದಿನಕ್ಕೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರ ಸಂಖ್ಯೆ ಏರುತ್ತಿರುವುದರಿಂದ ಮತ್ತೂ ಸಂಚಾರ ದಟ್ಟಣೆಯಾಗುತ್ತಿದೆ. ಇದಕ್ಕಾಗಿ ಏರ್ಪೋರ್ಟ್ ಮೆಟ್ರೊ ಕಾಮಗಾರಿಗೆ ಬಿಎಂಆರ್ಸಿಎಲ್ ಚಾಲನೆ ನೀಡಿದೆ. ಇದರಿಂದಾಗಿ ಹೆಬ್ಬಾಳ, ಕೆಂಪಾಪುರ, ಯಲಹಂಕ ಸೇರಿ ಅನೇಕ ಭಾಗಗಳಿಗೆ ಮೆಟ್ರೊ ಸಂಪರ್ಕ ಲಭಿಸುತ್ತದೆ. ಬಿಬಿಎಂಪಿ ವ್ಯಾಪ್ತಿಗೆ ಯಲಹಂಕ ಕ್ಷೇತ್ರದ ರಾಜಾನುಕುಂಟೆ, ಗಂಟಿಗಾನಹಳ್ಳಿ, ಸಿಂಗನಾಯಕನಹಳ್ಳಿ, ಶ್ರೀಕಂಠಪುರ, ಮಾದವಾರ ಪ್ರದೇಶಗಳು ಸೇರಲಿವೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅನುಮತಿ ಪಡೆದ ಅಪಾರ್ಟ್ವೆುಂಟ್ಗಳು, ಗೇಟೆಡ್ ಕಮ್ಯುನಿಟಿ ಲೇಔಟ್ಗಳು, ಸಾಮಾನ್ಯ ವರ್ಗಗಳ ಕೈಗೆಟುಕುವ ಲೇಔಟ್ಗಳು ಅಭಿವೃದ್ಧಿಯಾಗುತ್ತಿವೆ.
ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದೆ. ಗೃಹ ಮತ್ತು ನಿವೇಶನ ಖರೀದಿಸಲು ಜನರಿಗೆ ಇದು ಒಳ್ಳೆಯ ಸಮಯವಾಗಿದೆ. ನಿವೇಶನ ಮತ್ತು ಗೃಹಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ದೊರೆಯುವ ಅವಕಾಶವನ್ನು ಬಳಸಿಕೊಂಡು ಖರೀದಿಸುವ ಮೂಲಕ ನಿಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳಿ. ಖರೀದಿಸುವ ಮುನ್ನ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್ಡಿಎ) ಹಾಗೂ ರೇರಾ ಒಳಪಟ್ಟಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
| ಎಸ್. ಜಗದೀಶ್ವರ ರೆಡ್ಡಿ ಸಿಎಂಡಿ, ಜೆಆರ್ ಹೌಸಿಂಗ್ ಡೆವಲಪರ್ಸರ್ಸ್ ಪ್ರ ಲಿ.,
ಕರೊನಾ ಬಂದ ನಂತರ ರಿಯಲ್ ಎಸ್ಟೇಟ್ ಕ್ಷೇತ್ರ ಸುಧಾರಣೆಯಾಗುತ್ತಿದೆ. ಮನೆ ಖಾಲಿ ಮಾಡಿ ಊರಿಗೆ ತೆರಳಿರುವವರು ಹಾಗೂ ವರ್ಕ್ ಫ್ರಂ ಹೋಂ ಕೆಲಸ ಮಾಡುತ್ತಿರುವವರು ಮನೆಗಳನ್ನು ಹುಡುಕುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜನರು ಮನೆ ಹಾಗೂ ನಿವೇಶನಗಳ ಮೇಲೆ ಬಂಡವಾಳ ಹೂಡಲು ಮುಂದೆ ಬರುತ್ತಿದ್ದಾರೆ. ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿಸಬಹುದು ಎಂಬ ನೂತನ ಕಾಯ್ದೆ ತಿದ್ದುಪಡಿಯಿಂದ ಬಿಲ್ಡರ್ಗಳು ಸೇರಿ ಮತ್ತಿತರರಿಗೆ ಅನುಕೂಲವಾಗಿದೆ. ಇದೀಗ ಮನೆ ಸಾಲದ ಮೇಲಿನ ಬಡ್ಡಿ ಕಡಿಮೆಯಾಗಿದೆ. ಆದ್ದರಿಂದ, ಜನರು ಮನೆ ಮತ್ತು ನಿವೇಶನಗಳನ್ನು ಖರೀದಿಸಲು ಒಳ್ಳೆಯ ಸಮಯವಾಗಿದೆ.
| ಡಾ.ಎಸ್.ಪಿ. ದಯಾನಂದ್ ನಿರ್ದೇಶಕರು ಡಿಎಸ್ ಮ್ಯಾಕ್ಸ್.
