Telangana Style Talimpu Annam
- ಬ್ಯಾಚುಲರ್ಸ್ ಸುಲಭವಾಗಿ ಮಾಡಿಕೊಳ್ಳಬಹುದಾದ ತೆಲಂಗಾಣ ಸ್ಪೈಸಿ ತಾಲಿಂಪು ಅನ್ನ.
- ತೆಲಂಗಾಣ ಸ್ಪೈಸಿ ತಾಲಿಂಪು ಅನ್ನ ಅಥವಾ ಒಗ್ಗರಣೆ ಹಾಕಿದ ಖಾರದ ಅನ್ನ ಮಾಡೋದು ಹೇಗೆ?.
- ಶೀತ, ಬಾಯಿ ರುಚಿಗೆ ತಿನ್ನಬೇಕೆನಿಸುವ ತೆಲಂಗಾಣ ಸ್ಪೈಸಿ ತಾಲಿಂಪು ಅನ್ನ.
ಬ್ಯಾಚುಲರ್ಸ್ಗೆ ಅಡುಗೆ ಮಾಡೋದೆ ಒಂದು ದೊಡ್ಡ ಕೆಲಸ ಹಾಗೆಯೇ ತಾತ್ಸಾರ. ಮನೆಯಲ್ಲಿ ತರಕಾರಿ ಇಲ್ಲದೆ, ತರಲು ಮನಸ್ಸಾಗದೆ. ಯಾವ ಅಡುಗೆ ಮಾಡೋದು ಎಂದು ತೋಚದೆ ಸಿಕ್ಕಾಪಟ್ಟೆ ಕನ್ಫ್ಯೂಷನ್ ಅಲ್ಲಿ ಇದ್ದಾಗ ನಿಮ್ಮ ಬಳಿ ಇರುವ ಕೆಲವೇ ಕೆಲವು ವಸ್ತುವಿನಿಂದ ಆಹಾರ ತಯಾರಿಸಬಹುದು. ಈ ದಿನ ಬ್ಯಾಚುಲರ್ಸ್ಗಾಗಿ ಅಂತಹ ಒಂದು ಸಿಂಪಲ್ ಅಡುಗೆಯ ರೆಸಿಪಿಯ ಮಾಹಿತಿ ಈ ಲೇಖನದಲ್ಲಿ ಇದೆ.
ಪ್ರತಿ ದಿನ ಡಯೆಟ್ ಫುಡ್, ಅನ್ನ ಸಾರು, ಚಿತ್ರನ್ನ ತಿಂದು ಬಾಯಿ ಕೆಟ್ಟೋಗಿದ್ದರೆ ಒಗ್ಗರಣೆ ಹಾಕಿದ ಖಾರದ ಅನ್ನವನ್ನು ಮಾಡಿ. ಇದು ರುಚಿಗೆ ಮಾತ್ರವಲ್ಲ ಶೀತ, ಕೆಮ್ಮು, ತಲೆನೋವು, ಜ್ವರದಿಂದ ಬಳಲುತ್ತಿದ್ದವರು ಒಮ್ಮೆ ಇದನ್ನು ಮಾಡಿ ರುಚಿ ಸವಿದರೆ ಸಾಕು ಮತ್ತೆ ಮತ್ತೆ ತಿನ್ನಬೇಕು ಎನ್ನುವ ಭಾವನೆಯನ್ನು ಮೂಡಿಸುತ್ತದೆ.
ಒಗ್ಗರಣೆ ಹಾಕಿದ ಖಾರದ ಅನ್ನ ಮಾಡಲು ಏನೇನು ಬೇಕು
1-2 ಕಪ್ ರಾತ್ರಿ ಉಳಿದ ಅನ್ನ ಅಥವಾ ಇಂದೇ ಬೇಯಿಸಿದ ಅನ್ನ
ರುಚಿಗೆ ತಕ್ಕಷ್ಟು ಉಪ್ಪ, ಅರಿಶಿನ
ಅನ್ನಕ್ಕೆ ಬೇಕಾದಷ್ಟು ಖಾರದ ಪುಡಿ
ಒಗ್ಗರಣೆ ಹಾಕಿದ ಖಾರದ ಅನ್ನ ತಯಾರಿ ಮಾಡೋದು ಹೇಗೆ?
ಮೊದಲಿಗೆ ಅನ್ನಕ್ಕೆ ಎಣ್ಣೆ, ಅರಿಶಿನ, ಉಪ್ಪು, ಖಾರ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಆನಂತರ ಬಾಂಡ್ಲಿಯನ್ನು ಒಲೆ ಮೇಲೆ ಇಟ್ಟು ಎಣ್ಣೆ ಕಾಯಲು ಬಿಡಿ. ಆನಂತರ ಅದಕ್ಕೆ ಸಾಸಿವೆ, ಅರಿಶಿನ, ಬೆಳ್ಳುಳ್ಳಿ ಕರಿಬೇವು, ಕಡಲೇಬೀಜ ಒಣ ಮೆಣಸು ಹಾಕಿ ಉರಿಯಿರಿ ಅವು ಕೆಂಪು ಬಣ್ಣಕ್ಕೆ ತಿರುಗಿದ ನಂತರ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಉರಿದುಕೊಳ್ಳಿ.. ಚೆನ್ನಾಗಿ ಫ್ರೈ ಆದ ಮಸಾಲೆಗೆ ಈಗ ಖಾರ ಮಿಶ್ರಣ ಮಾಡಿದ ಅನ್ನವನ್ನು ಹಾಕಿ ಒಂದೆರೆಡು ನಿಮಿಷ ಬೇಯಲು ಬಿಡಿ..ಆನಂತರ ಸಣ್ಣದಾಗಿ ಸ್ಲೈಸ್ ರೀತಿಯಲ್ಲಿ ಕಟ್ ಮಾಡಲಾದ ಈರುಳ್ಳಿಯನ್ನು ಹಾಕಿ ತಿನ್ನಿ.
ಆಂಧ್ರ ಮತ್ತು ತೆಲಂಗಾಣದಲ್ಲಿ ತ್ವರಿತವಾಗಿ ಮಾಡುವ ಮಸಾಲೆಯುಕ್ತ ಭಕ್ಷ್ಯ ಇದಾಗಿದೆ. ಇದರಲ್ಲಿ ಹಾಕುವ ಕಡಲೇ ಬೀಜ, ಬೆಳ್ಳುಳ್ಳಿ ಕರಿಬೇವು, ಶುಂಠಿ ಆರೋಗ್ಯಕ್ಕೆ ಪರೋಕ್ಷವಾಗಿ ಕೆಲಸ ಮಾಡುತ್ತದೆ. ಯಾವ ಆಹಾರ ತಯಾರಿ ಮಾಡಬೇಕು ಎಂದು ಕಾಯುತ್ತಾ ಕೂರುವ ಅಗತ್ಯವಿಲ್ಲ ಇರುವ ಸಾಮಾಗ್ರಿಯಲ್ಲೇ ರುಚಿಯಾದ ಆಹಾರವನ್ನು ಸವಿಯಬಹುದಾಗಿದೆ.