ಮಹಾಮಾರಿ ಕರೊನಾ ನಡುವೆಯೇ ರಿಯಲ್ ಎಸ್ಟೇಟ್ ಕ್ಷೇತ್ರ ಚನ್ನಾಗಿ ನಡೆಯುತ್ತಿದೆ. ಹೊಸ ಫ್ಲ್ಯಾಟ್ಗಳ ಖರೀದಿಗೆ ಹೆಚ್ಚು ಖರೀದಿದಾರರು ಆಸಕ್ತಿ ತೋರುತ್ತಿದ್ದಾರೆ. ಮೈಸೂರು, ಸರ್ಜಾಪುರ, ತುಮಕೂರು ಮತ್ತಿತರರ ಕಡೆಗಳಲ್ಲಿ ಫ್ಲ್ಯಾಟ್ಗಳನ್ನು ಖರೀದಿಸಬಹುದು. ಈಗಾಗಲೇ ಸಾಕಷ್ಟು ಮಂದಿ ಭೇಟಿ ನೀಡಿ ಮುಂಗಡ ಬುಕಿಂಗ್ ಮಾಡುತ್ತಿದ್ದಾರೆ. ಮುಂದಿನ 2 ತಿಂಗಳಲ್ಲಿ ಕ್ಷೇತ್ರ ಮತ್ತಷ್ಟು ಸುಧಾರಿಸಲಿದೆ. ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ಮನೆಯ ಬಗ್ಗೆ ಪ್ರಾಮುಖ್ಯತೆ ಬಂದಿದೆ. ಆದ್ದರಿಂದ, ಹೊಸ ನಿವೇಶನ ಖರೀದಿಸಿ ಮನೆ ಕಟ್ಟಲು, ಮನೆ ಹಾಗೂ ಫ್ಲ್ಯಾಟ್ಗಳನ್ನು ಖರೀದಿಸಲು ಹೆಚ್ಚು ಖರೀದಿದಾರರು ಮುಂದೆ ಬರುತ್ತಿದ್ದಾರೆ.
| ಜಗನಾಥ್ ಜಕ್ಕ ಪ್ರಧಾನ ವ್ಯವಸ್ಥಾಪಕ ಕೆಎನ್ಎಸ್ ಇನ್ಫ್ರಾ.
ಕರೊನಾ ಬಂದ ಬಳಿಕ ಜನರಿಗೆ ಸ್ವಂತ ಮನೆ ಇರಬೇಕು ಎಂಬ ಆಲೋಚನೆ ಬಂದಿರುವ ಹಿನ್ನೆಲೆಯಲ್ಲಿ ನಿವೇಶನಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ನೆಲಮಂಗಲದಲ್ಲಿ ಸ್ಮಾರ್ಟ್ ಸಿಟಿ ಆಗುತ್ತಿರುವ ಹಿನ್ನೆಲೆಯಲ್ಲಿ ಆ ಭಾಗದ ಸುತ್ತಮುತ್ತ ಪ್ರದೇಶಗಳು ವೇಗವಾಗಿ ಬೆಳೆಯುತ್ತಿವೆ. ನಮ್ಮ ಲೇಔಟ್ನಲ್ಲಿ ಎಲ್ಲ ರೀತಿಯ ಮೂಲಸೌಕರ್ಯಗಳಿವೆ. ಖರೀದಿದಾರರು ನಿವೇಶನ ಖರೀದಿಸಿದರೆ ಬಡ್ಡಿ ರಹಿತ ಕಂತು ಕಟ್ಟಲು ಅವಕಾಶ ನೀಡಲಾಗುವುದು. ಒಂದು ಚದರ ಅಡಿ 499 ರೂ. ನಿಂದ ಆರಂಭವಾಗಲಿದೆ. 20/30, 30/40, 30/50 ಹಾಗೂ 40/60 ನಿವೇಶನಗಳು ಲಭ್ಯವಿದೆ.
| ಗೋಪಾಲ್ ಉಪಾಧ್ಯಕ್ಷ ಬಿಪಿ ಪ್ರಾಪರ್ಟಿಸ್.